Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kawasaki Z650RS : ಅಂತೂ ಇಂತೂ ಲಾಂಚ್ ಆಯ್ತು Kawasaki Z650RS ಬೈಕ್! ₹7 ಲಕ್ಷದ ಬೈಕ್ ಫೀಚರ್ಸ್ ಹೇಗಿದೆ?

ಬೈಕ್ ಗಳ ವಿಚಾರಕ್ಕೆ ಬಂದರೆ, ಬೈಕ್ ಪ್ರಿಯರನ್ನು ಆಕರ್ಷಿಸುವ ಕಂಪನಿಗಳಲ್ಲಿ ಪ್ರಮುಖವಾದದ್ದು ಕವಾಸಕಿ. ಇದು ಜಪಾನ್ ಮೂಲಕ ಬೈಕ್ ತಯಾರಿಕೆ ಸಂಸ್ಥೆ ಆಗಿದ್ದು, ಅಧ್ಭುತವಾದ ಬೈಕ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿದೆ.

Kawasaki Z650RS : ಬೈಕ್ ಗಳ ವಿಚಾರಕ್ಕೆ ಬಂದರೆ, ಬೈಕ್ ಪ್ರಿಯರನ್ನು ಆಕರ್ಷಿಸುವ ಕಂಪನಿಗಳಲ್ಲಿ ಪ್ರಮುಖವಾದದ್ದು ಕವಾಸಕಿ. ಇದು ಜಪಾನ್ ಮೂಲಕ ಬೈಕ್ ತಯಾರಿಕೆ ಸಂಸ್ಥೆ ಆಗಿದ್ದು, ಅಧ್ಭುತವಾದ ಬೈಕ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿದೆ. ಇದೀಗ ಈ ಸಂಸ್ಥೆ Kawasaki Z650RS ಬೈಕ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ಈ ಬೈಕ್ ನ ಸ್ಪೆಷಾಲಿಟಿ?
ಫೀಚರ್ಸ್ ಹೇಗಿದೆ ಗೊತ್ತಾ? ತಿಳಿಸುತ್ತೇವೆ ನೋಡಿ..

Kawasaki Z650RS

ಈ ಬೈಕ್ ನ ಬೆಲೆ ₹6.99 ಲಕ್ಷದಿಂದ ಶುರುವಾಗಲಿದೆ. ಕಳೆದ ವರ್ಷದ ಮಾಡೆಲ್ ಗಿಂತ ₹7000 ರೂಪಾಯಿ ಕಡಿಮೆ ಆಗಿದೆ. ಈ ಬೈಕ್ ಅಪ್ಪಟವಾದ ರೆಟ್ರೋ ಸ್ಟೈಲ್ ಬೈಕ್ ಆಗಿದ್ದು, ಎಲ್ಲಾ ಯುವಕರನ್ನು ಆಕರ್ಷಿಸುತ್ತಿದೆ. ಈ ಬೈಕ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ,
Kawasaki Z650RS ಬೈಕ್ ನಲ್ಲಿ 650 CC Inline Twin Engine ಹೊಂದಿದೆ. ಈ ಬೈಕ್ ನ ಪ್ರಮುಖ ವಿಶೇಷತೆ ಏನು ಎಂದರೆ, ಈ ಬೈಕ್ ನಲ್ಲಿ Traction Control System ಅನ್ನು ಅಳವಡಿಸಲಾಗಿದೆ. ಇದು ಬೈಕ್ ಸವಾರರಿಗೆ ಥ್ರಿಲ್ಲಿಂಗ್ ಅನುಭವ ನೀಡಲಿದ್ದು, ಎರಡು ಮೋಡ್ ಗಳನ್ನು ಹೊಂದಿದೆ.

ಇದರ ಮೊದಲ ಮೋಡ್ ನಲ್ಲಿ ಕಡಿಮೆ Intervention ಜೊತೆಗೆ ಉತ್ಸಾಹಭರಿತ ಅನುಭವ ನೀಡುತ್ತದೆ. ಎರಡನೇ ಮೋಡ್ ಬೈಕ್ ಸವಾರನ ಮೇಲೆ ಕೂಡ ಗಮನ ಹರಿಸಿ, ಇದರಿಂದ ರೋಡ್ ಗಳು ಒದ್ದೆ ಇದ್ದರೂ, ಮಳೆ ಇದ್ದರು ಬೈಕ್ ರೈಡ್ ಮಾಡುವುದಕ್ಕೆ ಸಹಾಯ ಆಗಲಿದೆ. ಟೆಕ್ನಿಕಲಿ ಹೆಚ್ಚು ಅಪ್ಡೇಟ್ಸ್ ಇರುವುದರ ಜೊತೆಗೆ, ಈ ಬೈಕ್ ನಲ್ಲಿ Trellis Frame ಇದೆ. ರೆಟ್ರೋ ರೋಡ್ ಸ್ಟರ್ ಡಿಸೈನ್ ಹೊಂದಿದ್ದು, ಇದರಲ್ಲಿ ರೌಂಡ್ ಹೆಡ್ ಲೈಟ್, ಉತ್ತಮವಾದ ಟ್ಯಾಂಕ್, ಹಾಗೂ ಕಂಫರ್ಟಬಲ್ ಆಗಿರುವ ಸಿಂಗಲ್ ಸೀಟ್ ಹೊಂದಿದೆ.

ಹಾಗೆಯೇ ಈ ಬೈಕ್ ನಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊಶಾಕ್ ಒಳಗೊಂಡಿದೆ, ಎರಡು ಕಡೆ ಡಿಸ್ಕ್ ಬ್ರೇಕ್ ಇದ್ದು, ಡ್ಯುಯೆಲ್ ಚಾನೆಲ್ ABS ಸಹ ಹೊಂದಿದೆ. 17 ಇಂಚ್ ಗಳ ಚಕ್ರದಲ್ಲಿ ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ LCD ಸ್ಕ್ರೀನ್ ಹೊಂದಿದೆ.

Kawasaki Z650RS Engine Features:

ಈ ಬೈಕ್ ನ ಇಂಜಿನ್ ವಿಶೇಷತೆ ಬಗ್ಗೆ ಹೇಳುವುದಾದರೆ, ಇದರಲ್ಲಿ 649 CC liquid cooled, parallel twin engine ಇದ್ದು, ಇದರ ಜೊತೆಗೆ 68bhp ಪವರ್ ಜೊತೆಗೆ 65Nm ಟಾರ್ಕ್ ಉತ್ಪಾದನೆ ಮಾಡುತ್ತದೆ.. ಬೈಕ್ ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಇದೆ. ಇದು Kawasaki Z650RS ಬೈಕ್ ನ ವಿಶೇಷ ಇಂಜಿನ್ ವ್ಯವಸ್ಥೆ ಆಗಿದೆ.

Kawasaki Z650RS ಇನ್ನಿತರ ಫೀಚರ್ಸ್;

ಈ ಬೈಕ್ ವಿಶೇಷವಾಗಿ Ebony Metallic Matte Carbon Copy Gray Color Scheme ಹೊಂದಿಡ್ಡಿ, ಇದರ ಜೊತೆಗೆ ರೆಟ್ರೋ ಫೀಲ್ ನೀಡಲಾಗುತ್ತದೆ. Triumph Trident 660 ಬೈಕ್ ಗೆ ಈ ಬೈಕ್ ಕಾಂಪಿಟೇಶನ್ ಕೊಡಲಿದ್ದು, ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ.

Also Read: Top5 Fastest Cars : ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಟಾಪ್ 5 ಕಾರ್ ಗಳು ಯಾವುವು?

Leave a comment