Prakash Raj: ಇಸ್ರೋ ಬಗ್ಗೆ ಅಪಹಾಸ್ಯ ಮಾಡಿದ ಪ್ರಕಾಶ್ ರಾಜ್ ಮೇಲೆ ಕೇಸ್ ಹಾಕಿದ ಶ್ರೀರಾಮ ಸೇನೆ, ಅಯ್ಯೋ ಏನಾಗಿದೆ ನೋಡಿ ಪ್ರಕಾಶ್ ರಾಜ್ ಕಥೆ.
Prakash Raj Chandrayaana 3: ಚಂದ್ರಯಾನ ಕುರಿತಂತೆ ತಮ್ಮ Twitter ಖಾತೆಯಲ್ಲಿ ಫೋಟೋವನ್ನು ಶೇರ್ ಮಾಡಿದ ನಟ ಹಾಗೂ ರಾಜಕಾರಣಿ ವ್ಯಕ್ತಿ ಆಗಿರುವ ಪ್ರಕಾಶ್ ರಾಜ್ ಅವರಿಗೆ ಇದೀಗ ಭಾರಿ ದೊಡ್ಡ ಸಂಕಷ್ಟ ಎದುರಾಗಿದೆ. ಚಂದ್ರಯಾನ ಯೋಜನೆಗೆ ಇವರು ಅವಮಾನ ಮಾಡಿದ್ದಾರೆ ಎಂದು ಆರೋಪ ಮಾಡಿ ಇವರ ಹೆಸರಲ್ಲಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಾಗಿದೆ.
ಬನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಶ್ರೀರಾಮ ಸಂಘಟನೆಯವರು ಪ್ರಕಾಶ್ ರಾಜ್ ಅವರ ಮೇಲೆ ದೂರನ್ನು ಕೊಟ್ಟಿದ್ದಾರೆ. ಈ ದೂರಿನಲ್ಲಿ ನಟ ಆಗು ರಾಜಕಾರಣಿ ವ್ಯಕ್ತಿಯಾಗಿರುವ ಪ್ರಕಾಶ್ ರಾಜ್ ಅವರು ಚಂದ್ರಯಾನ 3 ಇದರ ವಿರುದ್ಧ ಅಪಹಾಸ್ಯ ಮಾಡಿದ್ದಾರೆ ಜೊತೆಗೆ ಇಸ್ರೋ ವಿಜ್ಞಾನಿಗಳ(ISRO Scientists) ಬಗ್ಗೆ ವ್ಯಂಗನ ಉಂಟುಮಾಡಿದ್ದಾರೆ ಹಾಗೆ ಇಡೀ ದೇಶದ ಜನಗಳ ಮಹದಾಸೆಗೆ ನೋವುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಪ್ರಕಾಶ್ ರಾಜ್ ಅವರು ಇಸ್ರೋದ ಅಧ್ಯಕ್ಷರವರ ಕಾರ್ಟೂನ್ ಅನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಶ್ರೀರಾಮ ಸೇನೆ ಅಧ್ಯಕ್ಷ ಅವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಇವರ ಹೆಸರಿನಲ್ಲಿ ಕಂಪ್ಲೇಂಟ್ ಕೊಟ್ಟು ಅವರನ್ನು ಕೂಡಲೆ ಬಂಧನ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ. ಆದರೆ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಉತ್ತರ ಕೊಟ್ಟಿರುವ ಪ್ರಕಾಶ್ ರಾಜ್ ಅವರು.
ನಾನು 1969 ನೆ ಚಂದ್ರನ ಮೇಲೆ ಮೊದಲನೇ ಕಾಲಿಟ್ಟ ಅಂದರೆ ಅಮೆರಿಕ ಅವರನ್ನು ಉಲ್ಲೇಖ ಮಾಡಿ ಹಳೆಯ ಟ್ವೀಟ್ ಜೋಕ್ ಅನ್ನು ನಾನು ಉಲ್ಲೇಖ ಮಾಡಿದೆ. ಅವರ ಜಯ ವಾಲಾ ಕೇರಳದ ಒಂದು ಸುಪ್ರಸಿದ್ಧವಾದ ಜಲತನ ಇದಾಗಿದ್ದು ಆದರೆ ಟ್ರೋಲ್ ಗಳು ಯಾವ ರೀತಿಯ ಟ್ರೋಲ್ ಮಾಡುತ್ತಾರೆ ಎಂಬುದು ನಿಮಗೆಲ್ಲರಿಗೂ ಸಹ ತಿಳಿದಿದೆ.
ದ್ವೇಷದಿಂದ ನಾವು ಎಲ್ಲವನ್ನು ನೋಡಿದರೆ ದ್ವೇಷ ಕಾಣುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟನೆಯನ್ನು ನೀಡುತ್ತಾ ಮತ್ತೊಮ್ಮೆ ಅವರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ. ಹೇಳಿಕೆ ಸಾಕಷ್ಟು ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಟ್ರೋಲ್ ಗಳು ಇವರನ್ನು ಟ್ರೋಲ್ ಮಾಡುವುದರ ಜೊತೆಗೆ ಪ್ರಕಾಶ್ ರಾಜ್ ಅವರ ವಿರುದ್ಧ ಸಾಕಷ್ಟು ನೆಟ್ಟಿಗೆರು ಟೀಕೆಯನ್ನು ಕೂಡ ಈಗಾಗಲೇ ಮಾಡುತ್ತಿದ್ದಾರೆ.
ನಮ್ಮ ಹೆಮ್ಮೆಯ ಇಸ್ರೋ ಬಗ್ಗೆ ಇಷ್ಟೊಂದು ಅಪಹಾಸ್ಯ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ ಇಡೀ ದೇಶವೇ ಖುಷಿಪಡುವ ವಿಷಯದಲ್ಲಿ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಗಿ ಮಾತನಾಡಿದ್ದು ಎಷ್ಟು ಸರಿ ಅಂತ ನೆಟ್ಟಿಗರು ಈಗಾಗಲೇ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. Sriram Sena has filed a case against Prakash Raj for mocking ISRO.