Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Free Smartphone: ರಾಜ್ಯದ 76 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್ ನೀಡುತ್ತಿದೆ ರಾಜ್ಯ ಸರ್ಕಾರ

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಆಗಿರುವ ಎಚ್.ಕೆ. ಪಾಟೀಲ್ ಅವರು 11,800 ಬೆಲೆಯ ಸ್ಮಾರ್ಟ್ ಫೋನ್ ನೀಡುತ್ತೇವೆ.

Free Smartphone: ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಅಂಗನವಾಡಿ ಕಾರ್ಯಕರ್ತೆಯರು ಹಲವಾರು ಮಾಹಿತಿಗಳನ್ನು ನೀಡಬೇಕಾಗುತ್ತದೆ. ಎಲ್ಲ ಇಲಾಖೆಯ ದಾಖಲೆಗಳು ಈಗ ಆನ್ಲೈನ್ ನಲ್ಲಿ ಲಭ್ಯವಿರುವುದರಿಂದ ಪ್ರತಿ ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ಸ್ಥಳಗಳಲ್ಲಿ ಏಷ್ಟು ಮಹಿಳೆಯರಿದ್ದಾರೆ, ಗರ್ಭಿಣಿಯರ ಸಂಖ್ಯೆ ಏಷ್ಟು ಹಾಗೆಯೇ ಮಕ್ಕಳ ವಿವರಗಳನ್ನು ಭರ್ತಿ ಮಾಡಲು ಸ್ಮಾರ್ಟ್ ಫೋನ್ ಅವಶ್ಯ ಇರುವುದರಿಂದ ಉಚಿತವಾಗಿ ಸ್ಮಾರ್ಟ್ ಫೋನ್ ನೀಡಲು 89.61 ಕೋಟಿ ರೂ.ಗಳನ್ನು ಮಂಜೂರು ಮಾಡಲು ಆದೇಶಿಸಲಾಗಿದೆ. ರಾಜ್ಯದ 75,938 ಸ್ಮಾರ್ಟ್ ಫೋನ್ ಖರೀದಿಸಿ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉಚಿತವಾಗಿ ನೀಡುವ ಸ್ಮಾರ್ಟ್ ಫೋನ್ ಬೆಲೆ ಏಷ್ಟು?

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಆಗಿರುವ ಎಚ್.ಕೆ. ಪಾಟೀಲ್ ಅವರು 11,800 ಬೆಲೆಯ ಸ್ಮಾರ್ಟ್ ಫೋನ್ ನೀಡುತ್ತೇವೆ. Gem ಪೋರ್ಟಲ್ ಮೂಲಕ ಟೆಂಡರ್ ಕರೆದು ಸ್ಮಾರ್ಟ್ಫೋನ್ ಕೊಂಡುಕೊಂಡು ಅಂಗನವಾಡಿ ಕಾರ್ಯಕರ್ತೆಯರ ಕೆಲಸಕ್ಕೆ ಸಹಾಯ ಆಗಲಿ ಎಂದು ಉಚಿವಾಗಿ ನೀಡುತ್ತೇವೆ ಎಂದರು.

ಏಕೆ ಈ ಸ್ಮಾರ್ಟ್ ಫೋನ್ ಅವಶ್ಯಕ ?

1. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಗತ್ಯ ಇರುವ ಗರ್ಭಿಣಿ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತದೆ ಅದನ್ನು ಸರಿಯಾಗಿ ನೀಡುವ ಬಗ್ಗೆ ಮಾಹಿತಿಗೆ

2. ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಇರುವ ಗರ್ಭಿಣಿ ಮತ್ತು ಬಾಣಂತಿಯರ ಸಂಪೂರ್ಣ ವಿವರಗಳನ್ನು ಒಂದೆಡೆ ಕ್ರೋಢೀಕರಿಸಲು.

3. ಮಕ್ಕಳ ಆರೋಗ್ಯದ ಕುರಿತ ಮಾಹಿತಿ ಮತ್ತು ಇಲಾಖೆಯಿಂದ ಮಕ್ಕಳಿಗೆ ಸಿಗುವ ಉಚಿತ ಫುಡ್ ವಿವರಗಳನ್ನು ದಾಖಲಿಸಲು .

ಸಚಿವ ಸಂಪುಟದಲ್ಲಿ ನಿರ್ಣಯಿಸಿದ ಇನ್ನಷ್ಟು ಯೋಜನೆಗಳು ಏನು?

  • ಎಸ್‌ಸಿಪಿಎಸ್‌ಪಿ ಕ್ರಿಯಾ ಯೋಜನೆಯಲ್ಲಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಓದುತ್ತಿರುವ sc/st ವಿದ್ಯಾರ್ಥಿಗಳಿಗೆ ಟೂಲ್ ಕಿಟ್‌ಗಳ ಖರೀದಿ ಮತ್ತು ವಿತರಣೆಗೆ 45.28 ಕೋಟಿ ರೂಪಾಯಿಗಳ ಅನುಮೋದನೆ ಸಿಕ್ಕಿದೆ. 34,178 ವಿದ್ಯಾರ್ಥಿಗಳಿಗೆ ಉಚಿತ ಟೂಲ್ ಕಿಟ್ ನೀಡಿದರು.
  • “ಕರ್ನಾಟಕ ತಳಿ ಮತ್ತು ವಂಶವಾಹಿ ಹತ್ತಿ ಬೀಜ ಮಾರಾಟ ಬೆಲೆ ಮತ್ತು ಪರಿಹಾರ ಪಾವತಿ ಮಸೂದೆ 2015” ಅನ್ನು ವಾಪಸ್ ಪಡೆಯಲಾಗಿದೆ.
  • ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ 2024 ಅಂಗೀಕರಿಸಲಾಗಿದೆ.
  • ಕರಕುಶಲ ಉತ್ಪನ್ನಗಳ ಬಳಕೆ ಮತ್ತು ಮಾರಾಟಕ್ಕೆ ಸಹಾಯ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ 193 ಕೋಟಿ ರೂಪಾಯಿಗಳ ಬಡ್ಡಿ ರಹಿತ ಸಾಲದ ಯೂನಿಟಿ ಮಾಲ್ ನಿರ್ಮಿಸಲು ಪ್ರತಿ ಜಿಲ್ಲೆಗೆ ಒಂದು ಉತ್ಪನ್ನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಒಪ್ಪಿಗೆ ಸಿಕ್ಕಿದೆ.

The state government is giving free smartphones to 76 thousand Anganwadi workers of the state

Mobile Tricks: ಇನ್ನು ಮುಂದೆ ಫೋನ್ ಕಾಲ್ಸ್ ಗಳ ಚಿಂತೆ, ಕಿರಿ ಕಿರಿ ಇರೋದೇ ಇಲ್ಲ, ಈ ಸೆಟ್ಟಿಂಗ್ ಆನ್ ಮಾಡಿದ್ರೆ ಸಾಕು, ಫ್ಲೈಟ್ ಮೋಡ್ ನಲ್ಲೆ ಇಂಟರ್ನೆಟ್ ಬಳಸಬಹುದು.

Leave a comment