Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Google Location: ನಿಮ್ಮ ಲೊಕೇಶನ್ ಅನ್ನು ಗೂಗಲ್ ನಲ್ಲಿ ಸೇರಿಸುವುದು ಹೇಗೆ ಈ ಒಂದು ಸಿಂಪಲ್ ವಿಧಾನ ಸಾಕು !!

Google Location: ಸ್ನೇಹಿತರೆ ನಮ್ಮಲ್ಲಿ ಎಷ್ಟೋ ಜನರಿಗೆ ಲೊಕೇಶನ್ ಅನ್ನೋದು ಗೂಗಲ್ ಮ್ಯಾಪ್ (Google map) ನಲ್ಲಿ ಹೇಗೆ ಆಡ್ ಮಾಡಿಕೊಳ್ಳುವುದು ತಿಳಿದಿರುವುದಿಲ್ಲ. ಅದನ್ನು ನಾವು ಹೇಗೆ ಎಂದು ತಿಳಿಸುತ್ತೇವೆ ಬನ್ನಿ ಹಾಗಿದ್ದರೆ ಹೇಗೆ ಎಂದು ತಿಳಿಯೋಣ.ಸ್ನೇಹಿತರೆ ಇತ್ತೀಚಿನಲ್ಲಿ ಎಲ್ಲವೂ ಗೂಗಲ್ ಮತ್ತು ಇಂಟರ್ನೆಟ್ ಆಗಿರುವುದರಿಂದ ಒಂದು ಮನುಷ್ಯ ಎಲ್ಲಿಂದ ಎಲ್ಲಿಯವರೆಗೂ ಬೇಕಾದರೂ ಸಂಚರಿಸಬಹುದು.

ಆಗಿನ ಕಾಲದಲ್ಲಿ ಇಂಟರ್ನೆಟ್ ನ (Internet) ಬಳಕೆ ಹಾಗೂ ಮ್ಯಾಪ್ ನ ಬಳಕೆ ಇಲ್ಲದಿದ್ದ ಕಾರಣದಿಂದ ಗೊತ್ತಿರುವ ಜನರನ್ನು ಕೇಳಿ ತಲುಪ ಬೇಕಾಗಿದ್ದ ಸ್ಥಳಕ್ಕೆ ತಲುಪುತ್ತಿದ್ದೇವು. ಆದರೆ ಈಗ ಹಾಗಿಲ್ಲ ಒಬ್ಬ ಮನುಷ್ಯ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಯಾವ ರಸ್ತೆ ಮಾರ್ಗಗಳಿಂದ ಆದರೂ ತಲುಪಬಹುದು. ಅದಕ್ಕಾಗಿಯೇ ಗೂಗಲ್ ಮ್ಯಾಪ್ ಅನ್ನು ಎಲ್ಲಾ ಆಂಡ್ರಾಯ್ಡ್ ಮೊಬೈಲ್ (Android mobile) ಗಳಲ್ಲಿ ನೀಡಲಾಗಿದೆ.

ಎಷ್ಟೋ ಜನರು ಅದನ್ನು ಬಳಸುತ್ತಿದ್ದಾರೆ. ಹಾಗಿದ್ದರೆ ನಿಮಗೆ ಯಾವುದೇ ಒಂದು ರೀತಿಯ ಬುಸಿನೆಸ್ (Business) ಆಗಿರಬಹುದು ಅಥವಾ ಸ್ಕೂಲ್ ಕಾಲೇಜ್ (College) ಅಥವಾ ಯಾವುದೇ ರೀತಿಯ ಇನ್ಸ್ಟಿಟ್ಯೂಶನ್ (Institution) ನೀವು ನಡೆಸುತ್ತಿದ್ದರೆ ಅದರ ವಿಷಯಗಳನ್ನು ನೀವು ನಿಮ್ಮ ಗೂಗಲ್ ಮ್ಯಾಪ್ ನಲ್ಲಿ ಆಡ್ ಮಾಡಲು ಇಚ್ಚಿಸುತ್ತಿದ್ದರೆ ಈ ವಿಷಯ ನಿಮಗಾಗಿಯೇ.

ಸ್ನೇಹಿತರೆ ಇದು ತುಂಬಾ ಸುಲಭವಾದ ವಿಷಯ ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿರುವ ಗೂಗಲ್ ಮ್ಯಾಪ್ ಅನ್ನು ಓಪನ್ ಮಾಡಬೇಕು. ನಂತರ ಅಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಆಡ್ ಟು ಪ್ಲೇಸ್ (Add to place ) ಎಂಬ ಅಪ್ಲಿಕೇಶನ್ ಅನ್ನು ಓಪನ್ ಮಾಡಬೇಕು. ನಂತರ ಅಲ್ಲಿ ಕೆಟಗರಿಯನ್ನು (Category) ಚೂಸ್ ಮಾಡಬೇಕು ಅಂದರೆ ನೀವು ಶಾಲೆಯ ಬಗ್ಗೆ ಆದರೆ ಶಾಲೆ ಎಂದು ಕಾಲೇಜಿನ ಬಗ್ಗೆ. ಕಾಲೇಜ್ ಬಗ್ಗೆ ಆದರೆ ಕಾಲೇಜ್ ಎಂದು ಅಥವಾ ಹಾಸ್ಪಿಟಲ್ (Hospital), ಕಂಪನಿ ಯಾವುದೇ ರೀತಿಯ ಹೆಸರು ಅಥವಾ ಸಂಸ್ಥೆ ಗಳನ್ನು ನೀವು ಅಲ್ಲಿ ಮೆನ್ಷನ್ ಮಾಡಬಹುದು.

ನಂತರ ಆ ಇನ್ಸ್ಟಿಟ್ಯೂಟ್ ಎಷ್ಟು ದಿನ ಓಪನ್ ಆಗಿರುತ್ತದೆ. ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು. ಹಾಗೆ ಟೈಮಿಂಗ್ಸ್ ಕೇಳುತ್ತದೆ ಟೈಮಿಂಗ್ಸ್ ಕೂಡ ಅಲ್ಲಿ ಹಾಕಬೇಕು ಹಾಗೂ ಕಂಪನಿಯ ಯಾವುದೇ ರೀತಿಯ ಫೋಟೋಗಳನ್ನು ಬೇಕಾದರೂ ಅಲ್ಲಿ ಅಪ್ಲೈ ಮಾಡಿಕೊಳ್ಳಬಹುದು. ನಂತರ ಮೊಬೈಲ್ ನಂಬರ್ (Mobile number) ಅನ್ನು ಎಂಟ್ರಿ ಮಾಡಬೇಕು ಹಾಗೆಯೇ ಆ ಇನ್ಸ್ಟಿಟ್ಯೂಟ್ ಗೆ ಕೊಟ್ಟ ಅಥವಾ ಅದಕ್ಕೆ ಇರುವಂತಹ ಅಫಿಶಿಯಲ್ ವೆಬ್ಸೈಟ್ (Official website) ಹಾಕಬೇಕು. ಈ ಎಲ್ಲವನ್ನು ಹಾಕಿದ ನಂತರ ಡನ್ ಎಂಬ ಚಿನ್ನೆಯು ಬರುತ್ತದೆ ಅದನ್ನು ಓಕೆ ಮಾಡಿದ ನಂತರ ಗೂಗಲ್ ಅದನ್ನು ಪರಿಶೀಲಿಸಿ ಲೊಕೇಶನ್ ಅನ್ನು google ಮ್ಯಾಪ್ ಗೆ ಆಡ್ ಮಾಡಿಕೊಳ್ಳುತ್ತದೆ.

How to add your location to Google: this one simple method is enough!

Leave a comment