Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

2023-24 ರ ಸಾಲಿನ  ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ. 

Ration Card: ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡೆ ಕಾರ್ಯಕ್ರಮ ನಡೆಯುತ್ತಿದ್ದು ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ತಪ್ಪು ಇದ್ದರೆ ಅಥವಾ ನೀವೇನಾದರೂ ರಿಲೇಷನ್ ಕಾರ್ಡ್ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ಗಳನ್ನು ಬದಲಿಸುವುದಾದರೆ ಈ ಸಮಯ ನಿಮಗೆ ಬಹಳ ಸೂಕ್ತ ಸಮಯ ಎಂದು ಹೇಳಲಾಗಿದೆ. ಮತ್ತು ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಸಲ್ಲಿಸಬೇಕಾಗಿರುವ ಮುಖ್ಯ ದಾಖಲೆಗಳು ಏನು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಂಡು ನೀವು ಈ ಕೂಡಲೇ ನಿಮ್ಮ ರೇಷನ್ ಕಾರ್ಡ್ ಗಳಲ್ಲಿ ಏನಾದರೂ ಬದಲಾವಣೆ ಆಗಬೇಕಿದ್ದರೆ ನಿಮ್ಮ ತಾಲೂಕು ಪಂಚಾಯಿತಿಗೆ ಹೋಗಿ ಸರಿಪಡಿಸಿಕೊಳ್ಳಬೇಕು.

ಕಾಂಗ್ರೆಸ್ ಸರ್ಕಾರ ಉತ್ತಮ ಪಂಚ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆಯ ಮಹಿಳೆ ರೇಷನ್ ಕಾರ್ಡ್ ನಲ್ಲಿ ಇರಬೇಕು ಎಂದು ಘೋಷಣೆ ಮಾಡಿದ ನಂತರ ಪ್ರತಿಯೊಬ್ಬರೂ ಕೂಡ ರಾಜ್ಯದಲ್ಲಿ ತಲೆಕೆಡಿಸಿಕೊಂಡು ತಮ್ಮ ಹೆಂಡತಿ ಅಥವಾ ತಾಯಿಯನ್ನು ಮನೆಯ ಮಹಿಳೆಯನ್ನಾಗಿ ರೇಷನ್ ಕಾರ್ಡ್ ನಲ್ಲಿ ಗುರುತಿಸಿ ರೇಷನ್ ಕಾರ್ಡ್ ಬದಲಾವಣೆ ಮಾಡಲಾಗುತ್ತಿದೆ. ಈಗ ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಲು ಚಾಲ್ತಿ ನೀಡಿದ್ದೇವೆ ಎಂದು ಮುನಿಯಪ್ಪ ಅವರು ಹೇಳಿಕೆ ನೀಡಿದ್ದಾರೆ.

ಅರ್ಜಿಯನ್ನು ನೀವು ನಿಮ್ಮ ಮೊಬೈಲ್ ಮೂಲಕ ಸಲ್ಲಿಸಬಹುದು ಅಥವಾ ನಿಮ್ಮ ಗ್ರಾಮದಲ್ಲಿರುವ ಗ್ರಾಮ 1 ಕೇಂದ್ರಕ್ಕೆ ತೆರಳಿ ಸಲ್ಲಿಸಬೇಕು. ಜೊತೆಗೆ ನೀವು ರೇಷನ್ ಕಾರ್ಡ್ ಬದಲಾವಣೆ ಮಾಡಿಕೊಳ್ಳಬೇಕಾದರೆ ನಿಮ್ಮ ಆದಾಯ ಪ್ರಮಾಣ ಪತ್ರವನ್ನು ಕೂಡ ಅವರಿಗೆ ಕೊಡಬೇಕಾಗುತ್ತದೆ. ಇದರ ಜೊತೆಗೆ ಬಹು ಮುಖ್ಯವಾಗಿ ಆಧಾರ ಕಾರ್ಡನ್ನು ನೀವು ಕಡ್ಡಾಯವಾಗಿ ಕೊಡಲೇಬೇಕು. ಜೊತೆಗೆ ಕುಟುಂಬ ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲ ಜನರನ್ನು ಪಡಿತರ ಚೀಟಿಯಲ್ಲಿ ಆಧಾರ್ ಕಾರ್ಡುಗಳ ಸಹಾಯದಿಂದ ಸೇರ್ಪಡೆ ಮಾಡಲಾಗುತ್ತದೆ. ಅರ್ಜಿದಾರ ಕುಟುಂಬದ ಕನಿಷ್ಠ ಒಬ್ಬ ಸದಸ್ಯರು ಅವರು ಇರುವ ಪ್ರಸ್ತುತ ವಿಳಾಸವನ್ನು ಹೊಂದಿರಬೇಕು.

ನೀವು ರೇಷನ್ ಕಾರ್ಡಿಗೆ ಕೊಡಲಾಗುವ ಮೊಬೈಲ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್ ಗೆ ಈಗಾಗಲೇ ನೀವು ಲಿಂಕ್ ಮಾಡಿಸಿರಬೇಕಾಗುತ್ತದೆ. ಅರ್ಜಿದಾರರು ನಗರ ಪ್ರದೇಶಗಳಲ್ಲಿ ತಮ್ಮ ವಾರ್ಡ್ ಸಂಖ್ಯೆಯನ್ನು ಸರಿಯಾಗಿ ಹೇಳಬೇಕು. ಮತ್ತು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕು. ನೀವು ಹೊಸ ರೇಷನ್ ಕಾರ್ಡ್ ಬದಲಿಸಿಕೊಳ್ಳುವ ಸಮಯದಲ್ಲಿ ನಿಮಗೆ ಬೇಕಾಗಿರುವ ಪಡಿತರ ಚೀಟಿಯ ಅಂಗಡಿಯನ್ನು ನೀವು ನಿಮ್ಮ ನಗರ ಪ್ರದೇಶದಲ್ಲಿ ಅಥವಾ ನಿಮ್ಮ ಗ್ರಾಮಗಳಲ್ಲಿ ಎಲ್ಲಿ ಬೇಕು ಅಲ್ಲಿಯೇ ನಿಮಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಪಡಿತರ ಚೀಟಿಯನ್ನು ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ನಂತರ ನಿಮಗೆ ಬಂದಿರುವ ಹೊಸ ರೇಷನ್ ಕಾರ್ಡನ್ನು ನೀವು ನಿಮ್ಮ ಗ್ರಾಮ ಅಥವಾ ನಗರದಲ್ಲಿ ಇರುವ ಪಡಿತರ ಕೇಂದ್ರಕ್ಕೆ ಹೋಗಿ ಅಲ್ಲಿ ನೀವು ನೋಂದಾಯಿಸಿಕೊಳ್ಳಬೇಕು…

Leave a comment