Pink WhatsApp: ಪಿಂಕ್ ಕಲರ್ ವಾಟ್ಸಪ್ ಬಳಸುವವರಿಗೆ ಪೊಲೀಸರಿಂದ ಎಚ್ಚರಿಕೆಯ ಸಂದೇಶ, ಮೊದಲು ಇದನ್ನು ತಿಳಿಯಿರಿ.
ಇದು ಒಂದು ಹ್ಯಾಕ್ ಮಾಡುವ ಅಪ್ಲಿಕೇಶನ್ ಆಗಿದ್ದು. ಜನರ ಮೊಬೈಲ್ ಡೇಟಾವನ್ನೂ ಕದ್ದು ಮಾರಾಟ ಮಾಡುವ ಅಪ್ಲಿಕೇಶನ್ ಆಗಿದೆ.
Pink WhatsApp: ವಾಟ್ಸಾಪ್ (WhatsApp) ಭಾರತದ 60% ಜನರಿಗೂ ಹೆಚ್ಚು ಜನ ದಿನನಿತ್ಯ ಬಳಸುವ ಆ್ಯಪ್. ಪುಟ್ಟ ಮಕ್ಕಳಿಂದ 80 ವರ್ಷ ವಯಸ್ಸಿನ ವರು ಸಹ ವಾಟ್ಸಾಪ್ ಬಳಕೆ ಮಾಡುತ್ತಾ ಇದ್ದಾರೆ. ದೇಶ ವಿದೇಶಗಳ ಜನರ ಬಳಿ ನಿತ್ಯ ವೀಡಿಯೋ ಕಾಲ್ ಮೂಲಕ ಮಾತನಾಡಲು ಬಹಳ ಅನುಕೂಲವಾಗಿದೆ. ವಾಟ್ಸಾಪ್ ಅಪ್ಲಿಕೇಶನ್( WhatsApp Application) ಬಿಡುಗಡೆ ಆಗಿ ಕೆಲವೇ ವರುಷಗಳು ಕಳೆದರೂ ಅದು ಬಹುಬೇಗ ಜನರಿಗೆ ಹತ್ತಿರವಾಗಿದೆ.
ಆದರೆ ಈಗ ಡುಪ್ಲಿಕೇಟ್ ನೋಟು ( Duplicate Note) ಇದ್ದಂತೆಯೇ ಡುಪ್ಲಿಕೇಟ್ ವಾಟ್ಸಾಪ್( Duplicate WhatsApp) ಆ್ಯಪ್ ಸಹ ಬಿಡುಗಡೆ ಆಗಿದೆ. ಇದು ಜನರನ್ನು ಆಕರ್ಷಣೆ ಮಾಡುವಂಥ ವಿವಿಧ ರೀತಿಯ ಫ್ಯೂಚರ್ (Futures) ಗಳನ್ನ ಹೊಂದಿದೆ. ಆದರೆ ಇದು ಡೇಂಜರ್ ಅಪ್ಲಿಕೇಶನ್ (Danger Application) ಎಂದು ಕರ್ನಾಟಕ ಪೊಲೀಸರು (Karnataka Police) ಎಚ್ಚರಿಕೆ ನೀಡಿದ್ದಾರೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಏನಿದು ಪಿಂಕ್ ಕಲರ್ (Pink WhatsApp) ವಾಟ್ಸಾಪ್ ಅಪ್ಲಿಕೇಶನ್?
ಇದು ಒಂದು ಹ್ಯಾಕ್ ಮಾಡುವ ಅಪ್ಲಿಕೇಶನ್ ಆಗಿದ್ದು. ಜನರ ಮೊಬೈಲ್ ಡೇಟಾವನ್ನೂ ಕದ್ದು ಮಾರಾಟ ಮಾಡುವ ಅಪ್ಲಿಕೇಶನ್ ಆಗಿದೆ. ನೋಡಲು ಒರಿಜಿನಲ್ ಅಪ್ಲಿಕೇಶನ್ ತರವೇ ಕಾಣುವ ಈ ಅಪ್ಲಿಕೇಷನ್ ನಮ್ಮ ಮೊಬೈಲ್ ನಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಿ ಅದರಿಂದ ನಮ್ಮ ವಯಕ್ತಿಕ ಮಾಹಿತಿಗಳನ್ನು (Personal Information) ಪಡೆದು ನಮ್ಮ ಬ್ಯಾಂಕ್ ಖಾತೆಯ ಹಣ ಹಾಗೂ ನಮ್ಮ ಬಳಿ ಯಾವುದಾದರೂ ಮುಖ್ಯವಾದ ಡಾಕ್ಯುಮೆಂಟ್ಸ್ ಗಳು ಇದ್ದರೆ ಅದನ್ನು ಕಳ್ಳತನ ಮಾಡುವ ಸಾಧ್ಯತೆ ಹೆಚ್ಚಿದೆ.
ಇದನ್ನು ಓದಿ:- Fair Price Shop: ಎಲ್ಲಿಯೂ ಬೇಡ, ನಿಮ್ಮ ಊರಿನಲ್ಲಿಯೇ ನೂತನ ನ್ಯಾಯಬೆಲೆ ಅಂಗಡಿ ಓಪನ್ ಮಾಡಲು ಅವಕಾಶ ಈಗಲೇ ಅಪ್ಲಿಕೇಶನ್ ಹಾಕಿ.
ಮೊಬೈಲ್ ಹ್ಯಾಕಿಂಗ್ (Mobile hacking) ಇಂದ ಬಳಕೆದಾರರಿಗೆ ಆಗುವ ಅನಾನುಕೂಲಗಳು:-
- ಮೊಬೈಲ್ ಹ್ಯಾಕ್ ಆದರೆ ನಮ್ಮ ಮೊಬೈಲ್ ನಲ್ಲಿ ಇರುವ ಪರ್ಸನಲ್ ಮೆಸೇಜ್ ಹಾಗು ಫೋಟೋ ಗಳು ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
- ನಮ್ಮ ಆನ್ಲೈನ್ ವ್ಯವಹಾರಗಳು( Online Transactions ) ಉದಾಹರಣೆ ಫೋನ್ ಪೇ( PhonePe) ಗೂಗಲ್ ಪೇ (Google Pay) ಪಾಸ್ವರ್ಡ್ ಗಳು ಅವರಿಗೆ ತಿಳಿದು ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಪೂರ್ತಿಯಾಗಿ ಕಳ್ಳತನ ಮಾಡಬಹುದು.
- ಬ್ಯಾಂಕ್ ಖಾತೆಯ ಮಾಹಿತಿಗಳು ಸುಲಭವಾಗಿ ಕಳ್ಳರ ಕೈಯಲ್ಲಿ ಸಿಕ್ಕಿದ ಹಾಗೆ ಆಗುತ್ತದೆ.
- ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ( Contact list) ನಲ್ಲಿ ಇರುವ ವ್ಯಕ್ತಿಗಳ ನಂಬರ್ ಅವರಿಗೆ ಸಿಕ್ಕು ಅವರನ್ನು ಬ್ಲ್ಯಾಕ್ಮೇಲ್ ಮಾಡುವ ಸಾಧ್ಯತೆ ಇರುತ್ತದೆ.
ಇದನ್ನು ಓದಿ:- Bar License: ಇಷ್ಟುದಿನ ಕೇಳಿದ್ದೆಲ್ಲ ಬರಿ ಸುಳ್ಳು, ಬಾರ್ ಲೈಸೆನ್ಸ್ ಪಡೆಯುವ ಸುಲಭ ವಿಧಾನ ಇಲ್ಲಿದೆ ನೋಡಿ, ಹೇಗೆ ಗೊತ್ತೇ??
ಸೈಬರ್ ಕ್ರೈಂ (Cyber Crime) ಆದರೆ ಏನು ಮಾಡಬೇಕು?
ಪಿಂಕ್ ವಾಟ್ಸಾಪ್ ಅಪ್ಲಿಕೇಶನ್ ಅಥವಾ ಯಾವುದೇ ಫೇಕ್ ಅಪ್ಲಿಕೇಶನ್ (Fake Applications) ಗಳು ಬಳಸಿ ಅದರಿಂದ ನಿಮಗೆ ಏನಾದರೂ ತೊಂದರೆ ಅದಲ್ಲಿ ನೀವು ಸಹಾಯವಾಣಿ ಕೇಂದ್ರ 1093 ಗೆ ಫೋನ್ ಮಾಡಲು ಪೊಲೀಸ್ ಇಲಾಖೆ ತಿಳಿಸಿದೆ.
A warning message from the police to users of pink WhatsApp
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.