Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kinetic E-Luna: ಲಾಂಚ್ ಮಾಡಿದ ಕೈನೆಟಿಕ್! ಎಕ್ಸ್ ಶೋರೂಮ್ ಬೆಲೆ ₹69,990, 110 ಕಿಮೀ ಮೈಲೇಜ್ ಸಾಮರ್ಥ್ಯ.

ಕೈನೆಟಿಕ್ ಇವಿ ಮೊಪೆಡ್ ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದ್ದು, ಇವಿ ಮೊಪೆಡ್ ಎಕ್ಸ್1 ನ ಎಕ್ಸ್ ಶೋರೂಮ್ ಬೆಲೆ ₹69,990 ರೂಪಾಯಿಗಳು.

Kinetic E-Luna: ಕೈನೆಟಿಕ್ ಸಂಸ್ಥೆ ಹಲವು ವರ್ಷಗಳಿಂದ ಗ್ರಾಹಕರಿಗೆ ಇಷ್ಟ ಆಗುವಂಥ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ Kinetic Green ಸಂಸ್ಥೆಯು ಹೊಸದಾದ E-Luna Moped ಲಾಂಚ್ ಮಾಡಿದ್ದು, ಈ ಮೊಪೆಡ್ ಎರಡು ವಿಭಿನ್ನ ವೇರಿಯಂಟ್ ನಲ್ಲಿ ಲಭ್ಯಗಿದೆ. ಹಾಗೆಯೇ ಗ್ರಾಹಕರು ಖರೀದಿ ಮಾಡಬಹುದಾದ ಬೆಲೆಗೆ ಲಭ್ಯವಿದೆ. ಈ ಹೊಸ ಇವಿ ಮೊಪೆಡ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ..

Kinetic Green E-Luna:

ಕೈನೆಟಿಕ್ ಇವಿ ಮೊಪೆಡ್ ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದ್ದು, ಇವಿ ಮೊಪೆಡ್ ಎಕ್ಸ್1 ನ ಎಕ್ಸ್ ಶೋರೂಮ್ ಬೆಲೆ ₹69,990 ರೂಪಾಯಿಗಳು. ಇವಿ ಮೊಪೆಡ್ ನ ಎಕ್ಸ್2 ಎಕ್ಸ್ ಶೋರೂಮ್ ಬೆಲೆ ₹74,990 ರೂಪಾಯಿ ಆಗಿರುತ್ತದೆ. ಈ ಮೊಪೆಡ್ ಗಳಲ್ಲಿ 2kvh ಬ್ಯಾಟರಿ ಜೊತೆಗೆ 1.2kv ಹಬ್ ಮೌಂಟ್ ಆಗಿರುವ ಮೋಟರ್ ಸೇರಿಸಲಾಗಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, 110 ಕಿಮೀ ಮೈಲೇಜ್ ಸಾಮರ್ಥ್ಯ ಹೊಂದಿದೆ. ಈ ಮೊಪೆಡ್ ನ ಸ್ಪೀಡ್ ಅನ್ನು 50kmph ಇಡಲಾಗಿದೆ. ಪ್ರತಿದಿನ ಓಡಾಡುವವರಿಗೆ ಇದು ಒಳ್ಳೆಯ ಆಯ್ಕೆ.

Ev Moped Battery:

ಕೈನೆಟಿಕ್ ಇವಿ ಮೊಪೆಡ್ ಗಳ ಬ್ಯಾಟರಿ ಪೂರ್ತಿ ಚಾರ್ಜ್ ಆಗುವುದಕ್ಕೆ 4 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಇದರಲ್ಲಿ ಇನ್ನಷ್ಟು ಆಕರ್ಷಕ ವಿಶೇಷತೆಗಳಿದ್ದು, Telescopic Front Section Setup ಹಾಗೂ 16 ಇಂಚ್ ಚಕ್ರಗಳನ್ನು ನೀಡಲಾಗಿದೆ. ವಾಹನದ ಸೆಕ್ಯೂರಿಟಿಗಾಗಿ ಸೈಡ್ ಸ್ಟ್ಯಾಂಡ್, ಸೆನ್ಸಾರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್, ಫ್ರಂಟ್ ಲೆಗ್ ಗಾರ್ಡ್, ಬ್ಯಾಕ್ ಹುಕ್, ಕಾಂಬ್ರಿ ಬ್ರೇಕಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ.

3 Riding Mode:

ಈ ಹೊಸ ಇವಿ ಬೈಕ್ ಗಳಲ್ಲಿ ಕೈನೆಟಿಕ್ ಗ್ರೀನ್ ಸಂಸ್ಥೆಯು ಮೂರು ವಿವಿಧ ರೈಡಿಂಗ್ ಮೋಡ್ ಗಳನ್ನು ನೀಡಿದೆ. USB Charging Port ಸಹ ಇದೆ. ಈ ಬೈಕ್ ನ ತೂಕ 96 ಕೆಜಿ ಆಗಿರುತ್ತದೆ. ಈ ಬೈಕ್ ನಲ್ಲಿ ಬ್ಯಾಕ್ ಸೀಟ್ ತೆಗೆದು ಲಗೇಜ್ ಇಡುವುದಕ್ಕೆ ಕೂಡ ಬಳಸಬಹುದು. ಇಷ್ಟೆಲ್ಲ ಸೌಲಭ್ಯಗಳು ಈ ಬೈಕ್ ನಲ್ಲಿ ಕಂಡುಬಂದಿದೆ.

ಹೆಚ್ಚಿನ ವಿಶೇಷತೆ:

ಕೈನೆಟಿಕ್ ಇವಿ ಮೊಪೆಡ್ ನ ಮುಖ್ಯ ವಿಶೇಷತೆ ಕೇವಲ 10 ಪೈಸೆ ಖರ್ಚಿನಲ್ಲಿ 1ಕಿಮೀ ವರೆಗು ಪ್ರಯಾಣ ಮಾಡಬಹುದು. ಈ ಕಾರಣಕ್ಕೆ ಈ ಬೈಕ್ ಗಳು ಹೆಚ್ಚು ಸೇಲ್ಸ್ ಆಗುವ ಸೂಚನೆ ಇದ್ದು, ಈಗಾಗಲೇ ಕೈನೆಟಿಕ್ ಸಂಸ್ಥೆ ತಿಂಗಳಿಗೆ ₹5000 ಮೊಪೆಡ್ ಗಳ ತಯಾರಿಕೆ ನಡೆಸುತ್ತಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಗಳಿಗೆ ಕಾಂಪಿಟೇಶನ್ ನೀಡುತ್ತದೆ. ಕೈನೆಟಿಕ್ ಗ್ರೀನ್ ಇವಿ ಮೊಪೆಡ್ ಖರೀದಿ ಮಾಡಲು ಬಯಸುವವರು 500 ರೂಪಾಯಿ ಕೊಟ್ಟು ಪ್ರೀ ಬುಕ್ ಮಾಡಬಹುದು.

Kinetic E-Luna launched; check the price, features, mileage, and variant details.

Leave a comment