Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SVANidhi scheme: ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! 50,000 ಸಾಲ ಪಡೆಯಿರಿ ಸುಲಭವಾಗಿ

ಕೇಂದ್ರ ಸರ್ಕಾರವು ಬೀದಿಬದಿಗಳಲ್ಲಿ ಕಷ್ಟಪಟ್ಟು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನರಿಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಸ್ವಾನಿಧಿ ಯೋಜನೆ ಆಗಿದ್ದು,

SVANidhi scheme: ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಬಡವರಿಗೆ ಅನುಕೂಲ ಆಗುವ ಹಾಗೆ ಸಾಕಷ್ಟು ಯೋಜನೆಗಳನ್ನು ಸೌಲಭ್ಯಗಳನ್ನು ಜಾರಿಗೆ ತರುತ್ತಿದೆ. ಇಂಥ ಯೋಜನೆಗಳ ಬಗ್ಗೆ ಈ ವರ್ಷದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ. ಇದೀಗ ಸರ್ಕಾರವು ರಸ್ತೆಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವಂಥ ಒಂದು ಯೋಜನೆಯನ್ನು ಜಾರಿಗೆ ತಂದಿದೆ..

ಸ್ವಾನಿಧಿ ಯೋಜನೆ: (SVANidhi scheme)

ಕೇಂದ್ರ ಸರ್ಕಾರವು ಬೀದಿಬದಿಗಳಲ್ಲಿ ಕಷ್ಟಪಟ್ಟು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನರಿಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಸ್ವಾನಿಧಿ ಯೋಜನೆ ಆಗಿದ್ದು, ಈ ಯೋಜನೆಯಿಂದ ಹೇಗೆ ಸಾಲ ಪಡೆಯಬಹುದು? ಸಾಲ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು? ಈ ಎಲ್ಲಾ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ನೋಡಿ..

ಸ್ವಾನಿಧಿ ಯೋಜನೆಯ ಪ್ರಯೋಜನ:

ಬೀದಿಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಕಷ್ಟದಲ್ಲಿ ಇರುವ ಜನರು ತಮ್ಮದೇ ಸ್ವಂತ ಉದ್ಯಮ ಶುರು ಮಾಡುವುದಕ್ಕಾಗಿ ರಸ್ತೆಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವುದಕ್ಕಾಗಿ ಜಾರಿಗೆ ತಂದಿರುವ ಯೋಜನೆಯೇ ಸ್ವಾನಿಧಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳು ಯಾವುದೇ ಆಸ್ತಿ, ಅಥವಾ ಏನನ್ನು ಸೆಕ್ಯೂರಿಟಿಯಾಗಿ ಕೊಡದೇ 50,000 ವರೆಗು ಸ್ವಾನಿಧಿ ಯೋಜನೆಯ ಅಡಿವಲ್ಲಿ ವ್ಯಾಪಾರ ಮಾಡಲು ಸಾಲ ಪಡೆಯಬಹುದು.

ಮೂರು ಹಂತಗಳಲ್ಲಿ ಸಾಲ:

ಸ್ವಾನಿಧಿ ಯೋಜನೆಯಲ್ಲಿ ಬೀದಿಬದಿ ವ್ಯಾಪಾರಿಗಳು 3 ಹಂತಗಳಲ್ಲಿ ಸಾಲ ಪಡೆಯುತ್ತಾರೆ.

  • ಮೊದಲ ಹಂತದಲ್ಲಿ ₹10,000 ಸಾಲ ಕೊಡಲಾಗುತ್ತದೆ, ಇದನ್ನು ಮರುಪಾವತಿ ಮಾಡಲು 12 ತಿಂಗಳ ಸಮಯ ಇರುತ್ತದೆ.
  • ನಿಗದಿತ ಸಮಯದ ಒಳಗೆ ಸಾಲ ತೀರಿಸಿದವರಿಗೆ ಎರಡನೇ ಹಂತದಲ್ಲಿ ₹20,000 ಸಾಲ ಸಿಗುತ್ತದೆ.
  • ಎರಡನೇ ಹಂತದ ಸಾಲ ತೀರಿಸಿದ ಬಳಿಕ ಮತ್ತೆ 3ನೇ ಹಂತದಲ್ಲಿ ₹20,000 ಸಾಲ ಸಿಗುತ್ತದೆ.
    ಒಟ್ಟಾರೆಯಾಗಿ ₹50,000 ಸಾಲ ಪಡೆಯುತ್ತೀರಿ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ?

ಸ್ವಾನಿಧಿ ಯೋಜನೆಯ ಮೂಲಕ ಸಾಲ ಪಡೆಯಲು ಬಯಸುವ ಬೀದಿಬದಿ ವ್ಯಾಪಾರಿಗಳು, ಯಾವುದೇ ಬ್ಯಾಂಕ್ ಗೆ ಹೋಗಿ ಯೋಜನೆಗೆ ಅರ್ಜಿ ಪಡೆದು, ಫಿಲ್ ಮಾಡಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತದೆ. ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ರೇಷನ್ ಕಾರ್ಡ್ ಸೇರಿದಂತೆ ಬ್ಯಾಂಕ್ ನಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ನೀಡಬೇಕಾಗುತ್ತದೆ. ಸಾಲ ಪಡೆಯುವುದಕ್ಕೆ ಸರಿಯಾದ ಕಾರಣವನ್ನು ತಿಳಿಸಬೇಕು.

ಬಜೆಟ್ ಮಂಡನೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ವಾನಿಧಿ ಯೋಜನೆಯ ಬಗ್ಗೆ ಮಾತನಾಡಿ, ದೇಶದ 78 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆಯ ಸೌಲಭ್ಯ ಈಗಾಗಲೇ ಸಿಕ್ಕಿದೆ ಎಂದು ತಿಳಿಸಿದ್ದಾರೆ. 2,30,000 ಬೀದಿಬದಿ ವ್ಯಾಪಾರಿಗಳು ಮೂರನೇ ಸಾರಿ ಸಾಲ ಪಡೆದಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

Good news for street vendors: from the PM SVANidhi scheme, you can get up to 50,000 in loans.

Leave a comment