Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಜಮೀನು ಮನೆಯವರ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.

Land Property Transfer rules: ಸಾಮಾನ್ಯವಾಗಿ ರೈತರು ಹಾಗೂ ಮಧ್ಯಮ ವರ್ಗದ ಕುಟುಂಬದವರಲ್ಲಿ ಎಲ್ಲಾ ಹಳ್ಳಿಗಳಲ್ಲಿಯೂ ಸಾಮಾನ್ಯವಾಗಿ ಅತಿ ಹೆಚ್ಚು ಕೃಷಿಕ ಭೂಮಿಗಳನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಹೊಂದಿರುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಜಮೀನನ್ನು ಮಾಡುತ್ತಿರುವ ಮನೆಯ ಮಾಲೀಕ ಆಕಸ್ಮಾತಾಗಿ ನಿಧನ ಹೊಂದಿದ್ದಾರೆ ಜಮೀನನ್ನು ಮನೆಯವರ ಹೆಸರಿಗೆ ಬದಲಾಯಿಸಿಕೊಳ್ಳುವುದು ಹೇಗೆ ಎಂದು ಸಾಮಾನ್ಯವಾಗಿ ಗೊತ್ತಿರುವುದಿಲ್ಲ.

ಹಾಗಾದರೆ ಜಮೀನನ್ನು ಮನೆಯವರ ಹೆಸರಿಗೆ ಬದಲಾಯಿಸಿಕೊಳ್ಳುವುದು ಹೇಗೆ? ವ್ಯಕ್ತಿ ಮರಣದ ನಂತರ ಹೇಗೆ ಎಂದು ಇಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಕುಟುಂಬದ ಆಸ್ತಿಯ ಒಡೆಯ ಜಮೀನಿನ ಮಾಲೀಕ ಏನಾದರೂ ಮರಣ ಹೊಂದಿದರೆ ನಂತರ ಆಸ್ತಿಯಲ್ಲ ನಿಮ್ಮ ಹೆಸರಿಗೆ ಆಗಬೇಕು ಅಂತಿದ್ದರೆ ಮೊದಲು ನೀವು ಪೌತಿ ಖಾತೆ (Pouthi Katha) ಮಾಡಿಸಬೇಕಾಗುತ್ತದೆ.

ಪೌತಿ ಖಾತೆ ಮೂಲಕವೇ ನೀವು ವಾರಸುದಾರನ ಹೆಸರಿಗೆ ಜಮೀನು ಟ್ರಾನ್ಸ್ಫರ್ ಮಾಡಿಕೊಳ್ಳಬೇಕು. ನಂತರ ಕುಟುಂಬದಲ್ಲಿ ಇರುವ ಎಲ್ಲರೂ ಸೇರಿ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳುವ ಸಂದರ್ಭ ಬರುತ್ತದೆ. ಆನಂತರ ನೀವು ಇದಕ್ಕೂ ಕೂಡ ವಿಭಾಗದ ಪತ್ರ ರಿಜಿಸ್ಟರ್ ಮಾಡಿಸಬೇಕು. ಹಾಗಾದರೆ ಜಮೀನನ್ನು ಭಾಗ ಮಾಡಿಕೊಳ್ಳಲು ಬೇಕಾಗುವ ಎಲ್ಲಾ ದಾಖಲೆಗಳು ಏನೇನು ಮತ್ತು  ಅದರ ಪ್ರೊಸೀಜರ್ ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

ಪೌತಿ ಖಾತೆ ಮಾಡಿಸುವುದು ಹೇಗೆ.

ಮೊದಲನೆಯದಾಗಿ ಪೌತಿ ಖಾತೆ ಬದಲಾವಣೆ ಮಾಡಬೇಕು. ಸತ್ತಿರುವ ವ್ಯಕ್ತಿಯ ಹೆಸರಲ್ಲಿರುವ ಆಸ್ತಿಯನ್ನು ವಂಶಾವಳಿ ಪ್ರಕಾರ ಅಂದರೆ ನೇರವಾಗಿ ವಾರಸುದಾರನ ಹೆಸರಿಗೆ ಜಂಟಿ ಖಾತೆಯಾಗಿ ಬದಲಾವಣೆ ಮಾಡಿಕೊಳ್ಳಬೇಕು. ಪೌತಿ ಖಾತೆ ಮಾಡಬೇಕು ಎಂದರೆ ವಂಶಾವಳಿ ಬೇಕು, ಡೆತ್ ಸರ್ಟಿಫಿಕೇಟ್ ಬೇಕು, ಆಧಾರ್ ಕಾರ್ಡ್ ಬೇಕು, ಇವೆಲ್ಲವನ್ನೂ ನೀವು ದಾಖಲಿಸಿ, ಒಂದು ಅರ್ಜಿಯನ್ನು ಬರೆದು ತಹಶೀಲ್ದಾರರಿಗೆ ಕೊಟ್ಟರೆ ಒಂದು ತಿಂಗಳ ಒಳಗಡೆ ಆಸ್ತಿ ನೇರವಾಗಿ ಮನೆಯ ವಾರಸುದಾರನಿಗೆ ಬರುತ್ತದೆ.

ವಿಭಾಗ ಪಾತ್ರ ಮಾಡಿಸುವುದು ಹೇಗೆ.

ನಂತರ ನೀವು ಇಲ್ಲಿ ವಿಭಾಗ ಪತ್ರವನ್ನು ಕೂಡ ಮಾಡಿಸಬೇಕಾಗುತ್ತದೆ ಆದರೆ ಇಲ್ಲಿ ಹೇಳಿರುವ ಕೆಲವು ದಾಖಲೆಗಳು ಕೊಡಬೇಕು. ನೀವು ಆ ಒಂದು ಜಮೀನಿಗೆ ನಕ್ಷೆಯನ್ನು ಹಾಕಿಸಬೇಕು. ಏಕೆಂದರೆ ವಿಭಾಗ ಆಗುತ್ತಿರುವ ಕಾರಣ ನೀವು ಈ ನಕ್ಷೆಯನ್ನು ಮುಂಚಿತವಾಗಿ ತಯಾರು ಮಾಡಿಕೊಂಡಿರಬೇಕಾಗುತ್ತದೆ. ಈ ಒಂದು ನಕ್ಷೆ  ಮಾಡಬೇಕಾದರೆ ಕುಟುಂಬದ ಎಲ್ಲಾ ಸದಸ್ಯರು ಸೇರಿ ಯಾರಿಗೆ ಹೆಚ್ಚು ಕೊಡಬೇಕು, ಯಾರಿಗೆ ಕಡಿಮೆ ಕೊಡಬೇಕು ಹಣಕಾಸಿನ ವಿಷಯದಲ್ಲಿ ಯಾರಿಗೆ ಏನು ಮಾಡಬೇಕು ಎಲ್ಲಿ ಯಾರಿಗೆ ಎಂದು ಎಲ್ಲವನ್ನು ಕುರಿತು ವಿಶೇಷವಾಗಿ ಕುಟುಂಬದ ಸದಸ್ಯರು ಮಾತನಾಡಿಕೊಂಡಿರಬೇಕಾಗುತ್ತದೆ.

ನಂತರ ನೀವು ಈ ನಕ್ಷೆ ಗೋಸ್ಕರ ಒಂದು ಅರ್ಜಿಯನ್ನು ಕೂಡ ಹಾಕಬೇಕಾಗುತ್ತದೆ. ನಂತರ ಸರ್ವೆಯವರು ನಿಮ್ಮ ಜಮೀನನ್ನು ಅಳತೆ ಮಾಡಿ ಯಾರ್ಯಾರ ಭಾಗಕ್ಕೆ ಎಷ್ಟೆಷ್ಟು ಬರಬೇಕು ಎಂದು ಭಾಗ ಮಾಡಿ ಕೊಟ್ಟು, ಪ್ರತಿಯೊಂದು ಲೆಕ್ಕ  ಹಾಕಿಕೊಡುತ್ತಾರೆ ಎರಡನೆಯ ದಾಗಿ ವಂಶ ವಳಿ ಹಾಕುವುದಕ್ಕೆ ಆಧಾರ್ ಕಾರ್ಡ್ ಅಥವಾ  ನಿಮ್ಮ ಬ್ಯಾಂಕ್ ಪುಸ್ತಕ ಬೇಕಾಗುತ್ತದೆ. ನಂತರದಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಸಮಯದಲ್ಲಿ ಒಪ್ಪಂದದ ಪತ್ರ ಬೇಕಾಗುತ್ತದೆ.

ಇಷ್ಟೆಲ್ಲ ಮಾಡಿದ ನಂತರ ಒಂದಿಬ್ಬರು ಸದಸ್ಯರನ್ನು ಕರೆದುಕೊಂಡು ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ನೀವು ನೋಂದಣಿ ಮಾಡಿಸಬೇಕಾಗುತ್ತದೆ. ಇಷ್ಟೆಲ್ಲಾ ಆದಮೇಲೆ ಅವರವರ ಹೆಸರಿಗೆ ಆಗಿರುವ ಎಲ್ಲಾ ಆಸ್ತಿ ಪತ್ರಗಳು ಭಾಗಗಳು ಹೊಸದಾಗಿ ಬರುತ್ತವೆ. ಈ ರೀತಿಯಾಗಿ ನೀವು ನಿಮ್ಮ ಮನೆಯ ಹಿರಿಯ ವ್ಯಕ್ತಿ ಅಥವಾ ಸತ್ತಿರುವ ವ್ಯಕ್ತಿಯಿಂದ ಮನೆಯಲ್ಲಿರುವ ಎಲ್ಲಾ ವ್ಯಕ್ತಿಗಳ ಭಾಗಕ್ಕೆ ಆಸ್ತಿಯನ್ನು ಪಾಲು ಮಾಡಿಕೊಳ್ಳಬಹುದಾಗಿದೆ….

ಇದನ್ನು ಓದಿ –

ತನ್ನ ನೂರಾರು ಕೋಟಿಯ ಆಸ್ತಿಯನ್ನು ಈ ನಟ ದಾನ ಮಾಡಿದ್ದು ಯಾರಿಗೆ ಗೊತ್ತಾ? ನಿಜಕ್ಕೂ ಗ್ರೇಟ್ ಕಂಟ್ರಿ!

Old Aged Pension: 60 ವರ್ಷ ಮೇಲ್ಪಟ್ಟವರಿಗೆ ಸಿದ್ದರಾಮಯ್ಯ ರವರಿಂದ ಬಂಪರ್ ಕೊಡುಗೆ, ಇಂದೇ  ರೆಡಿ ಮಾಡ್ಕೊಳಿ ಈ ದಾಖಲಾತಿಗಳನ್ನ.

Check Bounce: ಗಂಡ ಚೆಕ್ ಬೌನ್ಸ್ ಮಾಡಿದರೆ ಹೆಂಡತಿ ಮೇಲೆ ಪರಿಣಾಮ ಬೀರುತ್ತಾ, ಇದರ ಬಗ್ಗೆ ಕೋರ್ಟ್ ಏನ್ ಹೇಳುತ್ತೆ ಗೊತ್ತಾ.

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

ನಿಮ್ಮ ಮನೆಯ ಹಕ್ಕು ಪತ್ರ ಇಲ್ಲವೇ, ಕಳೆದು ಹೋಗಿದೆಯೇ, ಆಗಿದ್ದರೆ ಚಿಂತೆ ಬಿಡಿ, ಈ ಸ್ಥಳಕ್ಕೆ ಹೋಗಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಥಟ್ ಮನೆ ಪತ್ರ ಬರುತ್ತೆ. 

Leave a comment