Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Grama Panchayiti Recruitment : ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಸೂಪರ್ವೈಸರ್ ಹುದ್ದೆಗಳ ನೇಮಕಾತಿ! ಆಸಕ್ತರು ಅರ್ಜಿ ಸಲ್ಲಿಸಿ

Grama Panchayiti Recruitment : ಸರ್ಕಾರಿ ಹುದ್ದೆಗಳು ಸ್ಥಳೀಯವಾಗಿ ಸಿಕ್ಕಿದರೆ ಅನುಕೂಲಗಳು ಜಾಸ್ತಿ. ಮನೆಯಿಂದ ದೂರದಲ್ಲಿ ಇದ್ದು ಏಷ್ಟು ಸಂಪಾದನೆ ಮಾಡಿದರು ಸಹ ಮನೆಯ ಕಡೆಗೆ ಮನಸ್ಸು ಸೆಳೆಯುವುದು ಸಾಮಾನ್ಯ. ಈಗ ಸ್ಥಳೀಯವಾಗಿ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಾ ಇರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ.

Grama Panchayiti Recruitment : ಸರ್ಕಾರಿ ಹುದ್ದೆಗಳು ಸ್ಥಳೀಯವಾಗಿ ಸಿಕ್ಕಿದರೆ ಅನುಕೂಲಗಳು ಜಾಸ್ತಿ. ಮನೆಯಿಂದ ದೂರದಲ್ಲಿ ಇದ್ದು ಏಷ್ಟು ಸಂಪಾದನೆ ಮಾಡಿದರು ಸಹ ಮನೆಯ ಕಡೆಗೆ ಮನಸ್ಸು ಸೆಳೆಯುವುದು ಸಾಮಾನ್ಯ. ಈಗ ಸ್ಥಳೀಯವಾಗಿ ಸರ್ಕಾರಿ ಹುದ್ದೆಗಳನ್ನು ಹುಡುಕುತ್ತಾ ಇರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ.

Grama Panchayiti Recruitment

ಯಾವ ಜಿಲ್ಲೆಯಲ್ಲಿ ಹುದ್ದೆ ಖಾಲಿ ಇದೆ ?

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ಗಳಲ್ಲಿ ಹುದ್ದೆಗಳು ಖಾಲಿ ಇದೆ. ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. . ಜಿಲ್ಲೆಯಲ್ಲಿ ಒಟ್ಟು 14 ಲೈಬ್ರರಿ ಸೂಪರ್ವೈಸರ್ ಹುದ್ದೆಗಳಿಗೆ ಈಗ ಅರ್ಜಿ ಆಹ್ವಾನ ಮಾಡಲಾಗಿದೆ.

ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ :-

ಅರ್ಜಿ ಆಹ್ವಾನ ಮಾಡಿದ ಸಂಸ್ಥೆಯ ಹೆಸರು : ಶಿವಮೊಗ್ಗ ಗ್ರಾಮ ಪಂಚಾಯತಿ
ಹುದ್ದೆಯ ಹೆಸರು : ಲೈಬ್ರರಿ ಸೂಪರ್ವೈಸರ್(Library Supervisor)
ಭರ್ತಿ ಮಾಡುತ್ತಿರುವ ಹುದ್ದೆಗಳ ಸಂಖ್ಯೆ: 14
ಉದ್ಯೋಗ ಮಾಡಬೇಕಾದ ಸ್ಥಳ – ಶಿವಮೊಗ್ಗ

ಎಜುಕೇಷನ್ ಕ್ವಾಲಿಫಿಕೇಷನ್:-

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪಿಯುಸಿ ಪೂರ್ಣಗೊಳಿಸಿರಬೇಕು. ಮತ್ತು ಲೈಬ್ರರಿ ಸೈನ್ಸ್ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಮಾಡಿರಬೇಕು.ಕನ್ನಡ ಭಾಷೆಯಲ್ಲಿ ಓದಲು ಮತ್ತು ಬರೆಯಲು ಬರಬೇಕು.

Also Read: SBI Savings Scheme : ಕಡಿಮೆ ಸಮಯದಲ್ಲಿ ಡಬಲ್ ರಿಟರ್ನ್ಸ್ ಕೊಡುವ ಯೋಜನೆ ತಂದಿದೆ SBI! ಹಿರಿಯರಿಗೆ ಬೆಸ್ಟ್ ಸ್ಕೀಮ್!

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ :-

ಫೆಬ್ರವರಿ 23, 2024ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಹಾಗೂ ಗರಿಷ್ಠ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇಲಾಖೆಯ ನಿಯಮದ ಪ್ರಕಾರ ಈ ಹುದ್ದೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ :-

ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

ಮಾಸಿಕ ವೇತನ:

15,196.72 ರೂಪಾಯಿ

ಅಗತ್ಯ ದಾಖಲೆಗಳು:

*ಶೈಕ್ಷಣಿಕ ಅರ್ಹತೆಗಳ ದಾಖಲೆಗಳು
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ
*ವಯಸ್ಸಿನ ಪುರಾವೆ
*ವಿಳಾಸ ಪುರಾವೆ
*ಫೋಟೋ (2)

ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.05/02/2024 ರಿಂದ 23/04/2024 ರ ವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಅರ್ಜಿಗಳನ್ನು ಪರಿಶೀಲಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಮತ್ತು
ಆಯ್ಕೆಯಾದವರಿಗೆ ಗ್ರಾಮ ಪಂಚಾಯತಿಯಿಂದ ನೇಮಕಾತಿ ಪತ್ರವನ್ನು ಪಂಚಾಯಿತಿ ವತಿಯಿಂದ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ನಮೂನೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಿಗುತ್ತದೆ. ಅರ್ಜಿಯನ್ನು
ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿ ಕಚೇರಿಗೆ ನೀಡಬೇಕು.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Also Read: Government News : ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ ಸರ್ಕಾರ! ಈ ರೀತಿ ಮಾಡಿ ಪ್ರಯೋಜನ ಪಡೆಯಿರಿ!

Leave a comment