Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಗೃಹ ಲಕ್ಷ್ಮಿ ಯೋಜನೆ ಪಿಂಕ್ ಕಾರ್ಡ್ ಇದ್ದವರಿಗೆ ಮಾತ್ರ 2000 ಹಣ ಸಿಗುವುದು, ಏನಿದು ಪಿಂಕ್ ಕಾರ್ಡ್ ಗೊತ್ತ ??

Gruha Lakshmi Pink Card: ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 20 ರಂದು ಬೆಳಗಾವಿ ಅಲ್ಲಿ ಚಾಲನೆ ನೀಡಲಾಗುವುದು. ಅಂದಿನಿಂದ ಪ್ರತಿ ಮನೆ ಯಜಮಾನಿ ಖಾತೆಗೆ 2000 ಹಣ ಜಮಾ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು. ವಿಕಾಸ ಸೌಧ ದಲ್ಲಿ ಎಲ್ಲಾ ಜಿಲ್ಲಾ ಮತ್ತು ಅಧಿಕಾರಿಗಳು ಚರ್ಚೆ ಮಾಡಲಾಯಿತು.

ನಂತರ ಮಾದ್ಯಮ ದ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಅವರು ಆಗಸ್ಟ್ 20ರಂದು ಬೆಳಗಾವಿ ಅಲ್ಲಿ ಗೃಹ ಲಕ್ಷ್ಮಿ ಯೋಜನೆ ಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಆಗಸ್ಟ್ 20ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು ಕಾಂಗ್ರೆಸ್ ಸರ್ಕಾರದ ಮುಖ್ಯಸ್ಥರಾದ ಸೋನಿಯಾ ಗಾಂಧಿಯವರು (Sonia Gandhi) ಪ್ರಿಯಾಂಕ ಗಾಂಧಿ (Priyanka Gandhi) ರಾಹುಲ್ ಗಾಂಧಿ(Rahul Gandhi) ಹಾಗೂ ಎಐಸಿಸಿ  ಅಧ್ಯಕ್ಷರಾಗಿರುವ ಖರ್ಗೆ ಅವರಿಗೆ ಆಹ್ವಾನ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ 11 ಕಡೆ ಏಕಕಾಲದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು ಎಲ್ಲಾ ಗ್ರಾಮ ಪಂಚಾಯತಿ ನಗರಸಭೆ ಮತ್ತು ಪುರಸಭೆಗಳಲ್ಲಿ ಉದ್ಘಾಟನೆಯ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಂಚಾಯಿತಿಗೆ ಒಬ್ಬರಂತೆ ನೋಡಲು  ಆಫೀಸರ್ ಗಳನ್ನು ನೇಮಕ ಮಾಡಲಾಗಿದ್ದು ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು  ಡಿಕೆ ಶಿವಕುಮಾರ್ ಅವರು ಮನವಿ ಮಾಡಿಕೊಂಡರು. ಈಗಲೇ ಸಮುದಾಯ ಭವನವನ್ನು ಬುಕ್ ಮಾಡಿ ಜಿಲ್ಲೆಯ ತಾಲೂಕು ಪುರಸಭೆ ನಗರಸಭೆ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮ ಮಾಡುವುದರಿಂದ ಅಂದು ಸಮುದಾಯ ಭವನಗಳು ಕಲ್ಯಾಣ ಮಂಟಪ ಮತ್ತು ಗ್ರೌಂಡ್ಗಳನ್ನು ಮೊದಲೇ ಬುಕ್ ಮಾಡಬೇಕು.

ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಆಯೋಜನೆಗಳ ಜಿಲ್ಲಾಧಿಕಾರಿಗಳಿಗೆ  ಡಿ ಕೆ ಶಿವಕುಮಾರ್ (D K Shivakumar ) ಅವರು  ಸೂಚನೆ ನೀಡಿದರು. ಈ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar ) ಅವರು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲ್ತಿಸಬೇಕು ಎಂದು ನನ್ನ ಕನಸಾಗಿತ್ತು ಈ ಕುರಿತು ಸಿದ್ದರಾಮಯ್ಯ (C M Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಳಿ ಕುರಿತು ನಾನು ಮನವಿ ಮಾಡಿದ್ದೆ.

ನನ್ನ ಮನವಿಯನ್ನು ಸ್ವೀಕಾರ ಮಾಡಿದ ನಾಯಕರು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚನೆ ನೀಡಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು ಗೃಹಲಕ್ಷ್ಮಿ ಯೋಜನೆಗೆ. ಪಿಂಕ್ ಕಲರ್ ಸ್ಮಾರ್ಟ್ ಕಾರ್ಡ್ ಯೋಜನೆಗೆ ಅರ್ಹರಾಗಿರುವವರಿಗೆ ಕೊಡಲಾಗುವ ಈ ಸ್ಮಾರ್ಟ್ ಕಾರ್ಡ್ ಅನ್ನು ಇದೇ ವೇಳೆ ಡಿಸಿಎಂ ಶಿವಕುಮಾರ್ ಅವರು ಪ್ರದರ್ಶನ ಮಾಡಿದರು.

ಅದು ಪಿಂಕ್ ಬಣ್ಣವನ್ನು ಹೊಂದಿದ್ದು ಯೋಜನೆಯ ಉದ್ಘಾಟನೆ ದಿನದಂದು ಅದನ್ನು ಬಿಡುಗಡೆ ಮಾಡಲಾಗುತ್ತದೆ. ಈ ಗುರುತಿನ ಚೀಟಿಯಲ್ಲಿ ಫಲಾನುಭವಿಗಳ ವಿವರ ಜೊತೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಾಗೂ ಸಚಿವರ ಭಾವಚಿತ್ರಗಳು ಕೂಡ ಇರುತ್ತದೆ. ಇಷ್ಟೇ  ಅಲ್ಲದೆ  ಜೊತೆಗೆ ಈ ಕಾರ್ಡ್ನಲ್ಲಿ 2000 ಎಂದು ನಮೂದೇನೆ ಕೂಡ ಮಾಡಲಾಗಿದೆ ನೀವು ನಿಮ್ಮ ಗ್ರಾಮವನ್ ಕೇಂದ್ರಗಳಲ್ಲಿಯೇ ಇದನ್ನು ಅಪ್ಲೈ ಮಾಡಿಕೊಳ್ಳಬೇಕಾಗುತ್ತದೆ.

ನೀವು ಯಾವಾಗಲೂ ಬೇಕಾದರೂ ಈ ಕಾರ್ಡನ್ನು ತೆಗೆದುಕೊಳ್ಳಬಹುದು ಇದು ನಿರಂತರ ಪ್ರಕ್ರಿಯೆಯಾಗಿದೆ ಜೊತೆಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಕೆಲವರು ಬಳಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡುಗಳು ಇಲ್ಲ ಅಂತವರು ಹೊಸ ಕಾರ್ಡ್ ಮಾಡಿಸಿದ ಬಳಿಕ ಗೃಹ  ಲಕ್ಷ್ಮಿ ಯೋಜನೆಯನ್ನು  ಅಪ್ಲೈ ಮಾಡಬಹುದು ಎಂದು ಸಚಿವೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. Gruha Lakshmi Scheme Pink card holder only get 2000 money.

ಇದನ್ನು ಓದಿ :-

ಈ ಕಾರ್ಡ್ ಇದ್ದವರಿಗೆ ಉಚಿತ ಮನೆ ನಿಮ್ಮ ಮನೆ ಬಾಗಿಲಿಗೆ,  ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ.

ಸ್ವಂತ ಮನೆ ಇಲ್ಲದವರಿಗೆ ಬಂಪರ್ ಆಫರ್ ನೀಡಿದ ಸರ್ಕಾರ, ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಹೊಸ ಮನೆಗಳ ಅರ್ಜಿಗೆ ಆಹ್ವಾನ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

Gruha Lakshmi: ಗೃಹಲಕ್ಷ್ಮಿ ಯೋಜನೆಗೆ APL ಕಾರ್ಡ್ ಮತ್ತು BPL ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹೊಸ ಗುಡ್ ನ್ಯೂಸ್ ನೀಡಿದೆ.

 

Leave a comment