Anna Bhagya: ಅನ್ನಭಾಗ್ಯ ಯೋಜನೆಯ ಕುರಿತು ಹೊಸ ನಿರ್ಧಾರ ತೆಗೆದುಕೊಂಡ ಸರ್ಕಾರ! ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ!
ರಾಜ್ಯದಲ್ಲಿ ಅಕ್ಕಿಯ ಕೊರತೆಯಿಂದಾಗಿ ರಾಜ್ಯದ ಜನರಿಗೆ 5 ಕೆಜಿ ಅಕ್ಕಿಯನ್ನು ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬದಲಿಗೆ 170 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು.
Anna Bhagya: ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನರ ಆರ್ಥಿಕ ಪರಿಸ್ಥಿತಿಯನ್ನು (Economic situation) ಸುಧಾರಿಸಲು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಇನ್ನು ಅದರಂತೆ ಈಗಾಗಲೆ ನಾಲ್ಕು ಯೋಜನೆಗಳನ್ನು ಅಂದರೆ, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆ, ಮತ್ತು ಅನ್ನಭಾಗ್ಯ ಅಂತಹ ಯೋಜನೆಗಳಿಗೆ ಚಾಲ್ತಿ ನೀಡಿದೆ. ಇನ್ನು ಈ ಯೋಜನೆಗಳ ಲಾಭವನ್ನು ಈಗಾಗಲೆ ರಾಜ್ಯದ ಜನರು ಪಡೆಯುತ್ತಿದ್ದಾರೆ. ಇನ್ನು ಉಳಿದ ಕೊನೆಯ ಯೋಜನೆ ಯುವನಿಧಿ (Yuva Nidhi Scheme) ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದ ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಹೇಳಲಾಗಿತ್ತು. ಆದರೆ ರಾಜ್ಯದಲ್ಲಿ ಅಕ್ಕಿಯ ಕೊರತೆ ಕಂಡು ಬಂದ ಕಾರಣ, ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೂ ಸಹ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿಯ ಬದಲಾಗಿ ಮನೆಯ ಯಜಮಾನಿಯ ಖಾತೆಗೆ ಹಣವನ್ನು ಜಮಾ ಮಾಡುವುದಾಗಿ ಹೇಳಲಾಗಿತ್ತು. ಇನ್ನು ಅದೇ ರೀತಿ ಕಳೆದ ಎರಡು ತಿಂಗಳಿಂದ ಜನರು 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ತಮ್ಮ ಖಾತೆಗೆ ಸ್ವೀಕರಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಇನ್ನು ಅನೇಕ ಜನರು ಈ ಬಗ್ಗೆ ಬೇಸರವನ್ನು ಸಹ ವ್ಯಕ್ತಪಡಿಸಿದ್ದರು. ಹೌದು, ಅನೇಕರು ತಮಗೆ ಹಣ ಬೇಡ, ಅದರ ಬದಲಿಗೆ ರಾಗಿ ಹಾಗೂ ಗೋಧಿ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಇನ್ನು ಇದೀಗ ರಾಜ್ಯ ಸರ್ಕಾರವು ಈ ವಿಷಯದ ಕುರಿತು ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೌದು, ಇತ್ತೀಚೆಗೆ ಈ ವಿಷಯದ ಬಗ್ಗೆ ಕೃಷಿ ಸಚಿವ ಏನ್. ಚಲುವರಾಯಸ್ವಾಮಿ (N. Chaluvaraya Swamy) ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಅಕ್ಕಿಯ ಕೊರತೆಯಿಂದಾಗಿ ರಾಜ್ಯದ ಜನರಿಗೆ 5 ಕೆಜಿ ಅಕ್ಕಿಯನ್ನು ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬದಲಿಗೆ 170 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಯೋಜನೆಯಲ್ಲಿ ಬದಲಾವಣೆ.
ಇದೀಗ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಹೌದು, ರಾಜ್ಯದ ಜನರಿಗೆ ಪೌಷ್ಠಿಕ ಆಹಾರ ನೀಡುವ ಸಲುವಾಗಿ ಇದೀಗ 5 ಕೆಜಿ ಅಕ್ಕಿಯ ಬದಲಿಗೆ ರಾಗಿ ಅಥವಾ ಗೋಧಿ ಅಥವಾ ಕಡಲೆ ಕಾಯಿ ಎಣ್ಣೆ ನೀಡಲು ಇದೀಗ ರಾಜ್ಯ ಸರ್ಕಾರವು ನಿರ್ಧರಿಸಿದೆ.
ಇನ್ನು ಮುಂಬರುವ ತಿಂಗಳಿನಿಂದ ಈ ರೀತಿ ರಾಜ್ಯದ ಜನರಿಗೆ ಪೋಷ್ಟಿಕ ಆಹಾರ (Nutritious food) ನೀಡುವ ಸಲುವಾಗಿ ದವಸ ಧಾನ್ಯಗಳನ್ನು ರಾಜ್ಯ ಸರ್ಕಾರವು ವಿತರಿಸಲಿದೆ ಎನ್ನಲಾಗುತ್ತಿದೆ.
New Updates for Anna Bhagya Scheme.