Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಹಿಳೆಯರಿಗೆ ಉಚಿತ ಸ್ಕೂಟಿ, ಸಿಎಂ ಸಿದ್ದರಾಮಯ್ಯ ಘೋಷಣೆ, ಇಂತವರು ಮಾತ್ರ ಇದರ ಫಲವನ್ನು ಪಡೆಯಬಹುದು.

Free Scooty For Ladies:- ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಗಿಫ್ಟ್ ನೀಡಲಾಗಿದ್ದು ಈ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಬಡ ಹೆಣ್ಣು ಮಕ್ಕಳಿಗೆ ಸ್ಕೂಟಿಯನ್ನು ಕೊಡುವ ನಿರ್ಧಾರ ಮಾಡಲಾಗಿದೆ. ಈಗಾಗಲೇ ನಮ್ಮ ದೇಶದಲ್ಲಿ ಕೆಲವೊಂದಿಷ್ಟು ರಾಜ್ಯಗಳು ಬಡವ ಮಹಿಳೆಯರಿಗಾಗಿ ಸ್ಕೂಟಿಯನ್ನು ಕೂಡ ನೀಡಲಾಗಿದೆ.

ಅದೇ ರೀತಿಯಾಗಿ ನಮ್ಮ ರಾಜಧಾನೀ  ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರು ಕೂಡ ಮಹಿಳೆಯರಿಗಾಗಿ ಉಚಿತ ಸ್ಕೂಟಿ ಯೋಜನೆ ಸಿದ್ಧಪಡಿಸಿದ್ದು ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕಾರ ಮಾಡುವಂತಾಗಿದೆ. ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಮೇಲಿಂದ ಮೇಲೆ ಹೊಸ ಹೊಸ ರೀತಿಯ ಆಫರ್ ಗಳನ್ನು ಕೊಡುತ್ತಿದ್ದು.

ಈಗಾಗಲೇ ಕರ್ನಾಟಕದ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಲಾಗಿದ್ದು ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿಗಳನ್ನು ಸಹ ಕೊಡಲಾಗಿದ್ದು ಇದರ ಜೊತೆಗೆ ಸ್ಕೂಟಿಯನ್ನು ಸಹ ಈಗ ನೀಡಲು ಸಿದ್ಧವಾಗಿದೆ. ದೇಶದ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ರೀತಿಯ ಯೋಜನೆಗಳನ್ನು ನಡೆಸಲಾಗುತ್ತಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಕೂಡ ಮಹಿಳೆಯರಿಗಾಗಿ ಉಚಿತ ಸ್ಕೂಟಿಯನ್ನು ಕೊಡುವುದಾಗಿ ಆಯೋಜನೆ ಮಾಡಲಾಗುತ್ತಿದೆ. ಯೋಜನೆಯ ಮೂಲಕ ರಾಜ್ಯದ ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಟಿ ನೀಡಲಾಗುವುದು. ನೀವು ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ಮೂಲಕ ಅರ್ಜಿಯನ್ನು ಕೂಡ ಸಲ್ಲಿಸಬೇಕಾಗುತ್ತದೆ.

ಕರ್ನಾಟಕ ಸರ್ಕಾರವು ಸ್ಕೂಟಿಯನ್ನು ಕೊಡಲು ಅರ್ಜಿಯನ್ನು ಸ್ವೀಕಾರ ಮಾಡುತ್ತದೆ ಆಗ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ನಿಮ್ಮ ಮನೆಯ ಮಗಳಿಗೂ ಕೂಡ ಉಚಿತ ಸ್ಕೂಟಿಯನ್ನು  ನೀಡಲಾಗುತ್ತದೆ. ಯೋಜನೆಯನ್ನು ಪ್ರಾರಂಭಿಸುವ ಕುರಿತು ಸಿದ್ದರಾಮಯ್ಯನವರು ಮಾತುಕತೆ ಕೂಡ ಈಗಾಗಲೇ ಮಾತನಾಡಿದ್ದಾರೆ.

ಯೋಜನೆಯ ಮೂಲಕ ಪದವಿ ಮತ್ತು ಸ್ನಾತಕೋದರ ಪದವಿ ಓದುತ್ತಿರುವ ಮಹಿಳೆಯರಿಗೆ ಸ್ಕೂಟಿಯನ್ನು ನೀಡಲಾಗುವುದು ಇದರಿಂದ ವಿದ್ಯಾರ್ಥಿನಿಯರು ಸದೃಢವಾಗಿ ಸ್ವಾವಲಂಬಿಗಳಾಗಬಹುದು. ಕೇವಲ ಸರ್ಕಾರಿ ವಿದ್ಯಾರ್ಥಿನಿಯರಿಗೆ ಅಲ್ಲದೆ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಿಗೂ ಕೂಡ ಈ ಯೋಜನೆಯನ್ನು ಇದರ ಪ್ರಯೋಜನವನ್ನು ನೀಡಲಾಗುವುದು.

ಯೋಜನೆಯ ಮೂಲಕ ವಿದ್ಯಾರ್ಥಿನಿಯರಿಗೆ ಸ್ಕೂಟಿ ಖರೀದಿ ಮಾಡಲು ಆರ್ಥಿಕ ನೆರವು ನೀಡಲಾಗುವುದು. ಆಗ ವಿದ್ಯಾರ್ಥಿನಿ ಕಾಲೇಜಿಗೆ ಹೋಗಲು ಬರಲು ಸಹಾಯವಾಗುತ್ತದೆ ಯೋಜನೆಯ ಮೂಲಕ ಪದವಿ ಹಾಗೂ ಸ್ನಾತಕೋತರ ಮಹಿಳೆಯರಿಗೆ ಯೋಜನೆಯ ಲಾಭವನ್ನು ನೀಡಲಾಗುವುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಮಹಿಳೆ ಅಂದರೆ ವಿದ್ಯಾರ್ಥಿನಿ ಕರ್ನಾಟಕದ ಕಾಯಂ ನಿವಾಸ ಹೊಂದಿರಬೇಕು.

ವಿದ್ಯಾರ್ಥಿನಿ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಓದುತ್ತಿರಬೇಕು. ಅರ್ಜಿದಾರರ ವರ್ಷದ ಆದಾಯ 2.5 ಲಕ್ಷಗಳಿಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿನಿ 10 ಮತ್ತು 12ನೇ ತರಗತಿಯಲ್ಲಿ 75 ಪರ್ಸೆಂಟ್ ಅಂಕವನ್ನು ಪಡೆದಿರಬೇಕು. ಅರ್ಜಿದಾರರ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬೇಕು. ಜೊತೆಗೆ ಅವರು ಬಿಪಿಎಲ್ ಕಾರ್ಡ್ ಹೊಂದಿರಬೇಕಾಗುತ್ತದೆ.

ಇಷ್ಟೇ ಅಲ್ಲದೆ ಇದಕ್ಕೆ ಬೇಕಾಗುವ ಪ್ರಮುಖ ಮಾಹಿತಿಗಳು ಆಧಾರ್ ಕಾರ್ಡ್ , ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಾನ್ ಕಾರ್ಡ್ ನಿಮ್ಮ ಮೂರು ಭಾವಚಿತ್ರಗಳು ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿ ನಿಮ್ಮ ಜನನ ಪ್ರಮಾಣ ಪತ್ರ ಬ್ಯಾಂಕ್ ಹೇಳಿಕೆ ಈ ವಿವರಗಳ ಜೊತೆಗೆ ನೀವು ಉಚಿತ ಸ್ಕೂಟಿ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Leave a comment