Kia Car Problem : ಕಿಯಾ ಸಂಸ್ಥೆಯ ಈ ಕಾರ್ ಖರೀದಿ ಮಾಡಿರುವವರಿಗೆ ಬ್ಯಾಡ್ ನ್ಯೂಸ್! ಕೂಡಲೇ ಕಾರ್ ಹಿಂದಿರುಗಿಸಬೇಕು!
Kia Seltos Petrol Car: ಕಿಯಾ ಸೆಲ್ಟೋಸ್ ಪೆಟ್ರೋಲ್ ಕಾರ್ ಗಳನ್ನು 4358 ಯೂನಿಟ್ ಗಳಷ್ಟು ಕಾರ್ ಅನ್ನು ಹಿಂಪಡೆಯಲು ಕಿಯಾ ಸಂಸ್ಥೆ ನಿರ್ಧಾರ ಮಾಡಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.
Kia Car Problem : ಪ್ರಸ್ತುತ ಭಾರತದ ಆಟೋಮೊಬೈಲ್ಸ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಹೆಸರು ಮಾಡಿರುವ ಕಾರ್ Kia ಸಂಸ್ಥೆಯ ಕಾರ್ ಗಳು. ಈ ಸಂಸ್ಥೆಯು ಹೊಸ ಫೀಚರ್ಸ್ ಇರುವ ಹೊಸ ಮಾಡೆಲ್ ಕಾರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿರುವ ಅಡ್ವಾನ್ಸ್ಡ್ ಟೆಕ್ನಾಲಜಿ ಮತ್ತು ಫೀಚರ್ಸ್ ಇಂದ, ಗ್ರಾಹಕರನ್ನು ಸೆಳೆಯುತ್ತಿದೆ. ಕಿಯಾ ಕಾರ್ ನ ಬೇರೆ ಮಾಡೆಲ್ ಗಳಿಗಿಂತ Kia Seltos ಮಾಡೆಲ್ ನ ಕಾರ್ ಗೆ ಹೆಚ್ಚು ಬೇಡಿಕೆ ಎಂದರೆ ತಪ್ಪಲ್ಲ..
Kia Car Problem
ದಿನದಿಂದ ದಿನಕ್ಕೆ Kia Seltos ನ ಕಾರ್ ಗಳ ಬುಕಿಂಗ್ ಹಾಗೂ ಖರೀದಿ ಜಾಸ್ತಿಯಾಗುತ್ತಿದೆ. ಜನರು ಇಷ್ಟಪಟ್ಟು ಕಿಯಾ ಸೆಲ್ಟೋಸ್ ಕಾರ್ ಖರೀದಿ ಮಾಡುವ ವೇಳೆ ಕಂಪನಿ ಕಡೆಯಿಂದ ಒಂದು ಶಾಕಿಂಗ್ ನ್ಯೂಸ್ ಹೊರಬಂದಿದೆ. ಅದು ಏನು ಎಂದರೆ, ಭಾರತದಲ್ಲಿ ಕಿಯಾ ಸಂಸ್ಥೆಯ ಕೆಲವು ಕಾರ್ ಗಳನ್ನು ವಾಪಸ್ ಪಡೆಯಲು ಸಂಸ್ಥೆ ನಿರ್ಧರಿಸಿದೆ. ಕಾರ್ ಓನರ್ ಗಳಿಗೆ ಇದು ಶಾಕ್ ನೀಡಿದ್ದು, ನಮ್ಮ ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ, ಕಿಯಾ ಸೆಲ್ಟೋಸ್ ಕಾರ್ ನ ಪೆಟ್ರೋಲ್ ವೇರಿಯಂಟ್ ಅನ್ನು ವಾಪಸ್ ಪಡೆಯುವ ನಿರ್ಧಾರ ಮಾಡಲಾಗಿದೆ. ಆದರೆ ಇದ್ದಕ್ಕಿದ್ದಂತೆ ಕಿಯಾ ಸಂಸ್ಥೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ.
Kia Seltos Petrol Car:
ಕಿಯಾ ಸೆಲ್ಟೋಸ್ ಪೆಟ್ರೋಲ್ ಕಾರ್ ಗಳನ್ನು 4358 ಯೂನಿಟ್ ಗಳಷ್ಟು ಕಾರ್ ಅನ್ನು ಹಿಂಪಡೆಯಲು ಕಿಯಾ ಸಂಸ್ಥೆ ನಿರ್ಧಾರ ಮಾಡಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಈ ಬಗ್ಗೆ ಖುದ್ದು ಕಿಯಾ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕಿದ್ದು, ಕಿಯಾ ಸಂಸ್ಥೆ ಈಗ Kia Seltos SUV ಅನ್ನು ಲಾಂಚ್ ಮಾಡುವುದಕ್ಕೆ ಮುಂದಾಗಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 10.90 ಲಕ್ಷದಿಂದ 20.30 ಲಕ್ಷದವರೆಗೂ ಇರಲಿದೆ. SUV ನಲ್ಲಿ HTE, HTC HTC Plus, HTX ಸೇರಿದ ಹಾಗೆ ಇನ್ನು ಬೇರೆ ಬೇರೆ ವೇರಿಯಂಟ್ ಗಳಲ್ಲಿ SUV ಲಾಂಚ್ ಆಗಲಿದೆ. ಹಾಗೆಯೇ ಕಲರ್ ಆಯ್ಕೆ ಕೂಡ ಹೆಚ್ಚಾಗಿದ್ದು, Silver, Clear White, Geavity Grey, Puter Olive, Arora Black Pearl, Galcier White Pearl ಹಾಗೂ ಇನ್ನಿತರ ಆಯ್ಕೆಗಳಲ್ಲಿ ಲಭ್ಯವಿರಲಿದೆ. .
Kia Seltos Engine Specifications:
ಕಿಯಾ ಸೆಲ್ಟೋಸ್ ಕಾರ್ ನಲ್ಲಿ 1.5L ಪೆಟ್ರೋಲ್, 1.5 ಕೀಟರ್ ಟರ್ಬೋ ಪೆಟ್ರೋಲ್, 1.5 ಲೀಟರ್ ಡೀಸೆಲ್ ಇಂಜಿನ್ ಇದೆ. ಹಾಗೆಯೇ ಇದರಲ್ಲಿ 6 ಸ್ಪೀಡ್ ಮ್ಯಾನುವಲ್/ಆಟೊಮ್ಯಾಟಿಕ್, CVT, 7 ಸ್ಪೀಡ್ ಡ್ಯುಯೆಲ್ ಕ್ಲಚ್ ಟ್ರಾನ್ಸ್ಮಿಷನ್ (DCT), ಗೇರ್ ಬಾಕ್ಸ್ ಆಪ್ಶನ್ಸ್ ಹೊಂದಿದೆ. ಈ ಕಾರ್ ನ ಮೈಲೇಜ್ ವೇರಿಯಂಟ್ ಗಳ ಮೇಲೆ ಡಿಪೆಂಡ್ ಆಗಿದ್ದು, 17 ಇಂದ 20.7 kmpl ಮೈಲೇಜ್ ನೀಡಲಿದೆ. ಈ ಎಲ್ಲಾ ಒಳ್ಳೆಯ ಫೀಚರ್ಸ್ ಹೊಂದಿರುವ ಕಾರ್ ಅನ್ನು ವಾಪಸ್ ಪಡೆಯುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಈಗ ಉತ್ತರ ತಿಳಿಸುತ್ತೇವೆ..
ಕಿಯಾ ಸೆಲ್ಟೋಸ್ ಕಾರ್ ಹಿಂಪಡೆಯುವಿಕೆ:
ಕಿಯಾ ಸೆಲ್ಟೋಸ್ ಕಾರ್ ನ ಆಯಿಲ್ ಪಂಪ್ ಕಂಟ್ರೋಲ್ ನಲ್ಲಿ ಕೆಲವು ಸಮಸ್ಯೆಗಳು ಎದುರಾಗಿದೆ ಎಂದು ತಿಳಿದುಬಂದಿದೆ. ಅದನ್ನು ಸರಿಪಡಿಸುವ ಸಲುವಾಗಿ ಕಿಯಾ ಸೆಲ್ಟೋಸ್ ಕಾರ್ ಅನ್ನು ವಾಪಸ್ ಪಡೆಯುವ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ..ಈ ಬಗ್ಗೆ ಖುದ್ದು ಕಿಯಾ ಸಂಸ್ಥೆ ಇಂದ ಮಾಹಿತಿ ಸಿಕ್ಕಿದ್ದು, 2023ರ ಫೆಬ್ರವರಿ 28 ಮತ್ತು 2023ರ ಜುಲೈ 13 ಈ ದಿನಾಂಕಗಳ ಒಳಗೆ ತಯಾರಾಗಿದ್ದು, 1.5 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ಕಾರ್ ಗಳನ್ನು ವಾಪಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ವಾಹನ ಸವಾರರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Ki Seltos Car will be taken back by the company because of the Engine problem.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.