Amrit Mahotsav : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್! ಇಂದೇ ಅರ್ಜಿ ಸಲ್ಲಿಸಿ
ರಾಜ್ಯ ಸರ್ಕಾರವು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ, ಅವರ ಶಿಕ್ಷಣಕ್ಕೆ ಸಹಾಯ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಗುತ್ತದೆ.
Amrit Mahotsav : ರಾಜ್ಯ ಸರ್ಕಾರವು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ, ಅವರ ಶಿಕ್ಷಣಕ್ಕೆ ಸಹಾಯ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ. ಶಿಕ್ಷಣ ನೀತಿಯಲ್ಲಿ ಆಗಿರುವ ಬದಲಾವಣೆ ಜೊತೆಗೇ, ಅಮೃತ್ ಮಹೋತ್ಸವ್ ಯೋಜನೆಯ ಅಡಿಯಲ್ಲಿ ಇನ್ನಷ್ಟು ಸೌಲಭ್ಯ ಸಿಗಲಿದೆ..
Amrit Mahotsav
2022-23 ನೇ ವರ್ಷದಲ್ಲಿ ಪಾಲಿಕೆಯ ಅಮೃತ ಮಹೋತ್ಸವದ ಶುಭ ಸಮಯದಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡುವುದಕ್ಕೆ ಮುಂದಾಗಿದೆ. ಅಮೃತ ಮಹೋತ್ಸವದ ಅಡಿಯಲ್ಲಿ ಚೆನ್ನಾಗಿ ಓದುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಇರುವ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅರ್ಹತೆ ಇರುವ ಅಭ್ಯರ್ಥಿಗಳು ಉಚಿತ ಲ್ಯಾಪ್ ಟಾಪ್ ಯೋಜೆನೆಗೆ ಅಪ್ಲೈ ಮಾಡಬಹುದು.
BBMP ಇಂದ ಅಮೃತ ಮಹೋತ್ಸವ ಯೋಜನೆ:
ಇದು ಬೆಂಗಳೂರು ಮಹಾನಗರ ಪಾಲಿಕೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕೆ ತಂದಿರುವ ಯೋಜನೆ ಆಗಿದೆ. ಅರ್ಹತೆ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದು, ನಿಮಗೂ ಕೂಡ ಅರ್ಹತೆ ಇದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈಗ ಅಮೃತ್ ಮಹೋತ್ಸವ ಯೋಜನೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಿ, ಡಾಕ್ಯುಮೆಂಟ್ ಅಪ್ಲೋಡ್ ಮಾಡಲು ಹೆಚ್ಚಿನ ಸಮಯವಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಮೊದಲಿಗೆ ನೀವು ಬಿಬಿಎಂಪಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಇದು https://welfare.bbmpgov.in/ ಅಧಿಕೃತ ವೆಬ್ಸೈಟ್ ಆಗಿದೆ. ಈಗಾಗಲೇ ಅಪ್ಲಿಕೇಶನ್ ಹಾಕಿದ್ದರೆ, ಅಪ್ಲಿಕೇಶನ್ ನಂಬದ್, ಫೋನ್ ನಂಬರ್ ಹಾಕಿ ವೆಬ್ಸೈಟ್ ಗೆ ಲಾಗಿನ್ ಆಗುವ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಏನಿದೆ, ನಿಮಗೆ ಲ್ಯಾಪ್ ಟಾಪ್ ಸಿಗುತ್ತಾ ಎಂದು ಚೆಕ್ ಮಾಡಬಹುದು. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ತರುವ ಈ ಯೋಜನೆಯ ಅನುಕೂಲವನ್ನು ಎಲ್ಲರೂ ಪಡೆದುಕೊಳ್ಳಿ.
ಹಾಗೆಯೇ ಅಕಸ್ಮಾತ್ ಅಪ್ಲಿಕೇಶನ್ ಹಾಕುವಾಗ ಏನಾದರು ತಪ್ಪಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಸಮಯ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಅಪ್ಲಿಕೇಶನ್ ತಿದ್ದುಪಡಿ ಮಾಡಿಕೊಳ್ಳಬಹುದು. ಉಚಿತ ಲ್ಯಾಪ್ ಟಾಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 19 ಆಗಿತ್ತು, ಆದರೆ ಈಗ ದಿನಾಂಕ ವಿಸ್ತರಣೆ ಆಗಿದ್ದು, ಫೆಬ್ರವರಿ 29 ಕೊನೆಯ ದಿನಾಂಕ ಆಗಿದೆ. ಈ ದಿನಾಂಕದ ಒಳಗೆ ವಿದ್ಯಾರ್ಥಿಗಳು ಅಮೃತ ಮಹೋತ್ಸವ ಯೋಜನೆಗೆ ಅರ್ಜಿ ಸಲ್ಲಿಸಬಹುದು.
Also Read: BPL Ration Card : 2.95 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್! ಯಾವಾಗ ಗೊತ್ತಾ?