New Property Rule: ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ನೀವು ಪಡೆದಿದ್ದರೆ ಇಂದೆ ಈ ಕೆಲಸ ಮಾಡಿ! ಸರ್ಕಾರದಿಂದ ಹೊಸ ನಿಯಮ ಜಾರಿಗೆ!
New Property Rule: ಕೇಂದ್ರ ಸರ್ಕಾರವು ದೇಶದ ಜನರ ಸುರಕ್ಷೆಗಾಗಿ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಪ್ರತಿಯೊಬ್ಬ ಭಾರತೀಯನ ಬಳಿ ಆಧಾರ್ ಕಾರ್ಡ್ ಇರುವುದು ಕಡ್ಡಾಯ ಮಾಡಲಾಗಿದೆ. ಆಧಾರ್ ಕಾರ್ಡ್ (Aadhaar Card) ಇಲ್ಲದೆ ಹೋದರೆ ನೀವು ಸರ್ಕಾರದಿಂದ ಸಿಗುವ ಯಾವುದೇ ಲಾಭವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಇನ್ನು ನಿಮ್ಮ ಬ್ಯಾಂಕ್ ಪಾಸ್ ಬುಕ್ (Bank Passbook) ಅಥವಾ ನಿಮ್ಮ ಪ್ಯಾನ್ ಕಾರ್ಡ್ (Pan Card) ಅಥವಾ ನಿಮ್ಮ ರೇಷನ್ ಕಾರ್ಡ್ (Ration Card) ಅಂತಹ ಮುಖ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಬಹಳ ಮುಖ್ಯ ಹಾಗೂ ಕೇಂದ್ರ ಸರ್ಕಾರ ಇದನ್ನು ಕಡ್ಡಾಯ ಗೊಳಿಸಿದೆ.
ಇನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು (Central Government) ಮುಂದಿನ ದಿನಗಳಲ್ಲಿ ಆಸ್ತಿಯ ಮೇಲಿನ ಶುಲ್ಕಗಳ ಮೇಲೆಯೂ ಸಹ ಶೇಕಡಾ 30% ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ನೀಡಿತ್ತು. ಇನ್ನು ಈ ವಿಷಯ ಹೊರ ಬೀಳುತ್ತಿದ್ದಂತೆ, ಇದೀಗ ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಆಸ್ತಿ ರಿಜಿಸ್ಟ್ರೇಷನ್ ಕೆಲಸಗಳು (Registration Work) ಜಾಸ್ತಿಯಾಗಿದೆ. ಅನೇಕರು ಕಷ್ಟ ಪಟ್ಟು ಆಸ್ತಿಯನ್ನು ಖರೀದಿ ಮಾಡುತ್ತಿದ್ದರೆ, ಇನ್ನೊಂದು ಕಡೆ ವಂಚನೆ ಮಾಡುವ ಮೂಲಕ ಕೆಲವರು ಆಸ್ತಿಯನ್ನು ಪಡೆಯುವ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಹೊಸ ನಿಯಮ.
ಇನ್ನು ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಇದೀಗ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೌದು, ಯಾವುದೇ ಆಸ್ತಿಯನ್ನು ಖರೀದಿ ಮಾಡಿದರೆ ಅದನ್ನು ನಿಮ್ಮ ಹೆಸರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇದೀಗ ಕೇಂದ್ರ ಸರ್ಕಾರ ತಂದಿರುವ ಹೊಸ ನಿಯಮದ ಅನುಸಾರ, ನೀವು ಯಾವುದೇ ಆಸ್ತಿ ಖರೀದಿ ಮಾಡಿದರೆ ನಿಮ್ಮ ಆಸ್ತಿ ಪತ್ರಗಳ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಬಹಳ ಮುಖ್ಯ.

ಹೌದು, ನೀವು ಆಸ್ತಿಯನ್ನು ರಿಜಿಸ್ಟರ್ ಮಾಡಿಸುವ ವೇಳೆ ನಿಮ್ಮ ಆಸ್ತಿ ಪತ್ರಗಳ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಸಹ ಲಿಂಕ್ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ನಿಮ್ಮ ಆಸ್ತಿ ಪತ್ರಗಳ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ, ಇನ್ನು ನಿಮ್ಮ ಆಸ್ತಿಯನ್ನು ಯಾರಾದರೂ ವಂಚನೆ ಮಾಡಿ ಲಪಟಾಯಿಸಿಕೊಂಡರೆ, ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಆಸ್ತಿ ಪತ್ರಗಳಿಗೆ ಲಿಂಕ್ ಮಾಡದೇ ಇರುವ ಕಾರಣ ಸರ್ಕಾರ ಈ ವಿಷಯದಲ್ಲಿ ನಿಮ್ಮ ಪರ ನಿಲ್ಲಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ನೀವು ನಿಮ್ಮ ಆಸ್ತಿ ಪತ್ರಗಳ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದರೆ, ನಿಮ್ಮ ಆಸ್ತಿಯ ಮೇಲೆ ವಂಚನೆ ನಡೆದರೆ ಇಂತಹ ಸಮಸ್ಯೆಯಿಂದ ನೀವು ಸುಲಭವಾಗಿ ಪಾರಾಗಬಹುದು. ನಿಮ್ಮ ಆಸ್ತಿಯನ್ನು ಸಹ ನೀವು ಸುರಕ್ಷಿತವಾಗಿರಿಸಬಹದು.
New rule for multi-property owners.