Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Property: ಅಪ್ಪನ ಆಸ್ತಿಯಲ್ಲಿ ಮನೆ ಮಗಳಿಗೆ ಪಾಲು ಸಿಕ್ತಿಲ್ವಾ? ಕಾನೂನಿನ ಈ ನಿಯಮ ತಿಳಿಯಿರಿ

ಆದರೆ ಆಸ್ತಿ ವಿಭಜನೆ, ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ಸಿಗಬೇಕು ಎನ್ನುವ ನಿಯಮಗಳ ಬಗ್ಗೆ ತಿಳಿದುಕೊಂಡರೆ, ಇಂಥ ಯಾವುದೇ ಸಮಸ್ಯೆಗಳು ಆಗುವುದಿಲ್ಲ.

Property: ನಮ್ಮ ದೇಶದಲ್ಲಿ ಕಾನೂನಿನ ವಿಚಾರಕ್ಕೆ ಸಂಬಂಧಿಸಿದ ಹಲವು ವಿಚಾರಗಳು ನಡೆಯುತ್ತದೆ. ಅದರಲ್ಲೂ ಆಸ್ತಿಗೆ ಸಂಬಂಧಿಸಿದ ಹಾಗೆ, ಜಗಳ ಕದನ, ಮನಸ್ತಾಪ ಇದೆಲ್ಲವೂ ಅವರವರ ಮನೆಗಳಲ್ಲೇ ನಡೆಯುತ್ತದೆ. ಆಸ್ತಿ ವಿಚಾರಕ್ಕೆ ಇರುವ ಕಾನೂನಿನ ಬಗ್ಗೆ ಸರಿಯಾದ ಅರಿವು ಇಲ್ಲದೆ ತಮ್ಮಿಷ್ಟ ಬಂದ ಹಾಗೆ ವರ್ತಿಸಿ, ವೈಮನಸ್ಸುಗಳಿಗೆ ಕಾರಣ ಆಗುವ ಹಾಗೆ ಮಾಡುತ್ತಾರೆ ಜನರು. ಮನೆಗಳು ಒಡೆದು ಹೋಗುವುದು ಆಸ್ತಿ ವಿಚಾರಕ್ಕೆ ಎಂದರೆ ತಪ್ಪಲ್ಲ.

ಆದರೆ ಆಸ್ತಿ ವಿಭಜನೆ, ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ಸಿಗಬೇಕು ಎನ್ನುವ ನಿಯಮಗಳ ಬಗ್ಗೆ ತಿಳಿದುಕೊಂಡರೆ, ಇಂಥ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಸರ್ಕಾರ ಕೂಡ ಆಸ್ತಿಗೆ ಸಂಬಂಧಪಟ್ಟ ನಿಯಮಗಳಲ್ಲಿ ತಿದ್ದುಪಡಿ ಮಾಡುತ್ತಿರುತ್ತದೆ, ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತದೆ. ಇಂದು ಆ ನಿಯಮಗಳ ಬಗ್ಗೆ ತಿಳಿಯೋಣ..

ಅಪ್ಪನ ಆಸ್ತಿಯಲ್ಲಿ ಮಗಳ ಹಕ್ಕು?

ಕೆಲ ವರ್ಷಗಳ ಹಿಂದೆ ಅಪ್ಪನ ಆಸ್ತಿಯಲ್ಲಿ ಮಗಳಿಗೆ ಯಾವುದೇ ಹಕ್ಕು ಇರಲಿಲ್ಲ. ತಂದೆ ಆಗಲಿ ಅಥವಾ ಒಡಹುಟ್ಟಿದವರಾಗಲಿ ಮನೆಯ ಮಗಳಿಗೆ ಆಸ್ತಿಯಲ್ಲಿ ಒಂದು ಬಿಡಿಗಾಸಿನಷ್ಟು ಪಾಲು ಕೊಡುತ್ತಿರಲಿಲ್ಲ, ಮದುವೆ ಮಾಡಿ ಕಳಿಸಿದರೆ ಮುಗಿಯಿತು ಎನ್ನುತ್ತಿದ್ದರು. ಆದರೆ 2005ರಲ್ಲಿ ಜಾರಿಗೆ ತಂದ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅನುಸಾರ ತಂದೆ ಆಸ್ತಿಯಲ್ಲಿ ಗಂಡು ಮಗನಿಗೆ ಇರುವಷ್ಟೇ ಹಕ್ಕು ಹೆಣ್ಣುಮಗಳಿಗೂ ಇರುತ್ತದೆ ಎಂದು ತಿಳಿಸಲಾಯಿತು. ಜೊತೆಗೆ ಹೆಣ್ಣುಮಗಳಿಗೂ ಆಸ್ತಿಯಲ್ಲಿ ಸಮಪಾಲು ಸಿಗಬೇಕು ಎಂದು ಕಾನೂನನ್ನು ಜಾರಿಗೆ ತರಲಾಯಿತು.

ಈ ವಿಚಾರದಲ್ಲಿ ಮತ್ತೊಂದು ಗೊಂದಲ ಜನರಲ್ಲಿದೆ, ಒಂದು ವೇಳೆ ತಂದೆಯ ಆಸ್ತಿ ಸ್ವಯಾರ್ಜಿತ ಆಸ್ತಿಯಾಗಿದ್ದರೆ ಅವರು ತಮ್ಮ ಎಲ್ಲಾ ಆಸ್ತಿ ಗಂಡು ಮಗನಿಗೆ ಸೇರಬೇಕು ಎಂದು ವಿಲ್ ಮಾಡಿಸಿ ಇಟ್ಟಿದ್ದರೆ, ಆ ಆಸ್ತಿಯಲ್ಲಿ ಹೆಣ್ಣುಮಗಳಿಗೆ ಪಾಲು ಸಿಗುತ್ತಾ ಎನ್ನುವ ಒಂದು ಪ್ರಶ್ನೆ ಇದೆ. ಕಾನೂನಿನ ಪ್ರಕಾರ ಅದಕ್ಕೆ ಉತ್ತರ ಏನು ಎಂದು ತಿಳಿದುಕೊಳ್ಳೋಣ..

ಸ್ವಯಾರ್ಜಿತ ಆಸ್ತಿಯ ಪಾಲು ಯಾರಿಗೆ?

ತಂದೆಯ ಆಸ್ತಿ ಪಿತ್ರಾರ್ಜಿತ ಆಗಿದ್ದರೆ, ಗಂಡು ಮಕ್ಕಳಷ್ಟೇ ಸಮಾನವಾದ ಹಕ್ಕು ಹೆಣ್ಣು ಮಕ್ಕಳದ್ದು ಆಗಿರುತ್ತದೆ. ಆಡ್ಸ್ರೆ ತಂದೆಯ ಆಸ್ತಿ ಸ್ವಯಾರ್ಜಿತ ಆಗಿದ್ದು, ಅವರು ಬದುಕಿದ್ದಾಗಲೇ ಇಡೀ ಆಸ್ತಿ ಮಗನಿಗೆ ಸೇರಬೇಕು ಎಂದು ವಿಲ್ ಮಾಡಿಸಿ ಇಟ್ಟಿದ್ದರೆ, ಆಗ ಹೆಣ್ಣುಮಗಳು ಯಾರಿಗೂ ಪ್ರಶ್ನೆ ಮಾಡಲು ಸಾಧ್ಯ ಆಗುವುದಿಲ್ಲ. ಪಿತ್ರಾರ್ಜಿತ ಆಸ್ತಿ ಆಗಿದ್ದು, ಅದನ್ನು ಗಂಡುಮಕ್ಕಳ ಹೆಸರಿಗೆ ಮಾಡಿದರೆ, ಅದನ್ನು ಹೆಣ್ಣುಮಕ್ಕಳು ಕಾನೂನಿನ ಮೂಲಕ ಪ್ರಶ್ನಿಸಿ, ತಮ್ಮ ಪಾಲನ್ನು ಪಡೆಯಬಹುದು.

ಅಕಸ್ಮಾತ್ ವಿಲ್ ನಲ್ಲಿ ಹೆಣ್ಣುಮಗಳನ್ನು ಹೊರಗಿಟ್ಟಿದ್ದರೆ, ಆಕೆಯನ್ನು ಯಾಕೆ ಆಸ್ತಿಯಿಂದ ಹೊರಗಿಟ್ಟಿದ್ದೀರಿ ಎನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆ ಜನರು ಉತ್ತರಿಸಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ಆಸ್ತಿ ವಿಭಜನೆ ಆಗಿರುವುದು ಸರಿ ಅನ್ನಿಸಿಲ್ಲ ಎಂದರೆ, ಅವರು ಕಾನೂನಿನ ಪ್ರಕಾರ ಪ್ರಶ್ನೆ ಮಾಡಬಹುದು.

Did daughter get share in father’s property? Know this rule of law

Leave a comment