Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Atal Pension Yojana: ಹೆಚ್ಚೇನೂ ಬೇಡ ಕೇವಲ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ 200 ರೂ, ಹೂಡಿಕೆ ಮಾಡಿದರೆ ಸಾಕು, ಪಡೆಯಬಹುದು ಪ್ರತಿ ತಿಂಗಳು 5000 ಪೆನ್ಶನ್.

ಅಸಂಘಟಿತ ವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಡತನದಲ್ಲಿ ಇರುತ್ತಾರೆ. ಅವರ ಮುಂದಿನ ಭವಿಷ್ಯ ಚೆನ್ನಾಗಿರಲಿ, ನಿವೃತ್ತಿ ನಂತರ ಇವರು ಜೀವನ ನಡೆಸಲು

Atal Pension Yojana: ಎಲ್ಲರೂ ಕೂಡ ನಿವೃತ್ತಿ ನಂತರದ ಜೀವನ ನೆಮ್ಮದಿಯಿಂದ ಇರಬೇಕು, ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂದು ಬಯಸುತ್ತಾರೆ. ಇದಕ್ಕಾಗಿ ನಾವು ಈಗಿನಿಂದಲೇ ಹೂಡಿಕೆ ಮಾಡುವುದು ಒಳ್ಳೆಯದು. ಕೇಂದ್ರ ಸರ್ಕಾರವು ಹಲವು ಪೆನ್ಶನ್ ಸ್ಕೀಮ್ ಗಳನ್ನು ಜಾರಿಗೆ ತಂದಿದ್ದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಅಟಲ್ ಪೆನ್ಶನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು ₹5000 ಪೆನ್ಶನ್ ಪಡೆಯಬಹುದು..

ಅಟಲ್ ಪೆನ್ಶನ್ ಯೋಜನೆ (APY):

ಇದು ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ನೀವು ಚಿಕ್ಕವರಾಗಿದ್ದಾಗಲೇ ಪ್ರತಿ ತಿಂಗಳು ₹200 ರೂಪಾಯಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಿ, ನಿವೃತ್ತಿ ನಂತರ ಪ್ರತಿ ತಿಂಗಳು ₹5000 ಪೆನ್ಶನ್ ಪಡೆಯಬಹುದು. ವಾರ್ಷಿಕವಾಗಿ ₹60,000 ಪೆನ್ಶನ್ ಸಿಗುತ್ತದೆ. ಈ ಯೋಜನೆಯನ್ನು 2015-16ನೇ ಸಾಲಿನಲ್ಲಿ ಸರ್ಕಾರ ಜಾರಿಗೆ ತಂದಿತು. ಈ ಒಂದು ಪೆನ್ಷನ್ ಯೋಜನೆಯನ್ನು ಅಸಂಘಟಿತ ವರ್ಗದಲ್ಲಿ ಕೆಲಸ ಮಾಡುವವರಿಗಾಗಿ ಜಾರಿಗೆ ತರಲಾಗಿದೆ.

ಅಸಂಘಟಿತ ವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಡತನದಲ್ಲಿ ಇರುತ್ತಾರೆ. ಅವರ ಮುಂದಿನ ಭವಿಷ್ಯ ಚೆನ್ನಾಗಿರಲಿ, ನಿವೃತ್ತಿ ನಂತರ ಇವರು ಜೀವನ ನಡೆಸಲು ಯಾರ ಮೇಲೂ ಅವಲಂಬಿಸಿರದೇ ಉತ್ತಮ ಜೀವನ ಸಾಗಿಸಲಿ ಎನ್ನುವ ಸಲುವಾಗಿ ಪ್ರತಿ ತಿಂಗಳು ₹5000 ಬರುವಂಥ ಯೋಜನೆ ಇದಾಗಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಅಡಿಯಲ್ಲಿ ಜಾರಿಗೆ ತರಲಾಗಿದೆ.

ಎಷ್ಟು ಹೂಡಿಕೆ ಮಾಡಬೇಕು?

ಅಟಲ್ ಪೆನ್ಶನ್ ಯೋಜನೆಯಲ್ಲಿ 18ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ, ತಿಂಗಳಿಗೆ ₹210 ರೂಪಾಯಿ ಹೂಡಿಕೆ ಮಾಡಬಹುದು. ಮೂರು ತಿಂಗಳ ಹೂಡಿಕೆ ಆಯ್ಕೆಯಾದರೆ ₹626 ರೂಪಾಯಿ ಹೂಡಿಕೆ ಮಾಡಬೇಕು, 6 ತಿಂಗಳ ಅವಧಿಗೆ ಹೂಡಿಕೆ ಮಾಡುವುದಾದರೆ ₹1239 ರೂಪಾಯಿ ಹೂಡಿಕೆ ಮಾಡಬೇಕು. ಇಷ್ಟು ಮೊತ್ತವನ್ನು 60 ವರ್ಷದವರೆಗೂ ಹೂಡಿಕೆ ಮಾಡುತ್ತಾ ಬಂದರೆ, ತಿಂಗಳಿಗೆ ₹5000 ರೂಪಾಯಿಗಳನ್ನು ಪೆನ್ಶನ್ ರೂಪದಲ್ಲಿ ಪಡೆಯಬಹುದು.

ತಿಂಗಳಿಗೆ ₹1000 ಪೆನ್ಶನ್ ಬರಬೇಕು ಎಂದರೆ, 18ನೇ ವಯಸ್ಸಿನಲ್ಲಿ ತಿಂಗಳಿಗೆ ₹42 ರೂಪಾಯಿ ಹೂಡಿಕೆ ಶುರು ಮಾಡಿದರೆ ಸಾಕು. ಇದು ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಒಳ್ಳೆಯ ರಿಟರ್ನ್ಸ್ ಪಡೆಯಬಹುದಾದ ಯೋಜನೆ ಆಗಿದ್ದು, ನೀವು ಎಷ್ಟು ಹೂಡಿಕೆ ಮಾಡುತ್ತೀರೋ ಅಷ್ಟು ಮೊತ್ತದ ಮೇಲೆ ತಿಂಗಳ ಪೆನ್ಷನ್ ನಿಗದಿಯಾಗುತ್ತದೆ. ಈ ಯೋಜನೆಯಲ್ಲಿ ನಿವೃತ್ತಿ ಬಳಿಕ ಪ್ರತಿ ತಿಂಗಳು ₹1000, ₹2000, ₹3000, ₹4000 ಮತ್ತು ₹5000 ಪೆನ್ಶನ್ ಪಡೆಯುವಂಥ ಹೂಡಿಕೆಯ ಆಯ್ಕೆಗಳಿವೆ.

Atal Pension Scheme investment and benefits, explained

Leave a comment