Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Post Office New Scheme: ಕೇವಲ ₹5000 ಹೂಡಿಕೆ ಮಾಡಿ, ₹5 ಲಕ್ಷ ಪಡೆಯೋ ಹೊಸ ಪೋಸ್ಟ್ ಆಫೀಸ್ ಸ್ಕೀಮ್! ಹೂಡಿಕೆಗೆ ಅತ್ಯುತ್ತಮ ಆಯ್ಕೆ.

Post Office Scheme: ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಪ್ರತಿ ತಿಂಗಳು ಉಳಿತಾಯ (Savings) ಮಾಡುತ್ತಾ ಬಂದರೆ ಭವಿಷ್ಯದ ಜೀವನ ಬಹಳ ಚೆನ್ನಾಗಿರುತ್ತದೆ, ಆರ್ಥಿಕವಾಗಿ ನಮಗೆ ಯಾವುದೇ ತೊಂದರೆ ಆಗುವುದಿಲ್ಲ. ಹೀಗೆ ಹೂಡಿಕೆ (Money Investment) ಮಾಡುವುದಕ್ಕೆ ಪ್ರಮುಖ ಆಯ್ಕೆಗಳು ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ (Post Office). ಈ ಎರದಲ್ಲೂ ಹೂಡಿಕೆಗೆ ಉತ್ತಮ ಆದಾಯ ನೀಡುವಂಥ ಅನೇಕ ಯೋಜನೆಗಳಿವೆ. ಅವುಗಳ ಪೈಕಿ ಸಣ್ಣ ಉಳಿತಾಯದಲ್ಲಿ ದೊಡ್ಡ ಲಾಭ ನೀಡುವಂಥ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಪೋಸ್ಟ್ ಆಫೀಸ್ ಯೋಜನೆ- Post Office Scheme:

ಹೂಡಿಕೆಗೆ ಅತ್ಯುತ್ತಮ ಆಯ್ಕೆ ಪೋಸ್ಟ್ ಆಫೀಸ್ (Post Office), ಕೇಂದ್ರ ಸರ್ಕಾರದ ವ್ಯಾಪ್ತಿಗೆ ಇದು ಬರುವ ಕಾರಣ ನೀವು ಹೂಡಿಕೆ ಮಾಡುವ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಬರುವುದು ಮಾತ್ರವಲ್ಲ, ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆ ಜೊತೆಗೆ ಹಲವು ಯೋಜನೆಗೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ..ಪೋಸ್ಟ್ ಆಫೀಸ್ ನಲ್ಲಿ ಸಣ್ಣದಾಗಿ ಉಳಿತಾಯ (Post Office Savings Scheme) ಶುರು ಮಾಡುವುದರಿಂದ ಹಿಡಿದು ದೊಡ್ಡ ಉಳಿತಾಯದವರೆಗು ಅನೇಕ ಯೋಜನೆಗಳಿದ್ದು, ಸಾಮಾನ್ಯರಿಂದ ಹಿಡಿದು ಶ್ರೀಮಂತರ ವರೆಗು ಯಾರು ಬೇಕಾದರು ಹಣ ಹೂಡಿಕೆ ಮಾಡಬಹುದು.

ಪೋಸ್ಟ್ ಆಫೀಸ್ ಹೊಸ ಯೋಜನೆ -Post Office New Scheme:

ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಉತ್ತಮ ರಿಟರ್ನ್ಸ್ ನೀಡುವಂಥ ಅನೇಕ ಯೋಜನೆಗಳಿವೆ. ಇತ್ತೀಚೆಗೆ ಹೊಸದೊಂದು ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಪೋಸ್ಟ್ ಆಫೀಸ್ ನ್ಯೂ ಸ್ಕೀಮ್ (Post Office New Scheme) ಇದೊಂದು ಮಾಸಿಕ ಉಳಿತಾಯ ಯೋಜನೆ ಆಗಿದೆ..

ಮಾಸಿಕ ಉಳಿತಾಯ ಯೋಜನೆ: (Monthly Savings Scheme)

ಸಾಮಾನ್ಯವಾಗಿ ಹೆಚ್ಚಿನ ಜನರು ಈ ಯೋಜನೆಯಲ್ಲಿ ಉಳಿತಾಯ ಮಾಡಲು ಬಯಸುತ್ತಾರೆ. ಮಾಸಿಕ ಉಳಿತಾಯ ಯೋಜನೆ ಅಂದರೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬರಬೇಕು. ಈ ಯೋಜನೆಯ ಮುಕ್ತಾಯದ ಅವಧಿ 5 ವರ್ಷ ಆಗಿರುತ್ತದೆ. ಈ ಯೋಜನೆಯಲ್ಲಿ ಸಣ್ಣದಾಗಿ ಹೂಡಿಕೆ ಶುರು ಮಾಡಿ ಲಕ್ಷದವರೆಗೂ ಆದಾಯ ಪಡೆಯಬಹುದು. 7.4% ಬಡ್ಡಿದರ (Interest Rate) ಸಿಗುವ ಈ ಯೋಜನೆಯಲ್ಲಿ ಪರ್ಸನಲ್ ಆಗಿ ಸಿಂಗಲ್ ಖಾತೆ ಅಥವಾ ಜಂಟಿ ಖಾತೆ (Joint Account) ಯಾವುದನ್ನಾದರು ಶುರು ಮಾಡಬಹುದು..

ಜಂಟಿ ಖಾತೆಯಲ್ಲಿ 15 ಲಕ್ಷದವರೆಗು, ಸಿಂಗಲ್ ಖಾತೆಯಲ್ಲಿ 9 ಲಕ್ಷದವರೆಗೂ ಹೂಡಿಕೆ ಮಾಡಬಹುದು. ಈ ಯೋಜೆನೆಯಲ್ಲಿ ತಿಂಗಳಿಗೆ ₹5,500 ಹೂಡಿಕೆ ಮಾಡಿದರೆ, ವಾರ್ಷಿಕವಾಗಿ ₹66,000 ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 5 ವರ್ಷಕ್ಕೆ ₹3,33,000 ಹೂಡಿಕೆ ಮಾಡಿರುತ್ತೀರಿ. ಇಷ್ಟು ಮೊತ್ತಕ್ಕೆ 7.4% ಬಡ್ಡಿ ಸಿಗುತ್ತದೆ.

ಜಂಟಿ ಖಾತೆ ವಿಶೇಷತೆ:

ಈ ಯೋಜನೆಯಲ್ಲಿ ಜಂಟಿ ಖಾತೆಯನ್ನು ಗಂಡ ಹೆಂಡತಿ ಮಾತ್ರವಲ್ಲ, ಸಹೋದರರು, ತಾಯಿ ಮಕ್ಕಳು, ಸಹೋದರಿಯರು, ಸಹೋದರ ಸಹೋದರಿಯರು ಯಾರು ಬೇಕಾದರು ಜಂಟಿ ಖಾತೆ ತೆರೆಯಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಹೂಡಿಕೆ ಶುರು ಮಾಡಲು, ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಬಹುದು.

Leave a comment