Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sovereign Gold Bond 2024: ಕೇವಲ 8 ವರ್ಷದಲ್ಲಿ 141% ರಿಟರ್ನ್ಸ್! ಇನ್ನೆರಡೇ ದಿನಗಳಲ್ಲಿ ಈ ಅದ್ಭುತ ಗೋಲ್ಡ್ ಬಾಂಡ್ ಖರೀದಿ ಶುರು! ಇಂತ ಅವಕಾಶ ಮಿಸ್ ಮಾಡ್ಕೋಬೇಡಿ.

ಹೂಡಿಕೆಗೆ ಅತ್ಯುತ್ತಮವಾದ ಆಯ್ಕೆಯಾಗಿದ್ದು, ಒಳ್ಳೆಯ ರಿಟರ್ನ್ಸ್ ಕೊಡುವ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ ಇನ್ನೇನು ಕೆಲವೇ ದಿನಗಳಲ್ಲಿ 2024ರ ಫೆಬ್ರವರಿ 12ರಂದು ಶುರುವಾಗಲಿದೆ.

Get real time updates directly on you device, subscribe now.

Sovereign Gold Bond 2024: ಹೂಡಿಕೆ ಎಂದು ಬಂದಾಗ ಬ್ಯಾಂಕ್ ಗಳಲ್ಲಿ, ಪೋಸ್ಟ್ ಆಫೀಸ್ ನಲ್ಲಿ, ಭೂಮಿ ಮೇಲೆ ಹೂಡಿಕೆ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡುವುದು ಸಹ ಒಳ್ಳೆಯ ಆಯ್ಕೆ ಎಂದರೆ ತಪ್ಪಲ್ಲ. ಗೋಲ್ಡ್ ಬಾಂಡ್ ಗಳು ಒಳ್ಳೆಯ ರಿಟರ್ನ್ಸ್ ನೀಡುತ್ತದೆ. ಅವುಗಳನ್ನು Sovereign Gold Bond ಎಂದು ಸಹ ಕರೆಯುತ್ತಾರೆ. ಸರ್ಕಾರ ವತಿಯಿಂದಲು ಇವುಗಳನ್ನು ನಡೆಸಲಾಗುತ್ತದೆ.

ಸಾವೆರಿನ್ ಗೋಲ್ಡ್ ಬಾಂಡ್:

ಹೂಡಿಕೆಗೆ ಅತ್ಯುತ್ತಮವಾದ ಆಯ್ಕೆಯಾಗಿದ್ದು, ಒಳ್ಳೆಯ ರಿಟರ್ನ್ಸ್ ಕೊಡುವ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ ಇನ್ನೇನು ಕೆಲವೇ ದಿನಗಳಲ್ಲಿ 2024ರ ಫೆಬ್ರವರಿ 12ರಂದು ಶುರುವಾಗಲಿದೆ. ಫೆಬ್ರವರಿ 16 ಗೋಲ್ಡ್ ಬಾಂಡ್ ಖರೀದಿಗೆ ಕೊನೆಯ ದಿನಾಂಕ ಆಗಿದ್ದು, ಅಷ್ಟರ ಒಳಗೆ ನಿಮಗೆ ಆಸಕ್ತಿ ಇದ್ದರೆ ನೀವು ಸಹ ಗೋಲ್ಡ್ ಬಾಂಡ್ ಖರೀದಿ ಮಾಡಬಹುದು.

ಕೇಂದ್ರದಿಂದ ಅಧಿಕೃತ ಮಾಹಿತಿ:

ಸಾವೆರಿನ್ ಗೋಲ್ಡ್ ಬಾಂಡ್ ಸರ್ಕಾರದ ಕಡೆಯಿಂದಲೇ ನಡೆಯಲಿದ್ದು, ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯದಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಎಲ್ಲೆಲ್ಲಿ ಗೋಲ್ಡ್ ಬಾಂಡ್ ಪಡೆಯಬಹುದು ಎಂದು ತಿಳಿಸಿದ್ದಾರೆ. ಬ್ಯಾಂಕ್‌, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌, ಕ್ಲಿಯರಿಂಗ್‌ ಕಾರ್ಪೊರೇಷನ್‌, ಕೆಲವು ಪೋಸ್ಟ್‌ ಆಫೀಸ್‌, ಸ್ಟಾಕ್‌ ಎಕ್ಸ್ಛೇಂಜ್ ಗಳಾದ ಬಾಂಬೆ ಷೇರು ಮಾರ್ಕೆಟ್ ಮತ್ತು ನ್ಯಾಷನಲ್ ಷೇರು ಮಾರ್ಕೆಟ್ ಗಳಲ್ಲಿ ಸಾವೆರಿನ್ ಗೋಲ್ಡ್ ಬಾಂಡ್ ಖರೀದಿ ಮಾಡಬಹುದು.

ಸಾವೆರಿನ್ ಗೋಲ್ಡ್ ಬಾಂಡ್ ಯಾಕೆ ಬೇಕು?

1. ನೀವು ಚಿನ್ನವನ್ನು ಖರೀದಿ ಮಾಡಿದರೆ, ಅವುಗಳನ್ನು ರಕ್ಷಣೆ ಮಾಡುವ ಹೊಣೆ ನಿಮ್ಮ ಮೇಲೆ ಇರುತ್ತದೆ. ಚಿನ್ನವನ್ನು ಯಾವಾಗಲೂ ಕಾಯ್ದುಕೊಂಡು ಇರಲು ಸಾಧ್ಯವಿಲ್ಲ. ಹಾಗಾಗಿ ಭೌತಿಕವಾಗಿ ಚಿನ್ನ ಖರೀದಿಗೆ ಪರ್ಯಾಯವಾಗಿ ಬಂದಿರುವುದೇ ಸಾವೆರಿನ್ ಗೋಲ್ಡ್ ಬಾಂಡ್.

2. ಅಸಲಿ ವಿಷಯ ಏನು ಎಂದರೆ ಚಿನ್ನದ ಆಭರಣ ಖರೀದಿ ಮಾಡುವುದಕ್ಕಿಂತ ಹೆಚ್ಚಿನ ಅನುಕೂಲ ಗೋಲ್ಡ್ ಬಾಂಡ್ ಮೂಲಕ ಸಿಗುತ್ತದೆ, ಇದರಲ್ಲಿ ನಿಮಗೆ ಯಾವುದೇ ಮೇಕಿಂಗ್ ಚಾರ್ಜಸ್ ಬೀಳುವುದಿಲ್ಲ.

3. ಗೋಲ್ಡ್ ಬಾಂಡ್ ಮೆಚ್ಯುರ್ ಆದ ಬಳಿಕ ಅಂದಿನ ಗೋಲ್ಡ್ ರೇಟ್ ಏನಿರುತ್ತದೆಯೋ ಅಷ್ಟೇ ರೇಟ್ ಗೆ ಬಡ್ಡಿ ಸೇರಿಸಿ ನಿಮಗೆ ಹಣ ಬರುತ್ತದೆ.

ಸಿಗಲಿದೆ 141% ರಿಟರ್ನ್ಸ್:

20216ರ ಫೆಬ್ರವರಿ 8ರಂದು ಗೊಂಡ್ ಬಾಂಡ್ ಹೂಡಿಕೆ ಶುರುವಾದಾಗ, 1 ಗ್ರಾಮ್ ಗೆ ₹2600 ರೂಪಾಯಿ ಫಿಕ್ಸ್ ಮಾಡಲಾಗಿತ್ತು. ಈ ಬಾಂಡ್ ನ ಮೆಚ್ಯುರಿಟಿ ಅವಧಿ 8 ವರ್ಷ ಆಗಿತ್ತು. ಅಂದು ಖರೀದಿ ಮಾಡಿರುವವರ ಗೋಲ್ಡ್ ಬಾಂಡ್ ಮೆಚ್ಯುರಿಟಿ ಅವಧಿ ಈಗ ಮುಗಿದಿದೆ. ಈ ಬಗ್ಗೆ RBI ಅಧಿಕೃತ ಮಾಹಿತಿ ನೀಡಿದ್ದು, ರಿಟರ್ನ್ಸ್ ವೇಳೆ ಪ್ರತಿ ಗ್ರಾಮ್ ಗೆ ₹6271 ರೂಪಾಯಿಗಳನ್ನು ಫಿಕ್ಸ್ ಆಗಿದೆ. ಈ ರೀತಿಯಾಗಿ 141% ರಿಟರ್ನ್ಸ್ ಸಿಕ್ಕಿದೆ.

ಗೋಲ್ಡ್ ಬಾಂಡ್ ಅನ್ನು ಆನ್ಲೈನ್ ಖರೀದಿ ಮಾಡಿ:

ನಿಮಗೆ ಗೋಲ್ಡ್ ಬಾಂಡ್ ಖರೀದಿ ಮಾಡಲು ಆಸಕ್ತಿ ಇದ್ದರೆ, ಅವುಗಳನ್ನು ಆನ್ಲೈನ್ ಮೂಲಕ ಕೂಡ ಖರೀದಿ ಮಾಡಬಹುದು. ಹಾಗೆಯೇ ಡಿಜಿಟಲ್ ಆಗಿ ಪೇಮೆಂಟ್ ಮಾಡಬಹುದು. ಆನ್ಲೈನ್ ಪೇಮೆಂಟ್ ಮಾಡುವವರಿಗೆ ಪ್ರತಿ ಗ್ರಾಮ್ ಗೆ ₹50 ರೂಪಾಯಿ ಡಿಸ್ಕೌಂಟ್ ಸಿಗುತ್ತದೆ.

Sovereign Gold Bond 2024: 141% Returns in Just 8 Years! In the next two days, the purchase of this amazing gold bond will start!

Get real time updates directly on you device, subscribe now.

Leave a comment