Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi Scheme: 2000 ಗೃಹಲಕ್ಷ್ಮಿ ಯೋಜನೆಯ ದುಡ್ಡು ಯಾವಾಗ ಬರುತ್ತೆ ಗೊತ್ತಾ ಗುಡ್ ನ್ಯೂಸ್.

Get real time updates directly on you device, subscribe now.

Gruha Lakshmi Scheme: ಈಗಾಗಲೇ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವಂತೆ ಅವರ ಪಂಚಾಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಬಹಳ ದೊಡ್ಡ ಯೋಜನೆಯಾಗಿದ್ದು ಇದರಂತೆ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಮಹಿಳೆಯರು ಕೂಡ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ.

ಆದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರೂ. 2000 ಹಣ ಯಾವಾಗ ನಮ್ಮ ಖಾತೆಗೆ ಬರುತ್ತದೆ ಎಂದು ಎಲ್ಲರೂ ಕಾಯುತ್ತಿರುತ್ತಾರೆ. ಅದರಂತೆ ಇದೀಗ ರಾಜ್ಯ ಸರ್ಕಾರ(Karnataka State Government) ಗುಡ್ ನ್ಯೂಸ್ ಕೂಡ ಕೊಟ್ಟಿದೆ. ಅತಿ ಶೀಘ್ರದಲ್ಲಿ ಪ್ರತಿಯೊಬ್ಬ ಮಹಿಳೆಯ ಖಾತೆಗೂ  ಕೂಡ 2000 ಬರಲಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೂಡ ನೀಡಲಾಗಿದೆ.

ಇನ್ನು ಮುಂದೆ ನಿಮ್ಮ ಖಾತೆಗಳಿಗೆ 2000 ಹಣ ಕೂಡ ಬರಲಿದೆ. ಈ ವಿಷಯವಾಗಿ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರೇ ವಿಷಯ ತಿಳಿಸುತ್ತಾರೆ. ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ರಾಹುಲ್ ಗಾಂಧಿ ಅವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡುತ್ತಾರೆ.

ರಾಜ್ಯ ಸರ್ಕಾರದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್( CM Siddaramaiah and DK Shivakumar) ಸೇರಿದಂತೆ ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮೈಸೂರು ಮಹಾರಾಜ ಕಾಲೇಜಿನ ಆವರಣದಲ್ಲಿ ಈ ಒಂದು ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಸಿದ್ಧತೆಗಳು ಕೂಡ ನಡೆಯುತ್ತಿವೆ.

ಈ ಕಾರ್ಯಕ್ರಮ ಯಶಸ್ವಿಯಾಗಲು ಇನ್ನೇನು 9 ದಿನಗಳು  ಮಾತ್ರ ಬಾಕಿ ಇದೆ. ಈ ಒಂದು ಸಮಾರಂಭಕ್ಕೆ ಸಾಕಷ್ಟು ರೀತಿಯ ಗಣ್ಯರು ಕೂಡ ಬರುವ ಸಾಧ್ಯತೆ ಇದೆ. ಹೀಗಾಗಿ ಇದೇ ತಿಂಗಳ 30 ರಂದು ಎಲ್ಲಾ ಮಹಿಳೆಯರ ಖಾತೆಗೆ ಹಣ ಬರುವ ಸಾಧ್ಯತೆ ಇದೆ. ಸ್ವತಹ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿರುವ ವಿಷಯ ಇದಾಗಿದ್ದು ಆಗಸ್ಟ್ 30 ಅಂದಿನಿಂದಲೇ ಎಲ್ಲರ ಗಾದೆಗೆ ಹಣ ಬರುತ್ತದೆ.

ಇಲ್ಲವಾದರೆ ಸೆಪ್ಟೆಂಬರ್ 1 ಅಥವಾ 2ನೇ ತಾರೀಖಿನಿಂದ ಎಲ್ಲಾ ಮಹಿಳೆಯರ ಖಾತೆಗೆ ಹಣ ಬರುತ್ತದೆಯೋ ಎಂದು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ  ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಕೂಡ 2000 ಬರುವುದು ಖಚಿತ ಯಾರು ಕೂಡ ಗೊಂದಲಕ್ಕೆ ಒಳಗಾಗಬೇಡಿ .

ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿರುವ ಪ್ರತಿಯೊಬ್ಬರಿಗೂ ಕೂಡ ಹಣ ಬಂದೇ ಬರುತ್ತದೆ. ಈ ವಿಷಯ ಕುರಿತಾಗಿ ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ ಟೆನ್ಶನ್ ಮಾಡಿಕೊಳ್ಳಬೇಡಿ ಎಂದು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಅವರೆ ತಿಳಿಸಿದ್ದಾರೆ. When will the Gruha Lakshmi Yojana money come?

When will the Gruha Lakshmi Yojana money come?
When will the Gruha Lakshmi Yojana money come?

Get real time updates directly on you device, subscribe now.

Leave a comment