Vidyasiri Scholarship 2023-24: 2023-24ನೇ ಸಾಲಿನ ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ! ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಪೋಸ್ಟ್ ಮೆಟ್ರಿಕ್ ಕೋರ್ಸ್ ಮಾಡುತ್ತಿರುವ ಹಿಂದುಳಿದ ವರ್ಗದ ಅಂದರೆ OBC, ಪ್ರವರ್ಗ1 ಅಲೆಮಾರಿ ಮತ್ತು ಅರೆಅಲೆಮಾರಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
Vidyasiri Scholarship 2023-24: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಬಡ ಕುಟುಂಬದಲ್ಲಿ ಜನಿಸಿರುವ, ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ಮೂಲಕ ಸ್ಕಾಲರ್ಶಿಪ್, ಫೀಸ್ ಮರುಪಾವತಿ, ಊಟ ವಸತಿ ಸೌಲಭ್ಯ ಇದೆಲ್ಲವನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಈ ಸ್ಕಾಲರ್ಶಿಪ್ ಇಂದ ಸಹಾಯ ಆಗುತ್ತಿದೆ ಎಂದರೆ ತಪ್ಪಲ್ಲ. ಈ ವರ್ಷ 2023-24ನೇ ಸಾಲಿಗೆ ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ಅಧಿಸೂಚನೆ ಬಂದಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
Vidyasiri Scholarship for Post Matric Students 2024:
ಸ್ಕಾಲರ್ಶಿಪ್ ಹೆಸರು: ಪೋಸ್ಟ್ ಮೆಟ್ರಿಕ್ ಸ್ಕಾಲರ್ಶಿಪ್ 2024
ಇಲಾಖೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಹಣಕಾಸಿನ ವಿಚಾರದಲ್ಲಿ ಹಿಂದಿದ್ದು, ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
ವಿದ್ಯಾಸಿರಿ ವಿದ್ಯಾರ್ಥಿವೇತನದ ಅರ್ಹತೆಗಳು:
ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಪೋಸ್ಟ್ ಮೆಟ್ರಿಕ್ ಕೋರ್ಸ್ ಮಾಡುತ್ತಿರುವ ಹಿಂದುಳಿದ ವರ್ಗದ ಅಂದರೆ OBC, ಪ್ರವರ್ಗ1 ಅಲೆಮಾರಿ ಮತ್ತು ಅರೆಅಲೆಮಾರಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾಸಿರಿಯ ಅನುಕೂಲತೆಗಳು:
ಸ್ಕಾಲರ್ಶಿಪ್, ಕಾಲೇಜ್ ಫೀಸ್ ಮರುಪಾವತಿ, ವಿದ್ಯಾಸಿರಿಯ ಊಟ ವಸತಿ ಸೌಲಭ್ಯ. ಇದಿಷ್ಟು ಉಚಿತವಾಗಿ ಸಿಗುತ್ತದೆ.
ಬೇಕಿರುವ ದಾಖಲೆಗಳು:
- ಆಧಾರ್ ಕಾರ್ಡ್ ಡೀಟೇಲ್ಸ್, ಆಧಾರ್ ನಲ್ಲಿರುವ ಸರಿಯಾದ ಹೆಸರು
- Phone number
- email id
- 10ನೇ ತರಗತಿ ರಿಜಿಸ್ಟ್ರೇಷನ್ ನಂಬರ್
- ಕ್ಯಾಸ್ಟ್ ಸರ್ಟಿಫಿಕೇಟ್ ಹಾಗೂ ಇನ್ಕಮ್ ಸರ್ಟಿಫಿಕೇಟ್ ನ Rd Number
- ವಿಕಲಚೇತನ ವಿದ್ಯಾರ್ಥಿ ಆಗಿದ್ದರೆ UIDAI number
- ವಿದ್ಯಾರ್ಥಿಯ ಸಂಪೂರ್ಣ ಮನೆ ವಿಳಾಸ
- ವಿದ್ಯಾರ್ಥಿಯ ಕಾಲೇಜ್ ಅಡ್ಮಿಷನ್ ನಂಬರ್ ಅಥವಾ ರಿಜಿಸ್ಟರ್ ನಂಬರ್
- ಅಗತ್ಯವಿರುವ ದಾಖಲೆಗಳ ಇದೃಢೀಕರಣದ ಸಂಖ್ಯೆ
- ಹಾಸ್ಟೆಲ್ ಡೀಟೇಲ್ಸ್
ಅಪ್ಲೈ ಮಾಡುವ ಪ್ರಕ್ರಿಯೆ:
SSP Scholarship ಪೋರ್ಟಲ್ ಮೂಲಕ ನೇರವಾಗಿ ಅಪ್ಲೈ ಮಾಡಬಹುದು. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕ ಆಗಿದ್ದು, ಅಷ್ಟರ ಒಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. http://ssp.postmatric.karnataka.gov.in ಇದು ಅಧಿಕೃತ ವೆಬ್ಸೈಟ್ ಆಗಿದೆ.
Application Invitation for Vidyasiri Scholarship for the Year 2023–24