Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Fastag ekyc: ವಾಹನಗಳಿಗೆ Fastag ekyc ಮಾಡಿಸಲು ಕೊನೆಯ ದಿನಾಂಕ ಫಿಕ್ಸ್! ಈ ರೀತಿ ಮಾಡಿದರೆ ನಿಮ್ಮ ಕೆಲಸ ಸುಲಭ!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂದಿರುವ ವ್ಯವಸ್ಥೆ ಇದಾಗಿದೆ. ಟೋಲ್ ಗಳಲ್ಲಿ ಶುಲ್ಕ ಪಾವತಿ ಮಾಡುವ ವ್ಯವಸ್ಥೆ ಇದು, Radio Frequency Identification (RFID) Technology ಬಳಕೆ ಇಂದ ತಯಾರಾಗಿರುವ ಸ್ಟಿಕರ್ ಇದಾಗಿರುತ್ತದೆ.

Fastag ekyc: ವಾಹನಗಳು ಹೆದ್ದಾರಿಗಳಲ್ಲಿ ಚಲಿಸುವಾಗ ಟೋಲ್ ಪಾವತಿ ಮಾಡಲು Fastag ಬಲಯ ಮಾಡಲಾಗುತ್ತಿದೆ. ಇದರಿಂದ ಟೋಲ್ ಪಾವತಿ ಸುಲಭ. ಇದೀಗ Fastag ಜಾರಿಗೆ ತಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (IHMCL) ಇದೀಗ ಫಾಸ್ಟ್ ಟ್ಯಾಗ್ ಗೆ ekyc ಮಾಡಿಸಬೇಕು ಎಂದು ಹೊಸ ಸೂಚನೆ ನೀಡಿದ್ದು, ಇದನ್ನು One Vehicle One Fastag ಎಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇದರ ಅನುಸಾರ ನೀವು ನಿಮ್ಮ ವಾಹನಕ್ಕೆ Fastag ekyc ಮಾಡಿಸುವುದು ಕಡ್ಡಾಯ ಆಗಿದ್ದು, ekyc ಮಾಡಿಸಲು ಕೊನೆಯ ದಿನಾಂಕ ಫೆಬ್ರವರಿ 29 ಆಗಿರುತ್ತದೆ.

ಹಾಗಾಗಿ ಯಾರೆಲ್ಲಾ ಇನ್ನು Fastag ekyc ಮಾಡಿಸಿಲ್ಲವೋ ಅವರೆಲ್ಲರೂ ಕೊನೆಯ ದಿನಾಂಕದ ಒಳಗೆ ekyc ಮಾಡಿಸಿಕೊಳ್ಳುವುದು ಕಡ್ಡಾಯ ಆಗಿರುತ್ತದೆ. ಹಾಗಿದ್ದಲ್ಲಿ ಫಾಸ್ಟ್ಯಾಗ್ ಅಂದ್ರೆ ಏನು? ಇದು ಹೇಗೆ ಕೆಲಸ ಮಾಡುತ್ತದೆ? ಇಕೆವೈಸಿ ಮಾಡಿಸುವುದು ಹೇಗೆ? ಇದೆಲ್ಲವನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ನೋಡಿ…

What is FASTag? how does it work? (ಫಾಸ್ಟ್ಯಾಗ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?)

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂದಿರುವ ವ್ಯವಸ್ಥೆ ಇದಾಗಿದೆ. ಟೋಲ್ ಗಳಲ್ಲಿ ಶುಲ್ಕ ಪಾವತಿ ಮಾಡುವ ವ್ಯವಸ್ಥೆ ಇದು, Radio Frequency Identification (RFID) Technology ಬಳಕೆ ಇಂದ ತಯಾರಾಗಿರುವ ಸ್ಟಿಕರ್ ಇದಾಗಿರುತ್ತದೆ. ಈ ಸ್ಟಿಕರ್ ಅನ್ನು ನಿಮ್ಮ ವೆಹಿಕಲ್ ನ ಮುಂಭಾಗಕ್ಕೆ ಅಂಟಿಸಲಾಗಿರುತ್ತದೆ, ಹೆದ್ದಾರಿಗಳಲ್ಲಿ ನೀವು ಪ್ರಯಾಣ ಮಾಡುವಾಗ, ಟೋಲ್ ಗಳಲ್ಲಿ Automatic ಆಗಿ Fastag sticker ಮೂಲಕ ನಿಮ್ಮ ವಾಹನದ ಗುರುತು ಹಿಡಿದು ನಿಮ್ಮ ಅಕೌಂಟ್ ಇಂದ ನೇರವಾಗಿ Toll ಹಣ ಡೆಬಿಟ್ ಆಗುತ್ತದೆ. Fastag ಅನ್ನು ನೀವು ಮೊಬೈಲ್ ರೀಚಾರ್ಜ್ ಮಾಡುವ ಹಾಗೆ ಮೊದಲೇ ರೀಚಾರ್ಜ್ ಮಾಡಿಕೊಂಡಿರಬೇಕು.

FASTag Benefits:

Fastag ಬಳಕೆ ಶುರು ಆದಾಗಿನಿಂದ ವಾಹನ ಚಲಿಸುವವರು ಟೋಲ್ ಹತ್ತಿರ ಹಣ ಪಾವತಿ ಮಾಡಲು ಕ್ಯೂ ನಿಲ್ಲುವುದು, ಕಾಯುವುದು ತಪ್ಪಿದೆ. ಇದರಿಂದ ಟೋಲ್ ಬಳಿ ಟ್ರಾಫಿಕ್ ಸಮಸ್ಯೆ ಆಗುತ್ತಿಲ್ಲ.

FASTag ekyc ಮಾಡಿಸುವುದು ಯಾಕೆ?

ಇಕೆವೈಸಿ ಮಾಡಿಸುವುದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಡ್ಡಾಯಗೊಳಿಸಿದೆ ಅದಕ್ಕೆ ಕಾರಣ ಏನು ಎಂದರೆ, ಕೆಲವರು ನಕಲಿ ಫಾಸ್ಟ್ಯಾಗ್ ಬಳಕೆ ಮಾಡುತ್ತಿದ್ದಾರೆ, ಅಂಥವರ ಬಗ್ಗೆ ಗೊತ್ತಾಗುತ್ತದೆ ಹಾಗೆಯೇ ಫಾಸ್ಟ್ಯಾಗ್ ಬಳಕೆಯಲ್ಲಿ ನಕಲಿತನ ಇರಬಾರದು ಎನ್ನುವ ಕಾರಣಕ್ಕೆ ikyc ಅನ್ನು ಕಡ್ಡಾಯಗೊಳಿಸಲಾಗಿದೆ.

ಫೋನ್ ನಲ್ಲಿ ekyc ಮಾಡಿಕೊಳ್ಳುವ ವಿಧಾನ:

ಈ ಸುಲಭ ರೀತಿಯಲ್ಲಿ ನೀವು ನಿಮ್ಮ ಫೋನ್ ಇಂದಲೇ FASTag Ekyc ಮಾಡಿಕೊಳ್ಳಬಹುದು..

1. https://fastag.ihmcl.com/ ಈ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿ, ಇದು ಫಾಸ್ಟ್ಯಾಗ್ ಅಧಿಕೃತ ವೆಬ್ಸೈಟ್ ಆಗಿದ್ದು, Login ಆಯ್ಕೆಯನ್ನು ಸೆಲೆಕ್ಟ್ ಮಾಡಿ.

2. ಇಲ್ಲಿ Register ಆಗಿರುವ ಫೋನ್ ನಂಬರ್ ಮತ್ತು ಪಾಸ್ವರ್ಡ್ ಹಾಕಿ ಅಲ್ಲೇ ಬರುವ ಕ್ಯಾಪ್ಚ ಕೋಡ್ ಎಂಟರ್ ಮಾಡಿ, ಬಳಿಕ Get OTP ಆಯ್ಕೆ ಸೆಲೆಕ್ಟ್ ಮಾಡಿ, OTP ಹಾಕಿ, ಲಾಗಿನ್ ಮಾಡಿ.

3. ಲಾಗಿನ್ ಆದಮೇಲೆ My Profile ಎನ್ನುವ ಆಯ್ಕೆಯ ಒಳಗೆ ekyc ಆಪ್ಶನ್ ಸೆಲೆಕ್ಟ್ ಮಾಡಿ. ಇಲ್ಲಿ Customer Type ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಲ್ಲಿ ನಿಮ್ಮ ಡೀಟೇಲ್ಸ್, ಆಧಾರ್ ಕಾರ್ಡ್ ಡೀಟೇಲ್ಸ್, ಅಡ್ರೆಸ್ ಪ್ರೂಫ್ ಇದೆಲ್ಲವನ್ನು ಕೇಳುತ್ತದೆ. ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಬಳಿಕ Submit ಆಪ್ಶನ್ ಕ್ಲಿಕ್ ಮಾಡಿ.
ಈ ಮೂರು ಹಂತಗಳನ್ನು ಅನುಸರಿಸಿದರೆ ಮನೆಯಲ್ಲೇ, ನಿಮ್ಮ ಮೊಬೈಲ್ ನಲ್ಲೇ ಸುಲಭವಾಗಿ ekyc ಮಾಡಿಕೊಳ್ಳಬಹುದು.

February 29th is the last date fixed for Fastag Ekyc for vehicles.

Leave a comment