Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Taxi Price Revision: ಕರ್ನಾಟಕದಲ್ಲಿ ಟ್ಯಾಕ್ಸಿ ಪ್ರಯಾಣದ ಬೆಲೆ ಏರಿಕೆ! ಕಾರಣ ಏನು?

ಇದೀಗ ನಾನ್ ಎಸಿ ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುವವರಿಗೆ ಆರಂಭಿಕ 4 ಕಿಮಿಗೆ 75 ರೂಪಾಯಿ ಪಾವತಿ ಮಾಡಬೇಕಿತ್ತು, ಅದಾದ ಬಳಿಕ ಒಂದು ಕಿಲೋಮೀಟರ್ ಗೆ 18 ರೂಪಾಯಿ ಪಾವತಿ ಮಾಡಬೇಕು.

Taxi Price Revision: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದೀಗ ನಮ್ಮ ರಾಜ್ಯದಲ್ಲಿ ಅಗ್ರಿರೇಟರ್ ವಿಭಾಗಕ್ಕೆ ಬರುವ ಎಲ್ಲಾ ಟ್ಯಾಕ್ಸಿಗಳ ಪ್ರಯಾಣದ ಬೆಲೆಯನ್ನು ಹೆಚ್ಚಳ ಮಾಡಿದೆ. ಓಲಾ, ಉಬರ್ ಈ ಎಲ್ಲಾ ವಿಭಾಗಕ್ಕೆ ಬರುವವಂಥ ಟ್ಯಾಕ್ಸಿ ಪ್ರಯಾಣದ ಬೆಲೆಯನ್ನು ಏರಿಕೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಡ್ಸ್ರೆ ಏರಿಕೆಯನ್ನು ವಾಹನದ ಖರ್ಚು ಎಷ್ಟು ಎನ್ನುವುದರ ಮೇಲೆ 3 ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಹೊಸ ದರ ಎಷ್ಟು?

  • 10 ಲಕ್ಷ ಮೊತ್ತದ ವಾಹನಗಳ 4ಕಿಮೀ ಪ್ರಯಾಣಕ್ಕೆ ಮಿನಿಮಮ್ 100 ರೂಪಾಯಿ ನಿಗದಿ ಮಾಡಲಾಗಿದೆ. 4ಕಿಮೀ ನಂತರ 1 ಕಿಮಿಗೆ 24 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
  • 10-15 ಲಕ್ಷದ ವೆಚ್ಚದ ವಾಹನಗಳ ಪ್ರಯಾಣಕ್ಕೆ 4 ಕಿಮಿಗೆ ₹115 ರೂಪಾಯಿ ಮಿನಿಮಮ್ ಪಾವತಿ ಮಾಡಬೇಕಾಗುತ್ತದೆ. 4ಕಿಮೀ ಬಳಿಕ ಒಂದು ಕಿಮಿಗೆ 28 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
  • 15 ಲಕ್ಷಕ್ಕಿಂತ ಹೆಚ್ಚು ಮೊತ್ತದ ವಾಹನದ ಪ್ರಯಾಣಕ್ಕೆ 4 ಕಿಮೀಗೆ ಮಿನಿಮಮ್ 130 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. 4ಕಿಮೀ ಬಳಿಕ ಒಂದು ಕಿಮಿಗೆ 32 ರೂಪಾಯಿ ಪಾವತಿ ಮಾಡಬೇಕು.

ಕಿಲೋಮೀಟರ್ ಅನುಸಾರ ದರ ನಿಗದಿ:

ಇದೀಗ ನಾನ್ ಎಸಿ ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುವವರಿಗೆ ಆರಂಭಿಕ 4 ಕಿಮಿಗೆ 75 ರೂಪಾಯಿ ಪಾವತಿ ಮಾಡಬೇಕಿತ್ತು, ಅದಾದ ಬಳಿಕ ಒಂದು ಕಿಲೋಮೀಟರ್ ಗೆ 18 ರೂಪಾಯಿ ಪಾವತಿ ಮಾಡಬೇಕು. ಆದರೆ 2021ರಲ್ಲಿ ಮತ್ತೆ ಪರಿಶೀಲನೆ ನಡೆಸಿದಾಗ, ಎಸಿ ಟ್ಯಾಕ್ಸಿಗಳಲಿ ಆರಂಭಿಕ 4 ಕಿಮೀ ಪ್ರಯಾಣಕ್ಕೆ ₹100 ರೂಪಾಯಿ ನಿಗದಿ ಮಾಡಲಾಗಿತ್ತು.

ಆಪ್ ಇಂದ ಬುಕ್ ಮಾಡುವವರಿಗೆ ಮತ್ತು ಸಿಟಿ ಟ್ಯಾಕ್ಸಿಗಳಿಗೆ ಬೇರೆ ಬೇರೆ ದರಗಳನ್ನು ನಿಗದಿ ಮಾಡಿ, ಎರಡಕ್ಕೂ ಮಿನಿಮಮ್ ಮತ್ತು ಮ್ಯಾಕ್ಸಿಮಮ್ ದರವನ್ನು ನಿಗದಿ ಮಾಡಲಾಗಿತ್ತು, ಆದರೆ ಈಗ ಅದನ್ನು ಕ್ಯಾನ್ಸಲ್ ಮಾಡಲಾಗಿದೆ. ರಾಜ್ಯದ ಎಲ್ಲಾ ವರ್ಗದ ಟ್ಯಾಕ್ಸಿಗಳಿಗೆ ಒಂದೇ ರೀತಿಯ ಬೆಲೆ ನಿಗದಿ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ. ಪ್ರಸ್ತುತ ಇರುವ ಎಲ್ಲಾ ಕಾರ್ ಗಳಲ್ಲಿ ಎಸಿ ಇರುವ ಕಾರಣ ನಾನ್ ಎಸಿ ಕಾರ್ ಗಳ ವರ್ಗವನ್ನು ಕ್ಯಾನ್ಸಲ್ ಮಾಡಲಾಗಿದೆ. ಈ ಬಗ್ಗೆ ಸರ್ಕಾರದ ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಆಗಿರುವ ಎಲ್ ಹೇಮಂತ್ ಕುಮಾರ್ ಅವರು ತಿಳಿಸಿದ್ದಾರೆ.

ವೇಟಿಂಗ್ ಚಾರ್ಜ್ ದರ ಎಷ್ಟು?

ಸರ್ಕಾರ ವೇಟಿಂಗ್ ಚಾರ್ಜ್ ಗೆ ನಿಗದಿ ಮಾಡಿತ್ತು, ಅದೇ ಮೊತ್ತವನ್ನೇ ಮುಂದಕ್ಕೂ ಜಾರಿಗೆ ತರಬೇಕು ಎಂದು ಹೇಳಲಾಗುತ್ತಿದೆ. ಮೊದಲೆಲ್ಲಾ ಐದು ನಿಮಿಷದವರೆಗೂ ವೇಟಿಂಗ್ ಗೆ ಹಣ ಪಡೆಯುತ್ತಿರಲಿಲ್ಲ, ಅದಾದ ಬಳಿಕ ನಿಮಿಷಕ್ಕೆ ಒಂದು ರೂಪಾಯಿಯ ಹಾಗೆ ತೆಗೆದುಕೊಳ್ಳಲಾಗುತ್ತಿತ್ತು, ಇನ್ನುಮುಂದೆ ಕೂಡ ಅದೇ ರೀತಿ ಮುಂದುವರೆಯಬೇಕು ಎಂದು ನಿಗದಿ ಮಾಡಲಾಗಿದೆ..ಅಗ್ರಿಗೇಟರ್ ವಾಹನಗಳಿಗೆ 5% GST ತೆಗೆದುಕೊಳ್ಳಲಾಗುತ್ತದೆ.

Taxi travel price hike in Karnataka! What is the reason?

Leave a comment