BPL Ration Card : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕೊನೆಗೂ ಕಾಲ ಕೂಡಿ ಬಂತು! ಸರ್ಕಾರದಿಂದ ಹೊಸ ಅಪ್ಡೇಟ್!
ಯಾರೆಲ್ಲಾ ಈಗಾಗಲೇ ಅರ್ಜಿ ಸಲ್ಲಿಸಿ, ರೇಷನ್ ಕಾರ್ಡ್ ವಿತರಣೆಗಾಗಿ ಕಾಯುತ್ತಿದ್ದಾರೋ ಅಂಥವರೆಲ್ಲರಿಗೂ ಕೂಡ ರೇಷನ್ ಕಾರ್ಡ್ ಅರ್ಜಿಗಳನ್ನು ಶೀಘ್ರದಲ್ಲೇ ಪರಿಶೀಲಿಸಿ, ಮಾರ್ಚ್ 31ರ ಒಳಗೆ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಾಗಿ ಆಹಾರ ಇಲಾಖೆ ಇಂದ ಮಾಹಿತಿ ಸಿಕ್ಕಿದೆ.
BPL Ration Card: ನಮ್ಮ ದೇಶದ ಬಡಜನತೆಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸರ್ಕಾರ ಅವರಿಗೆ ರೇಷನ್ ಕಾರ್ಡ್ ಗಳ ವಿತರಣೆ ಮಾಡುತ್ತದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್, ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಸರ್ಕಾರದಿಂದ ವಿವಿಧ ರೀತಿಯ ಸೌಲಭ್ಯಗಳನ್ನು ರೇಷನ್ ಕಾರ್ಡ್ ಇರುವವರು. ಪಡೆಯಬಹುದು.
BPL Ration Card
ಅದರಲ್ಲೂ ಬಿಪಿಎಲ್ ಕಾರ್ಡ್ ಇದ್ದರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ, ಹಣಕಾಸಿನ ಸಹಾಯ, ಅನಾರೋಗ್ಯ ಚಿಕಿತ್ಸೆಗೆ ಸಹಾಯ, ಹಲವು ಕೆಲಸಗಳಲ್ಲಿ ಕನ್ಶಿಶನ್ ಇಂಥ ಹಲವು ಸೌಲಭ್ಯಗಳನ್ನು ಬಿಪಿಎಲ್ ರೇಷನ್ ಕಾರ್ಡ್ ಇರುವವರು ಪಡೆಯಬಹುದು. ಅದರಲ್ಲು ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಆದರೆ ಹಲವು ಜನರ ಬಳಿ ಬಿಪಿಎಲ್ ರೇಶನ್ ಕಾರ್ಡ್ ಇಲ್ಲದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಆಗುತ್ತಿಲ್ಲ. ಅಂಥವರು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಸಿದ್ಧವಾಗಿದ್ದಾರೆ. ಅಷ್ಟೇ ಅಲ್ಲದೇ, ಈಗಾಗಲೇ 2.95 ಲಕ್ಷದಷ್ಟು ಜನರು ಚುನಾವಣೆಗಿಂತ ಮೊದಲೇ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು ಅವರಿಗೆಲ್ಲಾ ಇನ್ನು ಕೂಡ ಹೊಸ ರೇಷನ್ ಕಾರ್ಡ್ ಸಿಕ್ಕಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಈಗ ಸರ್ಕಾರದಿಂದಲೇ ಹೊಸ ಅಪ್ಡೇಟ್ ಒಂದು ಬಂದಿದೆ.
ಶೀಘ್ರದಲ್ಲೇ ರೇಷನ್ ಕಾರ್ಡ್ ವಿತರಣೆ:
ಯಾರೆಲ್ಲಾ ಈಗಾಗಲೇ ಅರ್ಜಿ ಸಲ್ಲಿಸಿ, ರೇಷನ್ ಕಾರ್ಡ್ ವಿತರಣೆಗಾಗಿ ಕಾಯುತ್ತಿದ್ದಾರೋ ಅಂಥವರೆಲ್ಲರಿಗೂ ಕೂಡ ರೇಷನ್ ಕಾರ್ಡ್ ಅರ್ಜಿಗಳನ್ನು ಶೀಘ್ರದಲ್ಲೇ ಪರಿಶೀಲಿಸಿ, ಮಾರ್ಚ್ 31ರ ಒಳಗೆ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಾಗಿ ಆಹಾರ ಇಲಾಖೆ ಇಂದ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲದೇ, ತುರ್ತು ಪರಿಸ್ಥಿತಿಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಕೂಡ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
Also Read: BPL Card Benefits : ಬಿಪಿಎಲ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ ಈ ಎಲ್ಲಾ ಪ್ರಯೋಜನ! ತಡ ಮಾಡದೆ ಪಡೆಯಿರಿ!
ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು?
*ಇತ್ತೀಚೆಗೆ ಮದುವೆಯಾಗಿ ಹೊಸದಾಗಿ ಫ್ಯಾಮಿಲಿ ಶುರು ಮಾಡಿರುವವರು.
*ಮದುವೆಯ ಬಳಿಕ ಸೆಪರೇಟ್ ಆಗಿ ಬಂದಿರುವವರು.
*ಫ್ಯಾಮಿಲಿ ಇಂದ ದೂರ ಆಗಿರುಗ ಗಂಡ ಹೆಂಡತಿ.
*ರೇಷನ್ ಕಾರ್ಡ್ ಇದ್ದು, ಮನೆಯಿಂದ ದೂರವಾಗಿರುವ ದಂಪತಿಗಳು. ಇವರೆಲ್ಲರೂ ಸಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು..
ರೇಷನ್ ಕಾರ್ಡ್ ಅಪ್ಡೇಟ್ ಗೆ ಪರ್ಮಿಶನ್:
ಯಾರೆಲ್ಲಾ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದುಕೊಂಡಿದ್ದೀರೋ ಅಂಥವರಿಗೆ ಕೂಡ ಸರ್ಕಾರದಿಂದ ಹೊಸ ಅವಕಾಶ ಸಿಗುತ್ತಿದೆ. ರೇಷನ್ ಕಾರ್ಡ್ ಗೆ ಹೊಸಬರ ಹೆಸರು ಸೇರಿಸಲು, ತಪ್ಪುಗಳನ್ನು ಸರಿಪಡಿಸಲು, ಅಡ್ರೆಸ್ ಚೇಂಜ್ ಮಾಡಲು, ಇದಕ್ಕೆಲ್ಲ ಹೊಸದಾಗಿ ಅವಕಾಶ ಕೊಡಲಾಗಿದೆ. ತಿದ್ದುಪಡಿ ಮತ್ತು ಹೊಸ ಅರ್ಜಿ ಎರಡನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಈ ಎರಡು ಕೆಲಸಗಳನ್ನು ಮಾಡಲು, ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಹಾಗೂ ಇನ್ನಿತರ ಸರ್ಕಾರಿ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಹಾಕಬಹುದು. ಆನ್ಲೈನ್ ಪೋರ್ಟಲ್ ಗಳು ಇಂತಿಷ್ಟು ಸಮಯದವರೆಗು ಮಾತ್ರ ಓಪನ್ ಇರಲಿದ್ದು, ಆ ಸಮಯದ ಒಳಗೆ ಅರ್ಜಿ ಸಲ್ಲಿಸಬಹುದು.
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.
Also Read: Government News : ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಸರ್ಕಾರ! ಈ ರೀತಿ ಮಾಡಿ ಪ್ರಯೋಜನ ಪಡೆಯಿರಿ!