Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ration Card: ಇಂದಿನಿಂದ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ, ಈ ದಾಖಲಾತಿಗಳು ಕಡ್ಡಾಯ, ಕೇವಲ 7 ದಿನ ಅವಕಾಶ!

Ration Card: ರಾಜ್ಯ ಸರ್ಕಾರವು ಇದೀಗ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಲು ಅವಕಾಶಗಳನ್ನು ಕೊಟ್ಟಿದ್ದು ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ಎಂದರೆ ಮತ್ತು ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಬೇಕು ಎಂದರೆ ಇಲ್ಲಿ ತಿಳಿಸಲಾಗಿರುವ ದಾಖಲಾತಿಗಳು ಮತ್ತು ಕಡೆಯ ದಿನಾಂಕದಂದು ನೀವು ತಿದ್ದುಪಡಿ ಮತ್ತು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಇದೇ ಸೆಪ್ಟಂಬರ್ 1 ರಿಂದ 10 ರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದ್ದು ಮತ್ತು ಗೃಹಲಕ್ಷ್ಮಿ ಯೋಜನೆಯ ವಿಷಯವಾಗಿ ಮನೆಯ ಯಜಮಾನಿಯನ್ನು ಬದಲಾಯಿಸಬೇಕು ಎಂದು ಹೇಳುತ್ತಿರುವ ಜನರಿಗೆ ರಾಜ್ಯ ಸರ್ಕಾರವು ಇದೀಗ ಒಂದು ದೊಡ್ಡ ರಿಲೀಫ್ ಕೊಟ್ಟಿದೆ.

ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10ರ ತನಕ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರಕಾರವು ಸಮಯ ನಿಗದಿಪಡಿಸಲಾಗಿದ್ದು ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಬದಲಾವಣೆ ಮಾಡಬೇಕು ಅಥವಾ ತಿದ್ದುಪಡಿ ಮಾಡಬೇಕು ಅಂದುಕೊಂಡಿದ್ದರೆ.

ಜೊತೆಗೆ ಹೊಸ ವ್ಯಕ್ತಿಯನ್ನು ನಿಮ್ಮ ರೇಷನ್ ಕಾರ್ಡ್ ಗೆ ಸೇರಿಸಬೇಕು ಎಂದುಕೊಂಡರೆ ಅಥವಾ ನೀವು ಕುಟುಂಬದ ಸದಸ್ಯರನ್ನು ತೆಗೆದು ಹಾಕಬೇಕು ಅಂದುಕೊಂಡಿದ್ದರು ಸಹ ನೀವು ಈ ಒಂದು ಸಮಯದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶ ಎಂದು ಹೇಳಬಹುದು.

ಇದೇ ಸೆಪ್ಟೆಂಬರ್ 1 ರಿಂದ 10 ನೇ ತಾರೀಖಿನವರೆಗೂ ಬೆಳಗ್ಗೆ 10ರಿಂದ ಸಂಜೆ 5ರ ತನಕ ಅವಕಾಶ ಮಾಡಿಕೊಡಲಾಗಿದೆ.ನೀವು ನಿಮ್ಮ ಹತ್ತಿರದ ಗ್ರಾಮ 1 ಕೇಂದ್ರಗಳಲ್ಲಿ ಮತ್ತು ಸೇವಾ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯನ್ನು ನೀವು ಮಾಡಿಸಬಹುದು.

ನೀವು ನಿಮ್ಮ ಹತ್ತಿರದ ಕೇಂದ್ರಗಳಿಗೆ ಹೋಗಿ ನಾಳೆಯಿಂದ ಬೆಳಗ್ಗೆ 10 ರಿಂದ ಸಂಜೆ ಐದರ ತನಕ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲಾತಿಗಳು:

ಇನ್ನು ತಿದ್ದುಪಡಿಗೆ ಬೇಕಾಗುವ ದಾಖಲಾತಿಗಳನ್ನು ನೋಡುವುದಾದರೆ ನೀವು ನಿಮ್ಮ ಮನೆಯ ಸದಸ್ಯರನ್ನು ನಿಮ್ಮ ರೇಷನ್ ಕಾರ್ಡ್ ಗೆ ಸೇರಿಸುವುದಾದರೆ ಅವರ ಆಧಾರ್ ಕಾರ್ಡ್ ಕಂಪಲ್ಸರಿ ಬೇಕಾಗುತ್ತದೆ.

ಜೊತೆಗೆ ನೀವು ನಿಮ್ಮ ಮನೆಯ ಹೊಸ ಮಕ್ಕಳನ್ನು ರೇಷನ್ ಕಾರ್ಡ್ ಸೇರ್ಪಡೆ ಮಾಡುವುದಾದರೆ ಅವರ ಹುಟ್ಟಿನ  ಸರ್ಟಿಫಿಕೇಟ್ (Birth Certificate) ಕಡ್ಡಾಯವಾಗಿ ಬೇಕಾಗುತ್ತದೆ. ಜೊತೆಗೆ ಅವರಿಗೆ ಮಾಡಿಸಲಾದ  ಆಧಾರ್ ಕಾರ್ಡ್ ಕೊಡಬೇಕಾಗುತ್ತದೆ.

ಅಕಸ್ಮಾತ್ ನೀವೇನಾದರೂ ರೇಷನ್ ಕಾರ್ಡ್ ನಿಂದ ತೆಗೆದು ಹಾಕಬೇಕು ಅಂದರೆ, ಮರಣ ಹೊಂದಿದ್ದರೆ ಅಥವಾ ಅವರೇನಾದರೂ ಬೇರೆ ಫ್ಯಾಮಿಲಿ ಮಾಡಿಕೊಂಡರೆ ನೀವು ಅದಕ್ಕೆ ಈ ಇಂದು ರೀತಿಯ ಕಾರಣವನ್ನು ಕೊಟ್ಟು ನೀವು ತೆಗೆದು ಹಾಕಿಸಬಹುದು.

ನೀವು ಒಂದು ಬಾರಿ ತಿದ್ದುಪಡಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ನಿಮಗೆ ಒಂದು ಪತ್ರವನ್ನು ಕೊಡುತ್ತಾರೆ ಅದನ್ನು ನೀವು ತೆಗೆದುಕೊಂಡು ಹೋಗಿ ನಿಮ್ಮ ತಾಲೂಕ್ ಆಫೀಸಿನಲ್ಲಿ ಕೊಟ್ಟರೆ ಆಹಾರ ಕೇಂದ್ರದಲ್ಲಿ ಅಪ್ಡೇಟ್ ಮಾಡಿ ನಿಮಗೆ ಹೊಸ ರೇಷನ್ ಕಾರ್ಡನ್ನು ಕೊಡುತ್ತಾರೆ…

Ration card correction starts from today, these documents are mandatory!!
Ration card correction starts from today, these documents are mandatory!!
Leave a comment