Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Paytm: ಫೆಬ್ರವರಿ 29ರ ನಂತರ ಪೇಟಿಎಂ ಕಥೆ ಏನು? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಫುಲ್ ಡೀಟೇಲ್ಸ್.

ಪೇಟಿಎಂ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಬ್ಯಾಲೆನ್ಸ್ ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದು ಹಾಗೆಯೇ ಅದನ್ನು ಟ್ರಾನ್ಸ್ಫರ್ ಮಾಡಬಹುದು. ಈ ವಹಿವಾಟನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇಂದ ಮಾಡಲು ಸಾಧ್ಯವಿಲ್ಲ.

Paytm ವಿಚಾರಕ್ಕೆ ಇತ್ತೀಚೆಗೆ ನೀಡಿದ ಒಂದು ಆದೇಶ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೇಟಿಎಂ ಬಳಕೆದಾರರಿಗೆ ಇದು ಒಂದು ರೀತಿ ಶಾಕ್ ಆಗಿತ್ತು. ಇತ್ತೀಚೆಗೆ RBI ಮಾರ್ಚ್ 1 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಅಥವಾ ಈ ಆಪ್ ಇಂದ ಬ್ಯಾಂಕಿಂಗ್ ನಲ್ಲಿ PBBL, ಠೇವಣಿ ಮಾಡಲು, ಕ್ರೆಡಿಟ್ ಸೇವೆ ಪಡೆಯಲು ಮತ್ತು ಹಣ ವರ್ಗಾವಣೆಯನ್ನು ಎಂದಿನಂತೆ ಸುಗಮವಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು..ಆದರೆ RBI ಇಂದ ಆದೇಶ ಬಂದ 2 ದಿನಗಳ ನಂತರ ಪೇಟಿಎಂ ಸಂಸ್ಥಾಪಕರಾದ ವಿಜಯ್ ಶೇಖರ್ ಶರ್ಮಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ..

ಫೆಬ್ರವರಿ 1ರಿಂದ ಪೇಟಿಎಂ ಎಂದಿನ ಹಾಗೆಯೇ ಕೆಲಸ ಮಾಡುತ್ತದೆ ಎಂದು ಸ್ಪಶ್ಟನೆ ನೀಡಿದ್ದಾರೆ. ಪೇಟಿಎಂ ಇಂದ ನಡೆಯುವಂಥ ಯಾವುದೇ ಹಣಕಾಸಿನ ವಹಿವಾಟು, ಠೇವಣಿ, ವರ್ಗಾವಣೆ, ಫಾಸ್ಟ್ಯಾಗ್, ಮೊಬಿಲಿಟಿ ಕಾರ್ಡ್, ಪ್ರೀಪೇಯ್ಡ್, ವ್ಯಾಲೆಟ್ ಈ ಯಾವುದರ ವಹಿವಾಟುಗಳನ್ನು RBI ನಿರ್ಬಂಧಿಸಿತು. ಆದರೆ ಪೇಟಿಎಂ ಖಾತೆಗಳಿಗೆ ಬಡ್ಡಿ, ಕ್ಯಾಶ್ ಬ್ಯಾಕ್ ಅಥವಾ ಯಾವುದೇ ಮರುಪಾವತಿಗೆ ಹಣ ಕ್ರೆಡಿಟ್ ಮಾಡಲು ಅನುಮತಿ ನೀಡಲಾಗಿತ್ತು. ಈ ಖಾತೆಗಳಿಂದ ಬ್ಯಾಲೆನ್ಸ್ ವಾಪಸ್ ಪಡೆಯಲು ಆಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ವಿಜಯ್ ಶರ್ಮಾ ಅವರು ಈಗ ಸ್ಪಷ್ಟನೆ ನೀಡಿದ್ದಾರೆ.

ಫೆಬ್ರವರಿ 29ರ ನಂತರ ಪೇಟಿಎಂ ನ FASTag, UPI Loan ವಹಿವಾಟು ನಡೆಯೋದು ಹೇಗೆ?

Paytm ವ್ಯಾಲೆಟ್ ಬ್ಯಾಲೆನ್ಸ್:

ಪೇಟಿಎಂ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಬ್ಯಾಲೆನ್ಸ್ ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದು ಹಾಗೆಯೇ ಅದನ್ನು ಟ್ರಾನ್ಸ್ಫರ್ ಮಾಡಬಹುದು. ಈ ವಹಿವಾಟನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇಂದ ಮಾಡಲು ಸಾಧ್ಯವಿಲ್ಲ. ಇನ್ನುಮುಂದೆ ಪೇಟಿಎಂ ಗ್ರಾಹಕರು PBBL ಇಂದ ಹಣ ಸೇರಿಸಲು, ಬಿಲ್ ಪಾವತಿಗೆ ಹಾಗೂ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಬಳಸಲು ಮಾತ್ರ ಸಾಧ್ಯವಾಗುತ್ತದೆ.

ಪೇಟಿಎಂ ಫಾಸ್ಟ್ಯಾಗ್:

ಪೇಟಿಎಂ ವ್ಯಾಲೆಟ್ ಗೆ ಫಾಸ್ಟ್ಯಾಗ್ ಲಿಂಕ್ ಮಾಡಿಕೊಂಡಿರುವವರಿಗೆ ಯಾವುದೇ ತೊಂದರೆ ಇಲ್ಲ. ಪೇಟಿಎಂ ಫಾಸ್ಟ್ಯಾಗ್ ಆಕ್ಟಿವ್ ಆಗಿರುತ್ತದೆ. ಮಾರ್ಚ್ 1ರಿಂದ ಕೂಡ ಪೇಟಿಎಂ ಇದೇ ರೀತಿ ಕೆಲಸ ಮಾಡುತ್ತದೆ.

ಪೇಟಿಎಂ UPI:

ಮಾರ್ಚ್ 1 ರಿಂದ ಪೇಟಿಎಂ ಬ್ಯಾಂಕ್ ಪೇಮೆಂಟ್ಸ್, ಹಣ ವರ್ಗಾವಣೆ, ಬಿಲ್ ಪೇಮೆಂಟ್, ಯುಪಿಐ ಸೇವೆಗಳನ್ನು ನೀಡಬಾರದು ಎಂದು RBI ತಿಳಿಸಿತ್ತು. RBI ಆದೇಶದ ಅರ್ಥ ಪೇಟಿಎಂ ಬ್ಯಾಂಕ್ ಇಂದ ಹಣದ ವಹಿವಾಟು, ಯುಪಿಐ ಪೇಮೆಂಟ್ಸ್, ಇದ್ಯಾವುದನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ UPI ಅಕೌಂಟ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿದ್ದರೆ, ಫೆಬ್ರವರಿ 29ರ ನಂತರ ಈ ಸೇವೆ ನಿಲ್ಲುತ್ತದೆ.

ಶೇರ್ ಮಾರ್ಕೆಟ್:

ಶೇರ್ ಮಾರ್ಕೆಟ್ ವ್ಯವಹಾರ ನಡೆಯುವುದು SEBI ಇಂದ, ಹಾಗಾಗಿ ಪೇಟಿಎಂ ಮೂಲಕ ಸ್ಟಾರ್ ಮಾರ್ಕೆಟ್ ವ್ಯವಹಾರಗಳಿಗೆ ಹಣ ಪಾವತಿ ಮಾಡುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಪೇಟಿಎಂ ಮನಿ ಆಪ್ ಇಂದ ಶೇರ್ ಮಾರ್ಕೆಟ್ ನಲ್ಲಿ ಶೇರ್ ಖರೀದಿ ಮಾಡಬಹುದು. RBI ಆದೇಶದ ಪರಿಣಾಮ ಇದರ ಮೇಲೆ ಬೀರುವುದಿಲ್ಲ.

ಪೇಟಿಎಂ ಲೋನ್:

RBI ಆದೇಶ ಪೇಟಿಎಂ ಇಂದ ಪಡೆಯುವ ಲೋನ್ ಗಳ ಮೇಲೆ ಕೂಡ ಪ್ರಭಾವ ಬೀರುವುದಿಲ್ಲ. ಸಾಲ ಕೊಡುವುದು ಥರ್ಡ್ ಪಾರ್ಟಿ ಆಗಿದ್ದು, ಪೇಟಿಎಂ ಮಧ್ಯವರ್ತಿಯಾಗಿರುತ್ತದೆ, ಹಾಗಾಗಿ RBI ಆದೇಶ ಪೇಟಿಎಂ ಲೋನ್ ಗಳಿಗೆ ತೊಂದರೆ ನೀಡುವುದಿಲ್ಲ.

ಠೇವಣಿ:

ಮಾರ್ಚ್ 1 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಠೇವಣಿಯನ್ನು ತೆಗೆದುಕೊಳ್ಳುವುದಿಲ್ಲ. ಫೆಬ್ರವರಿ ತಿಂಗಳು ಮುಗಿಯುವವರೆಗೆ ಮಾತ್ರ ಠೇವಣಿ ಮಾಡಲು ಸಾಧ್ಯವಾಗುತ್ತದೆ.

What will happen to Paytm after February 29? Here are the full details for all your queries.

Leave a comment