Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

BSNL : Vodafone ಸಹಯೋಗದಲ್ಲಿ ಅಬ್ಬರ ಸೃಷ್ಟಿಸಲು ತಯಾರಾದ BSNL, Airtel Jio ಹಿಂದಿಕ್ಕಲು ಮಾಸ್ಟರ್ ಪ್ಲಾನ್!

ದಿನದಿಂದ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಬಳಕೆ ಮಾಡುವವರ ಸಂಖ್ಯೆ ಕಡಿಮೆಯೇ ಆಗುತ್ತಾ ಬರುತ್ತಿದೆ. ಈ ಕಾರಣಕ್ಕೆ ಇದೀಗ ಈ ಸಂಸ್ಥೆ ತಮ್ಮ ಗ್ರಾಹಕರ ಸಂಖ್ಯೆ ಜಾಸ್ತಿಯಾಗಬೇಕು, ಹಳೆಯ ಗ್ರಾಹಕರು ಸಹ ತಮ್ಮ ಸಂಸ್ಥೆಗೆ ವಾಪಸ್ ಬರಬೇಕು ಎಂದು ಬಿ.ಎಸ್.ಎನ್.ಎಲ್ ಸಂಸ್ಥೆಯು ಒಳ್ಳೆಯ ಮಾಸ್ಟರ್ಪ್ ಪ್ಲಾನ್ ಒಂದನ್ನು ಮಾಡಿದೆ.

BSNL : ನಮ್ಮ ದೇಶದ ಸರ್ಕಾರವೇ ನಡೆಸಿಕೊಂಡು ಬರುತ್ತಿರುವ ಟೆಲಿಕಾಂ ಸಂಸ್ಥೆ BSNL. ಈ ಸಂಸ್ಥೆಯು ಒಂದು ಕಾಲದಲ್ಲಿ ನಮ್ಮ ದೇಶದ ಎಲ್ಲೆಡೆ ಪಸರಿಸಿತ್ತು. ಬಿ.ಎಸ್.ಎನ್.ಎಲ್ ನೆಟ್ವರ್ಕ್ ಎಲ್ಲಾ ಸಿಟಿಗಳಿಂದ ಹಿಡಿದು, ಹಳ್ಳಿ ಹಳ್ಳಿಗಳಲ್ಲಿ ಕೂಡ ವ್ಯಾಪ್ತಿಯನ್ನು ಕಂಡುಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಟೆಲಿಕಾಂ ಕಂಪೆನಿಗಳಾದ Airtel, Jio ಪ್ರಾಬಲ್ಯ ಎಲ್ಲಾ ಕಡೆ ಜಾಸ್ತಿ ಆಗಿದೆ. ಹೆಚ್ಚಿನ ಜನರು ಏರ್ಟೆಲ್ ಮತ್ತು ಜಿಯೋ ಸಿಮ್ ಬಳಸುವವರೇ ಆಗಿದ್ದಾರೆ..

BSNL

ಈ ಕಾರಣದಿಂದ ಬಿ.ಎಸ್.ಎನ್.ಎಲ್ ತೆರೆಮರೆಗೆ ಸರಿದು ಹೋಗಿದೆ ಎಂದು ಹೇಳಿದರೆ ತಪ್ಪಲ್ಲ. ದಿನದಿಂದ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಬಳಕೆ ಮಾಡುವವರ ಸಂಖ್ಯೆ ಕಡಿಮೆಯೇ ಆಗುತ್ತಾ ಬರುತ್ತಿದೆ. ಈ ಕಾರಣಕ್ಕೆ ಇದೀಗ ಈ ಸಂಸ್ಥೆ ತಮ್ಮ ಗ್ರಾಹಕರ ಸಂಖ್ಯೆ ಜಾಸ್ತಿಯಾಗಬೇಕು, ಹಳೆಯ ಗ್ರಾಹಕರು ಸಹ ತಮ್ಮ ಸಂಸ್ಥೆಗೆ ವಾಪಸ್ ಬರಬೇಕು ಎಂದು ಬಿ.ಎಸ್.ಎನ್.ಎಲ್ ಸಂಸ್ಥೆಯು ಒಳ್ಳೆಯ ಮಾಸ್ಟರ್ಪ್ ಪ್ಲಾನ್ ಒಂದನ್ನು ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಹೊಸ ಪ್ಲಾನ್ ಜಾರಿಗೆ ಬರಲಿದೆ.

Vodafone-Idea ಜೊತೆಗೆ ಹೊಸ ಪ್ಲಾನ್:

ಬಿ.ಎಸ್.ಎನ್.ಎಲ್ ನಲ್ಲಿ 4G ವ್ಯವಸ್ಥೆ ಕಡಿಮೆ, ಹಾಗಾಗಿ ಜನರು ಬಿ.ಎಸ್.ಎನ್.ಎಲ್ ಬಿಟ್ಟು 5G, 4G ನೆಟ್ವರ್ಕ್ ಇರುವ ಬೇರೆ ಟೆಲಿಕಾಂ ಸಿಮ್ ಗಳನ್ನು ಬಳಸುತ್ತಿದ್ದಾರೆ. ಇದೀಗ ಅವರೆಲ್ಲರನ್ನು ತಮ್ಮ ಹತ್ತಿರಕ್ಕೆ ಸೆಳೆಯಲು ಬಿ.ಎಸ್.ಎನ್.ಎಲ್ ಹೊಸ ಪ್ಲಾನ್ ಮಾಡಿದ್ದು, ತಮ್ಮ 4G ನೆಟ್ವರ್ಕ್ ಅನ್ನು ಇಡೀ ದೇಶಾದ್ಯಂತ ವಿಸ್ತರಣೆ ಮಾಡಬೇಕು ಎಂದು ನಿರ್ಧಾರ ಮಾಡಿದೆ. ಇದಕ್ಕಾಗಿ ವೊಡಾಫೋನ್ ಐಡಿಯಾ ಜೊತೆಗೆ ಸಹಯೋಗ ಮಾಡಿಕೊಳ್ಳಲಿದೆ. ಬೇರೆ ಟೆಲಿಕಾಂ ಕಂಪನಿಗಳಿಗಿಂತ, ವೊಡಾಫೋನ್ ಐಡಿಯಾ ಸಂಸ್ಥೆಯ ಜೊತೆಗೆ ಸರ್ಕಾರ 33.1% ಪಾಲು ಹೊಂದಿದೆ. ಹಾಗಾಗಿ ಸರ್ಕಾರ ಮನಸ್ಸು ಮಾಡಿದರೆ ವೊಡಾಫೋನ್ ಐಡಿಯಾ ಸಂಸ್ಥೆಯ 4G ನೆಟ್ವರ್ಕ್ ಅನ್ನು ಬಿ.ಎಸ್.ಎನ್.ಎಲ್ ಗೆ ಬಳಸಿಕೊಳ್ಳಬಹುದು. ಇದರ ಬಗ್ಗೆ ಈಗ ಅಧಿಕೃತವಾಗಿ ಅಧಿಸೂಚನೆ ನೀಡಲಾಗುತ್ತದೆ ಎಂದು ಹೇಳಲಾಗಿದೆ..

ಸರ್ಕಾರಕ್ಕೆ ಮನವಿ ಸಲ್ಲಿಕೆ:

ಬಿ.ಎಸ್.ಎನ್.ಎಲ್ ಗ್ರಾಹಕರು ಕ್ಷೀಣಿಸುತ್ತಿದೆ ಎಂದು ಬಿ.ಎಸ್.ಎನ್.ಎಲ್ ನ ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿ, ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಐಟಿ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಈ ಪತ್ರವನ್ನು ಬರೆಯಲಾಗಿದ್ದು, ಈ ಪತ್ರದಲ್ಲಿ ದೇಶದ ಎಲ್ಲಾ ಕಡೆ ಬಿ.ಎಸ್.ಎನ್.ಎಲ್ 4G ನೆಟ್ವರ್ಕ್ ಇಲ್ಲ ಎಂದು ಹೇಳಲಾಗಿದ್ದು, ವೊಡಾಫೋನ್ ಐಡಿಯಾ ನೆಟ್ವರ್ಕ್ ಬಳಸುವುದಕ್ಕೆ ಸರ್ಕಾರ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಏಕೆಂದರೆ ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ 33.1% ಪಾಲು ಸರ್ಕಾರದ್ದಾಗಿದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಲಾಗಿದೆ..

ಈಗ ಎಲ್ಲರೂ ಕೂಡ 5G ನೆಟ್ವರ್ಕ್ ಮೊರೆ ಹೋಗುತ್ತಿದ್ದಾರೆ. BSNL ನಲ್ಲಿ 4G ನೆಟ್ವರ್ಕ್ ಕೂಡ ಇಲ್ಲ. ಇತ್ತ ಏರ್ಟಲ್ ಮತ್ತು ಜಿಯೋ ಉತ್ತಮವಾದ 5G ಸೇವೆ ಒದಗಿಸುತ್ತಿರುವ ಕಾರಣ ಜನರು ಬಿ.ಎಸ್.ಎನ್.ಎಲ್ ಬಿಟ್ಟು ಏರ್ಟೆಲ್ ಜಿಯೋ ಮೂಲಕ 5G ಸೇವೆ ಪಡೆಯಲು ಮುಂದಾಗುತ್ತಿದ್ದಾರೆ. ಬಿ.ಎಸ್.ಎನ್.ಎಲ್ ಬಿಟ್ಟು ಹೋಗುತ್ತಿದ್ದಾರೆ, ಹಾಗಾಗಿ ಜನರಿಗೆ ಬಿ.ಎಸ್.ಎನ್.ಎಲ್ ಹೊಸ ಸೇವೆ ಒದಗಿಸಬೇಕು, 4G ಸೇವೆ ನೀಡಿದರೆ ಗ್ರಾಹಕರು ಹೋಗುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Also Read: Apple Vision Pro: Apple ನಿಂದ ಅತ್ಯಂತ ನಿರೀಕ್ಷಿತ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್: ದಿ ವಿಷನ್ ಪ್ರೊ

Leave a comment