Gruha Lakshmi: ಗೃಹ ಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಎಲ್ಲರಿಗೂ ಸಿಗುವುದಿಲ್ಲ! ಕೇವಲ ಇವರಿಗೆ ಮಾತ್ರ ಹಣ ಜಮಾ ಆಗುತ್ತದೆ!
Gruha Lakshmi Scheme: ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈಗಾಗಲೆ ರಾಜ್ಯದ 80% ಮಹಿಳೆಯರು 2000 ರೂಗಳನ್ನು ತಮ್ಮ ಖಾತೆಯಲ್ಲಿ ನೇರವಾಗಿ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಯ ಮಹಿಳಾ ಯಜಮಾನಿಯ ಖಾತೆಗೆ 2000 ರೂಗಳನ್ನು ತಮ್ಮ ಖಾತೆಗೆ ಜಮಾ ಮಾಡುವಂತೆ ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡಿತು. ಇನ್ನು ಅದರಂತೆ, ಕಳೆದ ತಿಂಗಳು ಈ ಗೃಹ ಲಕ್ಷ್ಮೀ ಯೋಜನೆಗೆ ರಾಜ್ಯ ಸರ್ಕಾರವು ಚಾಲನೆ ನೀಡಿತ್ತು. ಇನ್ನು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಜ್ಯದ ಮಹಿಳೆಯ ಖಾತೆಗೆ ಸುಮಾರು 2000 ರೂಗಳನ್ನು ಜಮಾ ಮಾಡಲಾಗಿದೆ.
ರಾಜ್ಯದ 70% ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಯೋಜನೆಯ 2000 ದೊರಕಿದೆ.
ಈಗಾಗಲೆ ರಾಜ್ಯದ 70% ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಯೋಜನೆಯ 2000 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಇನ್ನು ಮಿಕ್ಕ 30% ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಹೌದು, ಇದಕ್ಕೆ ಮುಖ್ಯ ಕಾರಣವೆಂದರೆ, ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗಿದ್ದರೆ, ಮಾತ್ರ ಅಂತವರ ಖಾತೆಗೆ ಗೃಹ ಲಕ್ಷ್ಮೀ ಯೋಜನೆಯ ಹಣ ಜಮಾ ಆಗುವುದು. ಅಲ್ಲದೆ ಅವರ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಬುಕ್ ಮತ್ತು ಪಡಿತರ ಚೀಟಿಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಸಹ ಅವರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.
ಇನ್ನು ಇಂತಹ ಎಲ್ಲಾ ಸಮಸ್ಯೆಗಳನ್ನೂ ಸರಿ ಪಡಿಸಿಕೊಂಡು ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು. ಇನ್ನು ಈಗಾಗಲೆ ಗೃಹ ಲಕ್ಷ್ಮೀ ಯೋಜನೆಯ ಮೊದಲನೆಯ ಕಂತಿನ ಹಣವನ್ನು ಪಡೆದವರೂ ಸಹ ಎರಡನೇ ಕಂತಿನ ಹಣವನ್ನು ಇನ್ನು ಪಡೆದಿಲ್ಲ. ಮಹಿಳಾ ಕಲ್ಯಾಣ ಮತ್ತು ಆಯೋಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣವನ್ನು ಅಕ್ಟೋಬರ್ ತಿಂಗಳಿನ ಎರಡನೇ ವಾರದಲ್ಲಿ ಡಿಬಿಟಿ (DBT) ಮೂಲಕ ಜಮಾ ಮಾಡಲಾಗುವುದು ಎಂದು ತಿಳಿಸಿದ್ದರು.
ಆದರೆ ಇಂದಿಗೂ ಸಹ ಅನೇಕರ ಖಾತೆಗೆ ಎರಡನೇ ಕಂತಿನ ಗೃಹ ಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ. ಇನ್ನು ಈ ಬಗ್ಗೆ ಅನೇಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಅನೇಕರ ಬ್ಯಾಂಕ್ ಖಾತೆಗೆ ಎರಡನೇ ಕಂತಿನ ಹಣ ಜಮಾ ಆಗಿಲ್ಲ ಎಂದು ಇತ್ತೀಚೆಗೆ ಚಿತ್ರದುರ್ಗದಲ್ಲಿ ಮಾಧ್ಯಮದವರ ಬಳಿ ಮಾತನಾಡಿದ ಸಿ ಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಶೀಘ್ರದಲ್ಲೇ ಈ ತಾಂತ್ರಿಕ ಸಮಸ್ಯೆಯನ್ನು ಸರಿ ಪಡಿಸಿ ಡಿಬಿಟಿ ಮೂಲಕ ಎರಡನೇ ಕಂತಿನ ಹಣ ಜಮಾ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಈ ರೀತಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ನೀವು ಮೊದಲನೆಯ ಕಂತಿನ ಹಣ ಪಡೆದಿದ್ದರೂ ಸಹ ನಿಮ್ಮ ಬ್ಯಾಂಕ್ ಅಥವಾ ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ, ನೀವು ಎರಡನೇ ಕಂತಿನ ಹಣ ಪಡೆಯುವುದಿಲ್ಲ. ಇನ್ನು ನೀವು ನಿಮ್ಮ ಗೃಹ ಲಕ್ಷ್ಮೀ ಯೋಜನೆಯ ಸ್ಟೇಟಸ್ ಅನ್ನು ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ರೀತಿ ಸುಲಭವಾಗಿ ಪರಿಶೀಲಿಸಬಹುದು. ಇನ್ನು ಪಡಿತರ ಚೀಟಿಯಲ್ಲಿ ಯಜಮಾನಿ ಹೆಸರು ಬದಲಾವಣೆಗೆ ಇದೀಗ ಅಕ್ಟೋಬರ್ 13 ರವರೆಗೂ ಕಾಲಾವಕಾಶ ನೀಡಲಾಗಿದೆ.
Gruha Lakshmi Scheme new Updates from Karnataka Government.