Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ram Lalla Idol: ರಾಮನ ಕಣ್ಣಿನ ಹೊಳಪಿನ ಹಿಂದಿರುವ ಕಾರಣವೇನು? ಸಂದರ್ಶನದಲ್ಲಿ ಅರುಣ್ ಯೋಗಿರಾಜ್ ಬಿಚ್ಚಿಟ್ಟ ಅಸಲಿ ಸತ್ಯ ಕೊನೆಗೂ ಬಯಲು.

ಮಾಡುವಾಗ ನನಗೆ ಬಹಳ ಭಯ ಆಗಿತ್ತು. ಆ ಸಮಯದಲ್ಲಿ ನನ್ನ ತಂದೆಯನ್ನು ಬಹಳ ನೆನಪಿಸಿಕೊಂಡೆ. ಹೇಳಿಕೊಳ್ಳಲು ನನಗೆ ಅಲ್ಲಿ ಯಾರೂ ಇರಲಿಲ್ಲ.

Ram Lalla Idol: ಅಯೋಧ್ಯೆಯಲ್ಲಿ ಪ್ರತಿಷ್ಟಾಪನೆ ಆದ ರಾಮನ ಮಂದಸ್ಮಿತ ಮುಖ ಎಲ್ಲರಿಗೂ ರಾಮನೇ ಬಂದಿರುವ ಹಾಗೆ ಅನ್ನಿಸುತ್ತಿದೆ. ರಾಮನ ಪುಟ್ಟ ಬಾಲಕನ ರೂಪವನ್ನು ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಅವರು ಸುಂದರವಾಗಿ ಕೆತ್ತಿದ್ದಾರೆ. ರಾಮನ ಮುಖದ ಕಾಂತಿಯನ್ನು ಇನ್ನಷ್ಟು ಹೆಚ್ಚಿಸಿರುವುದು ರಾಮನ ಕಣ್ಣಿನ ಹೊಳಪು. ನಿಜವಾಗಿಯೂ ರಾಮನೇ ನಿಂತಿರುವಂತೆ ಅನ್ನಿಸುವುದು ಕಣ್ಣಿನ ಕಾಂತಿಯಿಂದ.

ಇದೆ ವಿಷಯವಾಗಿ ಒಂದು ಖಾಸಗಿ ಟಿ ವಿ ಇಂಟರ್ವ್ಯೂ ನಲ್ಲಿ ಅರುಣ್ ಯೋಗರಾಜ್ ಅವರು ಮಾಹಿತಿ ನೀಡಿದ್ದಾರೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಅರುಣ್ ಯೋಗಿರಾಜ್ ಅವರು ಇಂಟರ್ವ್ಯೂ ನಲ್ಲಿ ಕಣ್ಣಿನ ಬಗ್ಗೆ ಹಂಚಿಕೊಂಡ ಇಂಟರೆಸ್ಟಿಂಗ್ ವಿಷಯ ಏನು?

ರಾಮನ ಕಣ್ಣುಗಳನ್ನು ದೇವಸ್ಥಾನದ ಗರ್ಭಗುಡಿಯ ಹೊರಗೆ ಕೆತ್ತಲಾಗಿದೆ.ಇದನ್ನು ಕೆತ್ತಲು ನೇತ್ರಮಿಲನ ಎಂಬ ಶಾಸ್ತ್ರ ಇದೆ. ಇದಕ್ಕೆ ಒಳ್ಳೆಯ ಮುಹೂರ್ತವನ್ನು ನಿಗದಿ ಮಾಡುತ್ತಾರೆ. ಅದೇ ಸಮಯದಲ್ಲಿ ನಾನು ಮೂರ್ತಿಯ ಕಣ್ಣುಗಳನ್ನು ಬಂಗಾರ ಮತ್ತು ಬೆಳ್ಳಿಯ ಸುತ್ತಿಗೆಯಿಂದ ಮಾಡಿದ್ದೇನೆ. ಸರಿಯು ನದಿಯಲ್ಲಿ ಮೂರ್ತಿಗೆ ಅಭಿಷೇಕ ಮಾಡಿ ನಂತರ ಹಳದಿ ಬಟ್ಟೆಯಲ್ಲಿ ಮುಖವನ್ನು ಮುಚ್ಚುತ್ತಾರೆ ಎಂದು ನಡೆಯುವ ಶಾಸ್ತ್ರಗಳ ಬಗ್ಗೆ ಮಾಹಿತಿ ತಿಳಿಸಿದರು .

ಇದನ್ನು ಓದಿ:- Republic Day Special: ಇದೆ ಮೊದಲ ಬಾರಿಗೆ  ಪ್ರಾನ್ಸ್ ದೇಶದ ನಾಲ್ವರು ಸಾಧಕರಿಗೆ ಸಿಕ್ಕಿದೆ ಭಾರತದ ಶ್ರೇಷ್ಠ ಗೌರವ ಪದ್ಮಶ್ರೀ ಪ್ರಶಸ್ತಿ, ಏನಿವರ ಸಾಧನೆ.

ಮಾಡುವಾಗ ನನಗೆ ಬಹಳ ಭಯ ಆಗಿತ್ತು. ಆ ಸಮಯದಲ್ಲಿ ನನ್ನ ತಂದೆಯನ್ನು ಬಹಳ ನೆನಪಿಸಿಕೊಂಡೆ. ಹೇಳಿಕೊಳ್ಳಲು ನನಗೆ ಅಲ್ಲಿ ಯಾರೂ ಇರಲಿಲ್ಲ. ನನ್ನ ಸಹ ಸಹ ಕಲಾವಿದರ ಬಳಿ ಹೇಳಿಕೊಂಡೆ. ಬಂಗಾರ ಮತ್ತು ಬೆಳ್ಳಿಯ ಸುತ್ತಿ ಗೆಯನ್ನು ನಾನು ಬೇರೆ ಕಡೆಯಿಂದ ತರಿಸಿದೆ ಎಂದು ಹೇಳಿದರು.

ರಾಮನ ಮೂರ್ತಿಯನ್ನು ಮಾಡಿರುವುದು ನನ್ನ ಪೂರ್ವಜರು ಮಾಡಿದ ಪುಣ್ಯ. ತುಂಬಾ ವರ್ಷಗಳಿಂದ ನಮ್ಮ ಕುಟುಂಬ ಶಿಲ್ಪಕಲೆಯ ಕಸುಬನ್ನು ಮಾಡುತ್ತಾ ಬಂದಿದೆ. ಈಗಲೂ ರಾಮನ ಮೂರ್ತಿಯನ್ನು ನಾನೇ ಮಾಡಿದ್ದೀನಿ ಎಂದು ನಂಬಲಾಗುತ್ತಿಲ್ಲ. ರಾಮನ ಮೂರ್ತಿಯನ್ನು ಗರ್ಭಗುಡಿಗೆ ತೆಗೆದುಕೊಂಡು ಹೋಗುವಾಗ ನನಗೆ ಮಗುವನ್ನು ಅರಮನೆಗೆ ಕರೆದುಕೊಂಡು ಬರುವಂತೆ ಅನ್ನಿಸಿತ್ತು ಎಂದು ಹಂಚಿಕೊಂಡರು.

ರಾಮನ ಮೂರ್ತಿ ಕೆತ್ತನೆಗೆ ಅರುಣ್ ಯೋಗಿರಾಜ್ ಅವರು ತೆಗೆದುಕೊಂಡ ಸಂಭಾವನೆ ಏಷ್ಟು?

ಅರುಣ್ ಯೋಗರಾಜ್ ಅವರು ಇನ್ನೂ ಸಂಭಾವನೆ ಪಡೆಯಲಿಲ್ಲ. ಟ್ರಸ್ಟ್ ನವರು ಏಷ್ಟು ಹಣವನ್ನು ನೀಡಿದರೂ ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಮಕ್ಕಳು ಮೊಮ್ಮಕ್ಕಳು ಕುಳಿತು ತಿನ್ನುವಷ್ಟು ಖ್ಯಾತಿ ತಂದುಕೊಟ್ಟಿದೆ.

ಇದನ್ನು ಓದಿ:- Sugriva: ರಾಮ ರಾವಣರ ಯುದ್ಧದಲ್ಲೀ ರಾಮನಿಗೆ ಸಹಾಯ ಮಾಡಿದ ಸುಗ್ರೀವನ ಬಗ್ಗೆ ನಿಮಗೆ ಗೊತ್ತೇ? ಈ ಪುಣ್ಯ ದಿನದಂದು ನಿಮಗೊಂದು ಮಾಹಿತಿ.

ಅರುಣ್ ಯೋಗಿರಾಜ್ ಅವರಿಗೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ :- (Ram Lalla Idol)

ಕರ್ನಾಟಕ ಪಾಲಿಗೆ ಹೀರೋ ಆಗಿರುವ ಅರುಣ್ ಯೋಗಿರಾಜ್ ಅವರು 6 ತಿಂಗಳಿನ ನಂತರ ಅಯೋಧ್ಯೆಯಿಂದ ಬೆಂಗಳೂರಿಗೆ ಬಂದಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಜನರು ಪ್ರೀತಿಯಿಂದ ಸ್ವಾಗತ ಕೋರಿದರು. ಇಷ್ಟೊಂದು ಕೀರ್ತಿ ತಂದುಕೊಡುತ್ತದೆ ಎಂದು ನಿಜಕ್ಕೂ ನಾನು ಭಾವಿಸಿರಲಿಲ್ಲ. ನಾನು 7 ತಿಂಗಳುಗಳ ಕಾಲ ಒಂದೇ ಕೊಠಡಿಯಲ್ಲಿ ಇದ್ದೆ. ಹೊರಗೆ ಬಂದ್ಮೇಲೆ ನನಗೆ ಜನರ ರಿಯಾಕ್ಷನ್ ಗೊತ್ತಾಯಿತು ಎಂದರು.

This is the real reason behind the luster of the Rama Lalla idol.

Leave a comment