Shiv Samman Award: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಅವರಿಗೆ ಮತ್ತೊಂದು ಪ್ರಶಸ್ತಿ ಘೋಷಣೆ! ಜನರಲ್ಲಿ ಸಂತಸ
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು, ಸತಾರಾ ರಾಜಮನೆತನದವರು ಹಾಗೂ ಅಲ್ಲಿನ ಶಿವಭಕ್ತರು ಈ ಪ್ರಶಸ್ತಿ ನೀಡುವ ಗೌರವಾನ್ವಿತ ಕೆಲಸವನ್ನು ಶುರು ಮಾಡಿದ್ದಾರೆ.
Shiv Samman Award: ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜನರಿಗಾಗಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಲಿದ್ದಾರೆ. ಇದೀಗ ಅವರಿಗೆ ನಮ್ಮ ದೇಶವನ್ನು ಬಹಳಷ್ಟು ವರ್ಷಗಳ ಕಾಲ ಆಳ್ವಿಕೆ ಮಾಡಿದ ಪರಾಕ್ರಮ ರಾಜ ಛತ್ರಪತಿ ಶಿವಾಜಿ (Chatrapathi Shivaji) ಅವರ ವಂಶದವರು ನೀಡುವ ಶಿವ ಸಮ್ಮಾನ್ ಪ್ರಶಸ್ತಿಯನ್ನು (Shiv Samman Award) ನೀಡುವುದಾಗಿ ಘೋಷಣೆ ಮಾಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ ಫೆಬ್ರವರಿ 19ರಂದು ಶಿವಾಜಿ ಮಹಾರಾಜ್ ಅವರ ಜನ್ಮದಿನದಂದು ನಡೆಯಲಿದೆ.
ಮೋದಿ ಅವರಿಗೆ ಶಿವ ಸಮ್ಮಾನ್ ಪ್ರಶಸ್ತಿ (Shiv Samman Award):
ಶಿವಾಜಿ ಮಹಾರಾಜ್ ಅವರ ಕುಟುಂಬದಿಂದ ಅಧಿಕೃತವಾಗಿ ಘೋಷಣೆ ಆಗಿದ್ದು, ಮಹಾರಾಷ್ಟ್ರದ ಡೆಪ್ಯುಟಿ ಸಿಎಂ ಆಗಿರುವ ದೇವೇಂದ್ರ ಫಡ್ನಾವಿಸ್ (Devendra Fadnavis) ಅವರು ಟ್ವೀಟ್ ಮಾಡಿ, ಮೋದಿ ಅವರಿಗೆ ಪ್ರಶಸ್ತಿ ಬಂದಿರುವುದು ದೇಶದ ಎಲ್ಲಾ ಶಿವ ಭಕ್ತರಿಗೆ ಖುಷಿ ಹಾಗೂ ಹೆಮ್ಮೆಯ ಸಮಯ ಎಂದು ತಿಳಿಸಿದ್ದಾರೆ. ಪಿಎಮ್ ಮೋದಿ ಅವರು ನಮ್ಮ ದೇಶಕ್ಕೆ ಸಾಮಾಜಿಕವಾಗಿ, ಹಾಗೂ ರಾಜಕೀಯವಾಗಿ ಅವರು ಮಾಡಿರುವ ಸಾಧನೆ, ಅವರ ಕೊಡುಗೆ ಇದೆಲ್ಲವನ್ನು ಗುರುತಿಸಿ ಪಿಎಮ್ ಮೋದಿ ಅವರಿಗೆ ಈ ಗೌರವಾನ್ವಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜರ ವಂಶದ ಕಾರ್ಯವಿದು:
ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು, ಸತಾರಾ ರಾಜಮನೆತನದವರು ಹಾಗೂ ಅಲ್ಲಿನ ಶಿವಭಕ್ತರು ಈ ಪ್ರಶಸ್ತಿ ನೀಡುವ ಗೌರವಾನ್ವಿತ ಕೆಲಸವನ್ನು ಶುರು ಮಾಡಿದ್ದಾರೆ. ಸೈನಿಕ ಸ್ಕೂಲ್ ಗ್ರೌಂಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಉದಾಯರಾಜೆ ಅವರು ಈ ಕಾರ್ಯಕ್ರಮದ ಉಸ್ತುವಾರಿ ಆಗಿದ್ದು, ಇವರು ಬಿಜೆಪಿ ಸಂಸದರು ಕೂಡ ಆಗಿದ್ದಾರೆ.
ದೇವೇಂದ್ರ ಫಡ್ನಾವಿಸ್ ಅವರಿಂದ ಅಭಿನಂದನೆ:
ಮಹಾರಾಷ್ಟ್ರದ ಡೆಪ್ಯುಟಿ ಸಿಎಂ ಆಗಿರುವ ದೇವೇಂದ್ರ ಫಡ್ನಾವಿಸ್ ಅವರು ಪ್ರಶಸ್ತಿ ಘೋಷಣೆ ಆದ ನಂತರ ಟ್ವೀಟ್ ಮಾಡಿ, ಪಿಎಮ್ ಮೋದಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಶಿವಾಜಿ ಮಹಾರಾಜ್ ಅವರ ವಂಶದವರು ನೀಡುವ ಶಿವ ಸಮ್ಮಾನ್ ಪ್ರಶಸ್ತಿ ಮೋದಿ ಅವರಿಗೆ ಬಂದಿರುವುದು ಎಲ್ಲಾ ಶಿವಭಕ್ತರಿಗೆ ಸಂತಸ ಹಾಗೂ ಹೆಮ್ಮೆ ತರುವ ವಿಚಾರ, ಪಿಎಮ್ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.. ಎಂದು ಟ್ವೀಟ್ ಮಾಡಿದ್ದಾರೆ.
Announcement of Shiv Samman award to the country’s proud Prime Minister Narendra Modi!