Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Revenue Department Recruitment 2024: ಕರ್ನಾಟಕ ಕಂದಾಯ ಇಲಾಖೆಯಲ್ಲಿ 2000 ಹುದ್ದೆಗಳ ಭರ್ತಿಗೆ ಅವಕಾಶ! ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಈ ಬಗ್ಗೆ ಕಂದಾಯ ಇಲಾಖೆಯ ಸಚಿವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಲ್ಲಿ ಮನವಿ ಮಾಡಿಕೊಂಡಿದ್ದು, ಬಜೆಟ್ ವೇಳೆ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.

Revenue Department Recruitment 2024: ಕೆಲಸಕ್ಕಾಗಿ ಕಾದಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ರಾಜ್ಯದ ಕಂದಾಯ ಇಲಾಖೆಯಲ್ಲಿ (Karnataka Revenue Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ನಿರುದ್ಯೋಗಿಗಳಿಗೆ ಇದು ಸಂತಸದ ವಿಚಾರ ಆಗಿದೆ. 2024-25ನೇ ಸಾಲಿನ ಬಜೆಟ್ ನಲ್ಲಿ ಇದಕ್ಕಾಗಿ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಕೂಡ ತಿಳಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಉಪ ನಿರ್ದೇಶಕರು ಸರ್ವೆಯರ್ ಹಾಗೂ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಈ ಬಗ್ಗೆ ಕಂದಾಯ ಇಲಾಖೆಯ ಸಚಿವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಲ್ಲಿ ಮನವಿ ಮಾಡಿಕೊಂಡಿದ್ದು, ಬಜೆಟ್ ವೇಳೆ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ಖುದ್ದು ರಾಜ್ಯದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ (Krishna Byre Gowda) ಅವರು ಮಾತನಾಡಿದ್ದು, ಬಜೆಟ್ ವೇಳೆ ನೇಮಕಾತಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ಪ್ರಕ್ರಿಯೆ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ..

ಖಾಲಿ ಇರುವ ಹುದ್ದೆಗಳ ವಿವರ:

  • ಉಪ ನಿರ್ದೇಶಕರು – 500 ಹುದ್ದೆಗಳು
  • ಗ್ರಾಮ ಲೆಕ್ಕಿಗ – 1500 ಹುದ್ದೆಗಳು

ಇಷ್ಟು ಹುದ್ದೆಗಳು ಖಾಲಿ ಇದ್ದು, ರಾಜ್ಯದ ಆರ್ಥಿಕ ಇಲಾಖೆಯಿಂದ ಹುದ್ದೆಗಳ ಭರ್ತಿಗೆ ಅವಕಾಶ ಸಿಗಬೇಕಿದೆ..
ಇದರ ಪೈಕಿ ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಆಗಿರುವ ಕಲಾವತಿ ಎಸ್.ಎಸ್ ಅವರು ಈಗಾಗಲೇ ಅಧಿಸೂಚನೆ ನೀಡಿದ್ದಾರೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಎಷ್ಟು ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇದೆ ಎಂದು ಮನವಿ ಸಲ್ಲಿಸಬೇಕು. ಅವುಗಳಲ್ಲಿ ಒಟ್ಟು 1000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮಾಹಿತಿ ಸಿಕ್ಕಿದೆ.

ಸರ್ವೇಯರ್ ಹುದ್ದೆ:

ಇನ್ನು ನೇಮಕಾತಿ ಆಗಬೇಕಾದ ಮತ್ತೊಂದು ಹುದ್ದೆ ಸರ್ವೇಯರ್ ಹುದ್ದೆ ಆಗಿದ್ದು, ಒಟ್ಟು 347 ಸರ್ವೇಯರ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಕೆಲವು ದಿನಗಳ ಹಿಂದೆಯೇ ಅನುಮತಿ ನೀಡಲಾಗಿದೆ, ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಅನುಮತಿ ಸಿಗುವ ಕೆಲಸ ಮಾತ್ರ ಬಾಕಿ ಇದೆ ಎಂದು ಕಂದಾಯ ಇಲಾಖೆಯ ಸಚಿವರು ತಿಳಿಸಿದ್ದರು.

ಗ್ರಾಮ ಲೆಕ್ಕಿಗ ಹುದ್ದೆ:

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿ ನಡೆಯುವುದು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ. 2022-23, 2023-24, 2024-25, 2025-26 ವರ್ಷಗಳಲ್ಲಿ ವರ್ಷಕ್ಕೆ 500 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಸರ್ಕಾರ ಒಪ್ಪಿಗೆ ಕೊಡಬೇಕಿದೆ.

ಪ್ರತಿ ಜಿಲ್ಲೆಗೆ ಎಷ್ಟು ಹುದ್ದೆ ಮಂಜೂರಾಗಿದೆ, ಈಗ ಕೆಲಸ ಮಾಡುತ್ತಿರುವ ಹುದ್ದೆಗಳು, ಖಾಲಿ ಇರುವ ಹುದ್ದೆಗಳು, ಇದೆಲ್ಲವೂ ಒಟ್ಟು 1820 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ 1000 ಹುದ್ದೆಗಳ ನೇಮಕಾತಿ ನಡೆಯಲಿದೆ..

ವಿದ್ಯಾರ್ಹತೆ:

ಗ್ರಾಮ ಲೆಕ್ಕಾಧಿಕಾರಿಗೆ ಹುದ್ದೆಗೆ ಪಿಯುಸಿ ಪಾಸ್ ಆಗಿರುವವರು, ಸರ್ವೇಯರ್ ಹುದ್ದೆಗೆ ಡಿಪ್ಲೊಮಾ, ಐಟಿಐ, ಬಿಇ, ಬಿಟೆಕ್, ಬೇರೆ ಪದವಿ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಅಧಿಕೃತವಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಪೂರ್ತಿ ಮಾಹಿತಿ ಸಿಗಲಿದೆ..

Karnataka Revenue Department Recruitment 2024: Here are complete details about the job.

Leave a comment