Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ration Card: ರೇಷನ್ ಕಾರ್ಡ್ ಇರುವವರು ಈ ಕೆಲಸ ಮಾಡಿಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್! ಫೆಬ್ರವರಿ 29 ಕೊನೆಯ ದಿನಾಂಕ

ಇದೀಗ ಸರ್ಕಾರವು ನಮ್ಮ ರಾಜ್ಯದಲ್ಲಿ ಯಾರೆಲ್ಲರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು ಫೆಬ್ರವರಿ 29ರ ಒಳಗೆ ರೇಷನ್ ಕಾರ್ಡ್ ಗೆ

Ration Card: ನಮ್ಮ ರಾಜ್ಯದಲ್ಲಿ ಈಗ ಬಿಪಿಎಲ್ ರೇಷನ್ ಕಾರ್ಡ್ ಗೆ ಭಾರಿ ಬೇಡಿಕೆ ಇದೆ. ಬಿಪಿಎಲ್ ರೇಷನ್ ಕಾರ್ಡ್ ಇಲ್ಲ ಅಂದರೆ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ. ಸರ್ಕಾರದಿಂದ ಇನ್ಯಾವುದೇ ಅನುಕೂಲತೆಗಳು ಸಿಗೋದಿಲ್ಲ. ಹಾಗಾಗಿ ರೇಷನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಆದರೆ ಈಗ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಗುಡ್ ನ್ಯೂಸ್ ಜಾರಿಗೆ ತಂದಿದ್ದು, ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ಈ ಒಂದು ಪ್ರಮುಖವಾದ ಕೆಲಸವನ್ನು ಇದೇ ಫೆಬ್ರವರಿ 29ರ ಒಳಗೆ ಮಾಡಲೇಬೇಕು, ಇಲ್ಲದಿದ್ದರೆ ರೇಷನ್ ಕಾರ್ಡ್ ರದ್ದಾಗಬಹುದು ಎಂದು ತಿಳಿಸಿದೆ.

ರೇಷನ್ ಕಾರ್ಡ್ eKYC ಕಡ್ಡಾಯ:

ಇದೀಗ ಸರ್ಕಾರವು ನಮ್ಮ ರಾಜ್ಯದಲ್ಲಿ ಯಾರೆಲ್ಲರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು ಫೆಬ್ರವರಿ 29ರ ಒಳಗೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಜೊತೆಗೆ ekyc ಮಾಡಿಸಿರಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಫೋನ್ ನಂಬರ್ ಅಪ್ಡೇಟ್ ಕೂಡ ಮಾಡಿಸಿಕೊಳ್ಳಬಹುದು. ಇದಿಷ್ಟು ಕೆಲಸಕ್ಕೆ ಫೆಬ್ರವರಿ 29 ಕೊನೆಯ ದಿನಾಂಕ ಆಗಿದ್ದು, ಈ ದಿನಾಂಕದ ಒಳಗೆ eKYC ಮಾಡಿಸಬೇಕು.

eKYC ಮಾಡಿಸದೆ ಇದ್ದರೆ ಆಗುವ ಪರಿಣಾಮವೇನು?

ಸರ್ಕಾರ ತಿಳಿಸಿರುವ ಕೊನೆಯ ದಿನಾಂಕದ ಒಳಗೆ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಜನರು eKYC ಮಾಡಿಸಲಿಲ್ಲ ಎಂದರೆ ಅಂಥವರ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಕೆಲಸಮಯ ಬಂದ್ ಮಾಡಲಾಗುತ್ತದೆ. ಈ ಕೆಲಸ ಮಾಡಿದ ಮೇಲಷ್ಟೇ ನಿಮ್ಮ ಕಾರ್ಡ್ ಗಳು ಸಕ್ರಿಯವಾಗುವುದು. ರೇಷನ್ ಕಾರ್ಡ್ ಅಂತ್ಯೋದಯ ಕಾರ್ಡ್ ಬಂದ್ ಆದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಈ ಯಾವುದೇ ಯೋಜನೆಯ ಹಣ ಆ ತಿಂಗಳು ಬರದೇ ಹೋಗಬಹುದು. ಹಾಗಾಗಿ ಫೆಬ್ರವರಿ 29ರ ಒಳಗೆ eKYC ಮಾಡಿಸಿ.

ನಕಲಿ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ:

ಬಿಪಿಎಲ್ ಕಾರ್ಡ್ ಗಳನ್ನು ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ವಿಶೇಷವಾಗಿ ಜಾರಿಗೆ ತರಲಾಗಿದೆ. ಆದರೆ ಕೆಲವರು ಉಳ್ಳವರಾಗಿದ್ದರು ಸಹ, ಸರ್ಕಾರಿ ಕೆಲಸ ಇದ್ದು, ಟ್ಯಾಕ್ಸ್ ಪಾವತಿ ಮಾಡುತ್ತಿರುವವರು ಸಹ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಇಂಥ ರೇಷನ್ ಕಾರ್ಡ್ ಗಳನ್ನು ಬಂದ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಶುರು ಮಾಡಿದ್ದು, ಪ್ರತಿ ತಿಂಗಳು ಚೆಕ್ ಮಾಡಿ ನಕಲಿ ರೇಷನ್ ಕಾರ್ಡ್ ಗಳನ್ನು ಬಂದ್ ಮಾಡುತ್ತಿದೆ.

Ration Card New Update 2024

Leave a comment