8th Pay Commission: ಕೇಂದ್ರ ಚುನಾವಣೆಗೂ ಮುನ್ನ ಜಾರಿ ಆಗಲಿದೆಯಾ 8 ನೇ ವೇತನ ಆಯೋಗ? ಇಲ್ಲಿದೆ ಸರ್ಕಾರೀ ನೌಕರಿರಿಗೆ ಸಿಹಿ ಸುದ್ದಿ.
1946 ಜನವರಿ ತಿಂಗಳಲ್ಲಿ ಮೊದಲ ಆಯೋಗದ ರಚನೆಯಾಗಿತ್ತು. ಫೆಬ್ರವರಿ 28, 2014 ರಂದು ಏಳನೇ ಆಯೋಗವು ರಚನೆ ಆಗಿ. 2016ರಲ್ಲಿ ಜಾರಿಗೆ ಬಂದಿತ್ತು.
8th Pay Commission: ವೇತನ ಆಯೋಗ ಎಂದರೆ ಏನು ಎಂಬ ಪ್ರಶ್ನೆ ಬರಬಹುದು. ವೇತನ ಆಯೋಗ ಎಂದರೆ ಭಾರತದ ಕೇಂದ್ರ ಸರ್ಕಾರವು ಪ್ರತಿ ಹತ್ತು ವರುಷಗಳಿಗೆ ಒಮ್ಮೆ ವೇತನ ಆಯೋಗ ರಚನೆ ಆಗಿ ನೌಕರರ ವೇತನದ ಬಗ್ಗೆ ಪರಿಷ್ಕರಣೆ ಮಾಡುತ್ತದೆ. ಅದು 2024 ಕ್ಕೇ 8 ನೇ ವೇತನ ಆಯೋಗ ಜಾರಿ ಆಗುವ ಸಾಧ್ಯತೆ ಇದೆ.
ಕೇಂದ್ರದ ಮಧ್ಯಂತರ ಬಜೆಟ್ ನಡೆದಿದೆ. ಈಗ ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ವೇತನ ಆಯೋಗವನ್ನು ರಚಿಸುವ ಬಗ್ಗೆ ಆಲೋಚನೆ ಮಾಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. 1946 ಜನವರಿ ತಿಂಗಳಲ್ಲಿ ಮೊದಲ ಆಯೋಗದ ರಚನೆಯಾಗಿತ್ತು. ಫೆಬ್ರವರಿ 28, 2014 ರಂದು ಏಳನೇ ಆಯೋಗವು ರಚನೆ ಆಗಿ. 2016ರಲ್ಲಿ ಜಾರಿಗೆ ಬಂದಿತ್ತು. ಇದೀಗ ಎಂಟನೇ ಆಯೋಗವನ್ನೂ ಕೇಂದ್ರ ಸರ್ಕಾರಿ ನೌಕರರು ಬಯಸುತ್ತಿದ್ದಾರೆ.
ರಾಜ್ಯಸಭೆಯಲ್ಲಿ 8 ನೇ ವೇತನ ಆಯೋಗದ ಬಗ್ಗೆ ಸಚಿವ ಪಂಕಜ್ ಚೌಧರಿ ಏನು ಹೇಳಿದರೂ ?
ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ನಮಗೆ ಯಾವುದೇ ಪ್ರಸ್ತಾವನೆ ಇಲ್ಲ. ಆದ್ದರಿಂದ ಏಳನೇ ವೆತಾನಾ ಆಯೋಗದ ಪ್ರಕಾರ ಭತ್ಯೆಗಳು ನಿರ್ಧಾರ ಆಗುತ್ತವೆ ಎಂದರು. ಹಾಗೂ ಮುಂದುವರೆದು ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿ ಕಡೆಯವರು ತಮ್ಮ ವೇತನ ಅಥವಾ ಭತ್ಯೆ ಮತ್ತು ಪಿಂಚಣಿಗಳನ್ನು ಪರಿಶೀಲಿಸಲು ಹೊಸ ಆಯೋಗದ ರಚನೆಯನ್ನ ಮಾಡಲೇ ಬೇಕಾಗಿಲ್ಲ. ನೌಕರರ ಕಾರ್ಯಕ್ಷಮತೆಯನ್ನು ಆಧರಿಸಿ ಸಂಬಳ ಹೆಚ್ಚಿಸುವ ಯೋಜನೆ ಇದೆ ಎಂದು ತಿಳಿಸಿದರು.
ತುಟ್ಟಿಭತ್ಯೆ ಮೊತ್ತ ಜಾಸ್ತಿ ಆಗಬಹುದೇ?
48.62 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.85 ಲಕ್ಷ ಪಿಂಚಣಿ ಪಡೆಯುವವರು
ಸದ್ಯದಲ್ಲಿ ತುಟ್ಟಿಭತ್ಯೆ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವರುಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಆಗುವುದರಿಂದ ಚುನಾವಣೆಗೂ ಮುನ್ನ ತುಟ್ಟಿಭತ್ಯೆ ಸಿಗುವ ಸಾಧ್ಯತೆ ಹೆಚ್ಚಿದೆ.
8th Pay Commission 2024: New Update