Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹೇಗಿತ್ತು ಗೊತ್ತಾ ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರ ಲೈಫ್ ಸ್ಟೋರಿ, ಅವರ ಮದುವೆ ಆಗಿದ್ದು ಈ ರೀತಿ.

Spandana and Vijay Raghavendra life Story:ಮಡದಿ ಎಂದರೆ ಜೀವ ಕೊಡುತ್ತಿದ್ದ ವಿಜಯ ರಾಘವೇಂದ್ರ ಅವರ ಪತ್ನಿಯ ಜೀವವನ್ನೇ ಇಂದು ಆ ದೇವರು ತೆಗೆದುಕೊಂಡು ಬಿಟ್ಟಿದ್ದಾನೆ. ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಕ್ಕೆ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ದರು ಆದರೆ ವಿಧಿ ಅವರಿಗೆ ಆ ಟ್ರಿಪ್ ನಲ್ಲಿ ಅವರ ಕೊನೆ ಉಸಿರನ್ನು ತೆಗೆದುಕೊಂಡು ಬಿಡುತ್ತದೆ. ಮಲಗಿದ ಸ್ಪಂದನ ಅವರು ಮತ್ತೆ ಮೇಲೆ ಹೇಳೆಲೇ ಇಲ್ಲ.

ಅಮ್ಮ ಟ್ರಿಪ್ ಮುಗಿಸಿಕೊಂಡು ನನಗೆ ಗಿಫ್ಟ್ ತರುತ್ತಾರೆ ಎಂದು ಕಾಯುತ್ತಿದ್ದ ಮಗನಿಗೆ ಅಮ್ಮ ಇನ್ನಿಲ್ಲ ಎಂಬ ಸುದ್ದಿಯನ್ನು ಆರಗಿಸಿಕೊಳ್ಳಲು ಆಗುತ್ತಿಲ್ಲ. ಹೆಂಡತಿಯ ಜೊತೆಗೆ ಒಂದೆರಡು ದಿನಗಳ ಕಾಲ  ಟ್ರಿಪ್ ಹೋಗೋಣ ಎಂದು ಹೇಳಿ ಹೊರಟಿದ್ದ ವಿಜಯ ರಾಘವೇಂದ್ರ ಅವರಿಗೆ ಥೈಲ್ಯಾಂಡ್ ಅಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೆ ಪರದಾಡಿದರು.

ನಗುಮುಖದ ಸದಾ ತನ್ನ ಖುಷಿಯನ್ನು ಗಂಡ ಮತ್ತು ಮಗನ ಖುಷಿಗೋಸ್ಕರ ಮುಡಿಪಾಗಿಟ್ಟಿದ್ದ ಹೆಂಡತಿ ಇಂದು ಮೌನವಾಗಿ ಮಲಗಿದ್ದಾರೆ ಅದನ್ನು ವಿಜಯ ರಾಘವೇಂದ್ರ ಅವರು ನೋಡಿ ಅರಗಿಸಿಕೊಳ್ಳುವುದಾದರೂ ಹೇಗೆ ಎಂದು ಚಿಂತೆ ಕಾಡುತ್ತಿದೆ. ನಿಜಕ್ಕೂ ಇದೀಗ ವಿಜಯ್ ರಾಘವೇಂದ್ರ ಅವರಿಗೆ ಭರಶಿಡಿಲು ಬಡೆದಂತಾಗಿ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿದೆ.

ವಿಜಯ ರಾಘವೇಂದ್ರ ಅವರಿಗೆ ಪತ್ನಿ ಸ್ಪಂದನ ಎಂದರೆ ಬಹಳ ಪಂಚಪ್ರಾಣ. ಹೆಂಡತಿಗೆ ಸ್ವಲ್ಪ ನೋವನ್ನು ಕೊಡದೆ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ವಿಜಯ್. ಸಿಕ್ಕಿದರೆ ಇಂಥ ಪತಿ ಸಿಗಬೇಕು ಎಂದು ಬೇರೆಯವರು ಕೂಡ ಹೊಟ್ಟೆ ಉರಿದುಕೊಳ್ಳಬೇಕು ಆಗಿತ್ತು ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರ ಜೀವನಶೈಲಿ. ಅಷ್ಟರ ಮಟ್ಟಿಗೆ ಹೆಂಡತಿಯನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದ ಚಿನ್ನಾರಿ ಮುತ್ತನ life ಸ್ಟೋರಿ ಒಂದು ವಿಶೇಷ.

2007 ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಎಂದು ಅನಿಸಿಕೊಂಡಿದ್ದರು. 15 ವರ್ಷದ ದಾಂಪತ್ಯ ಜೀವನ ಮುಗಿಸಿ ಕೆಲವೇ ಕೆಲವು ದಿನಗಳಲ್ಲಿ 16 ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು ಅಂದರೆ ಇದೇ ತಿಂಗಳ 26ರಂದು ಇವರ ವಿವಾಹ ವಾರ್ಷಿಕೋತ್ಸವ ಇತ್ತು. ಇವರದು ಲವ್ ಮ್ಯಾರೇಜ್ ಅಲ್ಲ ಮನೆಯವರು ನೋಡಿ ಮದುವೆ ಮಾಡಿದರು  ಸಹ ಸ್ಪಂದನ ಅವರನ್ನು ನೋಡಿದ ಮೊದಲ ದಿನವೆ ವಿಜಯ ರಾಘವೇಂದ್ರ ಅವರಿಗೆ ಇವರ ಮೇಲೆ ಪ್ರೀತಿ ಹುಟ್ಟಿತು.

ಇಷ್ಟಪಟ್ಟವರನ್ನು ಪ್ರೀತಿಸಿ ಮದುವೆಯಾದರು ಅದಾದ ಮೇಲೆ ಈ ಮುದ್ದಾದ ಜೋಡಿಗೆ ಒಂದು ಗಂಡು ಮಗು ಕೂಡ ಜನಿಸಿತು. ವಿಜಯ್ ಹಾಗೂ ಸ್ಪಂದನ ಅವರು ಇದ್ದ ಜೀವನ ಶೈಲಿಗೆ ನೋಡಿದವರೆಲ್ಲ ಇವರಿಬ್ಬರದು ಲವ್ ಮ್ಯಾರೇಜ್ ಇರಬೇಕು ಎಂದು ಅಂದುಕೊಳ್ಳುವಷ್ಟರ ಮಟ್ಟಿಗೆ ಇವರ ಜೀವನ ಅಷ್ಟರಮಟ್ಟಿಗೆ ಬಹಳ ಚೆನ್ನಾಗಿತ್ತು. ಆದರೆ ವಿಜಯ ರಾಘವೇಂದ್ರ ಅವರಿಗೆ ಮದುವೆ ನಂತರದ ಜೀವನದ ಕನಸು ಬಹಳ ದೊಡ್ಡ ಮಟ್ಟದಾಗಿತ್ತು. ಅದೇ ರೀತಿ ಸ್ಪಂದನ ಅವರನ್ನು ಮದುವೆಯಾದ ಮೇಲೆ ಆ ಆಸೆಗಳನ್ನು ಅವರ ಜೊತೆ ಹೇಳಿಕೊಂಡಿದ್ದರಂತೆ.

ಇನ್ನು ವಿಜಯ ರಾಘವೇಂದ್ರ ಅವರು ಹಲವಾರು ಬಾರಿ ಕಾಫಿ ಡೇ ಗಳಲ್ಲಿ ಸ್ಪಂದನ ಅವರನ್ನು ನೋಡಿದರಂತೆ. ಹೀಗೆ ಇವರಿಬ್ಬರೂ ಮೂರನೇ ಬಾರಿ ಭೇಟಿಯಾದಾಗ ಮಾತನಾಡಿಸಿದ್ದಾರಂತೆ. ತಂದೆಯ ಬಳಿ ಚೆನ್ನೇಗೌಡರ ಬಳಿ ತನ್ನ ಪ್ರೀತಿಯ ವಿಷಯವನ್ನು ಹೇಳಿಕೊಂಡು ಅವರು ಸ್ಪಂದನ ಅವರ ತಂದೆ ಬಿ ಕೆ ಶಿವರಾಂ ಅವರ ಬಳಿ ಮಾತನಾಡಿ ಗುರುಹಿರಿಯರ ಆಶೀರ್ವಾದದ ಜೊತೆಗೆ ಇವರಿಬ್ಬರಿಗೆ ಮದುವೆಯನ್ನು ಕೂಡ ಮಾಡಿಸಿದರು. ಆದರೆ ಕ್ರೂರವಿಧಿ  ಇಂತಹ ಸುಂದರವಾದ ಕುಟುಂಬದ ಮೇಲೆ ಕಣ್ಣು ಹಾಕಿ ಅವರನ್ನು ಇನ್ನಿಲ್ಲದ ನೋವಿಗೆ  ಸ್ಪಂದನ ಅವರನ್ನು ಬಾರದ ಲೋಕಕ್ಕೆ ಕರೆದುಕೊಂಡು ಹೋಗಿಬಿಟ್ಟಿದೆ…

Vijaya Raghavendra and Spandana family
Image Source – News Bugs. Vijaya Raghavendra and Spandana family.

 

Leave a comment