Karimani Malika: ರೀಲ್ಸ್ ಅವಾಂತರ! ಹೆಂಡತಿಯ ಕರೀಮಣಿ ಮಾಲೀಕ ನೀನಲ್ಲ ರೀಲ್ಸ್ ನೋಡಿ ನಿಜಕ್ಕೂ ಪ್ರಾಣ ಕಳೆದುಕೊಂಡ ಗಂಡ!
ಆ ಸಾಲನ್ನು ಕೇಳಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲರೂ ಕೂಡ ಈ ಹಾಡಿಗೆ ರೀಲ್ಸ್ ಮಾಡುವುದಕ್ಕೆ ಶುರು ಮಾಡಿರು.
Karimani Malika: ಕೆಲವೊಮ್ಮೆ ಸೋಷಿಯಲ್ ಮೀಡಿಯಾ ಇಂದ ತೊಂದರೆಗಳು ಕೂಡ ಉಂಟಾಗುತ್ತದೆ. ಮನರಂಜನೆಗಾಗಿ, ಜನರ ಜೊತೆಗೆಕನೆಕ್ಟ್ ಆಗುವುದಕ್ಕೆ ಇರುವ ಸೋಷಿಯಲ್ ಮೀಡಿಯಾ, ಕೆಲವು ಸಾರಿ ಜನರ ಭಾವನೆಗಳಿಗೆ ನೋವು ತರುವ ಹಾಗೆ ಆಗುವುದು ಹೌದು. ಇಂಥದ್ದೊಂದು ಘಟನೆ ಇತ್ತೀಚೆಗೆ ನಡೆದಿದ್ದು, ಹೆಂಡತಿ ಮಾಡಿದ ರೀಲ್ಸ್ ನೋಡಿ ಗಂಡ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಓ ನಲ್ಲ ನೀನಲ್ಲ, ಕರೀಮಣಿ ಮಾಲೀಕ ನೀನಲ್ಲ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಉಪೇಂದ್ರ ಅವರು ನಾಯಕನಾಗಿ ನಟಿಸಿದ ಉಪೇಂದ್ರ ಸಿನಿಮಾ ಹಾಡು. ಇದರಲ್ಲಿ ಮೂವರು ಹೀರೋಯಿನ್ ಗಳಿದ್ದು, ಉಪೇಂದ್ರ ಅವರು ಮತ್ತು ಪ್ರೇಮಾ ಅವರ ಮೇಲೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ಈ ಹಾಡಿನ ಒಂದು ಸಾಲನ್ನು ರೀಲ್ಸ್ ಒಂದರಲ್ಲಿ ಹೇಳಿದ್ದರು..
Karimani Malika: ಕೊನೆಗೂ ಕರೀಮಣಿ ಮಾಲೀಕ ಯಾರು ಅಂತ ಗೊತ್ತಾಯ್ತು!
ಆ ಸಾಲನ್ನು ಕೇಳಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲರೂ ಕೂಡ ಈ ಹಾಡಿಗೆ ರೀಲ್ಸ್ ಮಾಡುವುದಕ್ಕೆ ಶುರು ಮಾಡಿರು. ಓ ನಲ್ಲ ನೀನಲ್ಲ ಹಾಡಿಗೆ ಡಿಜೆ ರೀಮಿಕ್ಸ್ ಮಾಡಲಾಯಿತು, ಕೆಲವು ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.. ಹಲವು ವರ್ಷಗಳ ನಂತರ ಈ ಹಾಡು ವೈರಲ್ ಆಗಿದ್ದಕ್ಕೆ, ಹಾಡನ್ನು ಕಂಪೋಸ್ ಮಾಡಿದ್ದ ಸಂಗೀತ ನಿರ್ದೇಶಕ ಗುರು ಕಿರಣ್ ಅವರು ಕೂಡ ಶಾಕ್ ಆಗಿದ್ದರು.
ಆದರೆ ಇದೀಗ ಈ ಹಾಡಿನ ರೀಲ್ಸ್ ವಿಚಾರಕ್ಕೆ ಗಂಡನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು, ಹೆಂಡತಿ ಈ ಹಾಡಿಗೆ ರೀಲ್ಸ್ ಮಾಡಿದ್ದಾಳೆ ಎಂದು ಗಂಡನಿಗೆ ಬೇಸರವಾಗಿದ್ದು, ಇದರಿಂದ ಮನನೊಂದ ಗಂಡ, ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಒಂದು ರೀತಿ ನಿಜಕ್ಕೂ ಜನರನ್ನೇ ಬೆಚ್ಚಿಬೀಳಿಸಿದೆ ಎಂದರೆ ಖಂಡಿತ ಸುಳ್ಳಲ್ಲ. ಇಂಥದ್ದೊಂದು ಘಟನೆ ನಡೆದಿರುವುದು ಚಾಮರಾಜನಗರದಲ್ಲಿ..
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ, ಪಿಜೆ ಪಾಳ್ಯದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಫೋಟೋದಲ್ಲಿ ಕಾಣುತ್ತಿರುವ ಈ ವ್ಯಕ್ತಿಯ ಹೆಂಡತಿ ಓ ನಲ್ಲ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದರಿಂದ ಆತನಿಗೆ ಬೇಸರವಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿಜಕ್ಕೂ ಅವರ ನಡುವೆ ಏನಾಗಿದೆ ಎಂದು ಇನ್ನು ಮಾಹಿತಿ ಸಿಕ್ಕಿಲ್ಲ. ಆದರೆ ರೀಲ್ಸ್ ಇಂದ ಒಂದು ಜೀವವೇ ಹೋಗಿದೆ ಎನ್ನುವುದು ಶಾಕಿಂಗ್ ವಿಚಾರ.
Reel’s Disruption: The Husband Who Lost His Life After Seeing the Reel “Karimani Malika”
ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.