Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹೊಸ ರೇಷನ್ ಕಾರ್ಡ್ ಎಲ್ಲರಿಗು ಗುಡ್ ನ್ಯೂಸ್,  6 ಹೊಸ ರೂಲ್ಸ್ ಜಾರಿ, ರೇಷನ್ ಕಾರ್ಡ್ ಇದ್ದವರು ಮತ್ತು ಇಲ್ಲದವರಿಗೆ.

Good news for new ration card applicants

Ration Card: ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಕಾಯುತ್ತಿರುವ ಪ್ರತಿಯೊಬ್ಬರಿಗೂ ಇದೊಂದು ಒಳ್ಳೆಯ ಸುದ್ದಿಯಾಗಿದೆ. ಬಿಪಿಎಲ್ ಕಾರ್ಡ್(BPL CARD) ಮತ್ತು ಅಂತ್ಯೋದಯ ಕಾರ್ಡ್(AAY CARD) ಇರುವವರಿಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಸಾಕಷ್ಟು ರೀತಿಯ ಯೋಜನೆಗಳನ್ನು ಮತ್ತು ಸಕಲ ಸವಲತ್ತುಗಳನ್ನು ಕೊಡಲಾಗುತ್ತಿತ್ತು ಇತ್ತೀಚಿಗಷ್ಟೇ ಹೊಸದಾಗಿ ಅಧಿಕಾರಕ್ಕೆ ಬಂದಿರುವ  ರಾಜ್ಯದ ಸಿಎಂ ಸಿದ್ದರಾಮಯ್ಯನವರು ರೇಷನ್ ಕಾರ್ಡ್ ಇರುವವರಿಗೆ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಇದರ ಜೊತೆಗೆ ಅಕ್ಕಿ ತೆಗೆದುಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಅಕ್ಕಿ ಬದಲಾಗಿ ಹಣವನ್ನು ಕೊಡಲಾಗುತ್ತಿದೆ. ಜೊತೆಗೆ ಸರ್ಕಾರದಿಂದ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಕೂಡ ನೀಡಲಾಗುತ್ತಿದೆ. ಆದರೆ ಹೊಸದಾಗಿ ಮದುವೆ ಆದವರಿಗೆ ಮತ್ತು ಕುಟುಂಬದಿಂದ ಬೇರೆ ಆದವರಿಗೆ ಹಾಗು  ಇವತ್ತಿನವರೆಗೂ ಸಹ ಪಡಿತರ ಚೀಟಿ ಪಡೆದುಕೊಳ್ಳಲು ವಿಫಲ ಆದವರಿಗೆ ರಾಜ್ಯ ಸರ್ಕಾರದಿಂದ ಬಾರಿ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ.

ಆದರೆ ಇಲ್ಲಿ ಹೊಸದಾಗಿ ಪಡಿತರ ಸಿಟಿ ಪಡೆದುಕೊಳ್ಳುವ ಅಭ್ಯರ್ಥಿಗಳಿಗೆ ಹೊಸ ರೂಲ್ಸ್ ಪಾಲಿಸುವುದು ಕಡ್ಡಾಯವಾಗಿದೆ. ಅಂದರೆ ಹೊಸ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಬಯಸುವ ಎಲ್ಲ ಹೊಸ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಹೊಸ 6 ರೂಲ್ಸ್ ಗಳನ್ನು ಜಾರಿ ಮಾಡಿ ಆಹಾರ ಇಲಾಖೆಯಿಂದ ಆ ಹೊರಡಿಸಲಾಗಿದೆ.

ಹೊಸ ರೇಷನ್ ಕಾರ್ಡ್ ಪಡೆಯಲು ಈ ಆರು  ರೂಲ್ಸ್ ಗಳನ್ನು ನೀವು ಪಾಲಿಸುವುದು ಕಡ್ಡಾಯ.
ಬಿಪಿಎಲ್ ಕಾರ್ಡ್ ವಿಚಾರವಾಗಿ ಸರ್ಕಾರ ಹೊಸ ರೂಲ್ಸ್ ಗಳನ್ನು ತಂದು ಎಲ್ಲಾ ಅರ್ಹತೆಗಳು ಇರುವವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಕೊಡಲಾಗುತ್ತದೆ ಇಲ್ಲಾಂದ್ರೆ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ಸಹ ರದ್ದು ಮಾಡಲಾಗುತ್ತದೆ ಎಂದು ಹೇಳಿದೆ.

ಅವೇನೆಂದರೆ ಇನ್ನು ಮುಂದೆ ಸ್ವಂತವಾಗಿ ಹಾಗು ವೈಯಕ್ತಿಕವಾಗಿ ಕಾರು ಇರುವವರಿಗೆ ರೇಷನ್ ಕೊಡಲಾಗುವುದಿಲ್ಲ ಜೊತೆಗೆ ಸ್ವಂತ ಕಾರ್  ಇದ್ದು ಸುಳ್ಳು ಮಾಹಿತಿ ನೀಡಿದ್ದರೆ ಅದಕ್ಕೂ ಕೂಡ ರೇಷನ್ ಕಾರ್ಡನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಂದಿಗೂ ಸಹ ಸಾಕಷ್ಟು ಜನರು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ.

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ನಮ್ಮ ದೇಶದಲ್ಲಿ 1.82 ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ಈಗಾಗಲೇ ಕೊಡಲಾಗಿದೆ. ಆದರೆ ಸರ್ಕಾರ ನೀಡಿರುವ ಆದೇಶದಿಂದ 35 ಲಕ್ಷ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಬಹುದು. ಈ ವಿಷಯದಂತೆ ಕುರಿತಾಗಿ ರಾಜ್ಯ ಸರ್ಕಾರವು ಸರ್ವೇ ಪ್ರಾರಂಭ ಮಾಡಲಿದ್ದು ಆರು ವಿಷಯಗಳನ್ನು ಹೊರತಾಗಿ ಸರ್ವೇ ಮಾಡಲಿದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ ಇರುವ ನಿಯಮವು ತಪ್ಪಾಗಿದ್ದರೆ.

ನಿಮ್ಮ ರೇಷನ್ ಕಾರ್ಡನ್ನು ತಕ್ಷಣವೆ ರದ್ದು ಮಾಡಲಾಗುತ್ತದೆ. 1.2 ಲಕ್ಷ ದಿಂದ  2 ಲಕ್ಷದವರೆಗೆ ವಾರ್ಷಿಕ ಆದಾಯ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಬಿಪಿಎಲ್ ಕಾರ್ಡ್ ಇರುವ  ವ್ಯಕ್ತಿಯ ಹತ್ತಿರ 3 ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಹಾಗು  ವೈಯಕ್ತಿಕವಾಗಿ ವೈಟ್ ಬೋರ್ಡ್ ಕಾರ್ ಇರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

ಸಿಟಿಯಲ್ಲಿ ದೊಡ್ಡಮನೆಯನ್ನು ಹೊಂದಿದರು ಕೂಡ ನಿಮಗೆ ಬಿಪಿಎಲ್ ಕಾರ್ಡ್ ರೇಷನ್ ಸಿಗುವುದಿಲ್ಲ. ಸರ್ಕಾರಿ ಕೆಲಸದಲ್ಲಿ ಇರುವವರೆಗೂ ಕೂಡ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ ಟ್ಯಾಕ್ಸ್ ಕಟ್ಟುತ್ತಿರುವವರೆಗೂ ಕೂಡ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಸರ್ಕಾರವು ಬಿಪಿಎಲ್ ಕಾರ್ಡ್ ವಿಷಯವಾಗಿ ಇಷ್ಟು ಆರು ರೂಲ್ಸ್ ಗಳನ್ನು ತಂದಿದ್ದು ಈ ಎಲ್ಲಾ ಅರ್ಹತೆಗಳು ಇದ್ದರೆ ಮಾತ್ರ ಬಿಪಿಎಲ್ ಕಾರ್ಡ್ ಮುಂದೆ ದೊರೆಯುವುದು ಇಲ್ಲವಾದರೆ ರದ್ದು ಮಾಡಲಾಗುತ್ತದೆ.

Good news for new ration card applicants
Good news for new ration card applicants.
Leave a comment