Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಟೊಮೊಟೊ ಸಕ್ಕತ್ ದುಬಾರಿ! ಅದರ ಬದಲು 5  ಪದಾರ್ಥಗಳನ್ನು ಬಳಸಿ ಟೊಮೇಟೊ ಇಲ್ಲದೆ ಸಕ್ಕತ್ ಅಡುಗೆ ಮಾಡಬಹುದು.

Tomato alternative vegetables: ಇತ್ತೀಚಿನ ದಿನಗಳಲ್ಲಿ  ಟಮೋಟೊದ ಬೆಲೆ ಗಗನಕ್ಕೆ ಏರಿದೆ. ಈ ವಿಷಯದಿಂದ ಎಷ್ಟೋ ಮನೆಗಳಲ್ಲಿ ಹೆಂಗಸರು ತುಂಬಾ ಬೇಸರಗೊಂಡಿದ್ದಾರೆ. ನಮ್ಮ ದಕ್ಷಿಣ ಭಾರತದಲ್ಲಿ ಅಂತೂ ಟೊಮೇಟೊ ಇಲ್ಲದೆ ಯಾವ ಸಾಂಬಾರನ್ನು ಸಹ ಮಾಡುತ್ತಿರಲಿಲ್ಲ. ಆದರೆ ಈಗಿರುವ ಸ್ಥಿತಿಯಲ್ಲಿ ನಾವು ಟೊಮೊಟೊವನ್ನು ಬಳಸದೆ ಇರುವುದೇ ಒಳ್ಳೆಯದು. ಇಲ್ಲದಿದ್ದರೆ ನಮ್ಮ ಜೇಬಿಗೆ ಕತ್ತರಿ ಬಿದ್ದ ಹಾಗೆ. ಆದರೆ ನೀವು ಬೇಸರ ಪಡುವ ವಿಷಯವಿಲ್ಲ, ಏಕೆಂದರೆ ಟೊಮೆಟೊಗೆ ಬದಲಾಗಿ ಈ ಐದು ಪದಾರ್ಥಗಳನ್ನು ಬಳಸಬಹುದು. ಹಾಗಾದರೆ ಅವು ಯಾವುವು ಎಂದು ನೋಡುವುದಾದರೆ

ಮೊದಲನೆಯದಾಗಿ ಹುಣಸೆಹಣ್ಣು ನಮ್ಮ ದಕ್ಷಿಣ ಭಾರತಕ್ಕೆ ಬಂದರೆ ಹಲವು ಅಡಿಗೆಗಳಿಗೆ ಟೊಮಾಟೋ ಗೆ ಬದಲಾಗಿ ಹುಣಸೆಹಣ್ಣನ್ನೇ ಬಳಸುತ್ತಾರೆ. ಅದರಲ್ಲೂ ಸಹ ರಸಂ ಅಂತೂ ಹುಣಸೆಹಣ್ಣಿನಲ್ಲಿ ಮಾಡಿದರೆ ಹಬ್ಬ ಅದರ ರುಚಿಯ ಬೇರೆ ಆಗಿರುತ್ತದೆ. ಅಷ್ಟೇ ಅಲ್ಲದೆ ಟೊಮೇಟೊ ಹಣ್ಣುಗಳಿಗೆ ಹೋಲಿಸಿಕೊಂಡರೆ ಹುಣಸೆಹಣ್ಣಿನಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳನ್ನು ನಾವು ಕಾಣಬಹುದಾಗಿದೆ.

ಎರಡನೆಯದಾಗಿ ನಿಂಬೆಹಣ್ಣು ನಿಂಬೆಹಣ್ಣು ಮತ್ತು ಟೊಮೆಟೊ ಒಂದು ರೀತಿಯ ಅಣ್ಣ ತಮ್ಮ ಇದ್ದ ಹಾಗೆ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದೇ ಇದೆ. ಹಾಗಾಗಿ ಎಷ್ಟೋ ಜನ ನಿಂಬೆಹಣ್ಣು ಬಳಸಿದರೆ ಅತಿ ಹೆಚ್ಚಿನ ಹಣವನ್ನು ಉಳಿಸಬಹುದು. ಅಷ್ಟೇ ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅತಿ ಹೆಚ್ಚಾಗಿರುವುದರಿಂದ ದೇಹಕ್ಕೆ ಕೂಡ ತಂಪನ್ನು ನೀಡುತ್ತದೆ.

ಮೂರನೆಯದಾಗಿ ಮೊಸರು ಉತ್ತರ ಭಾರತದಲ್ಲಿ ಟೊಮೇಟೊ ಗಿಂತ ಅತಿಹೆಚ್ಚಿನದಾಗಿ ಮೊಸರನ್ನು ಬಳಸುತ್ತಾರೆ. ಅದರಲ್ಲೂ ಸಹ ವೆಜಿಟೇಬಲ್ ಮಿಕ್ಸ್ ಮತ್ತು ಪನ್ನೀರ್ ಮಸಾಲಗಳಿಗೆ ಮೊಸರನ್ನು ಬಳಸುವ ವಾಡಿಕೆ ಇದೆ. ಅಷ್ಟೇ ಅಲ್ಲದೆ ಟೊಮೇಟೊ ಬದಲು ಮೊಸರನ್ನು ಬಳಸಿದರೆ ರೆಸ್ಟೋರೆಂಟ್ ರೀತಿಯಲ್ಲಿ ಟೆಸ್ಟನ್ನು ಸಹ ಪಡೆದುಕೊಳ್ಳಬಹುದು.

ನಾಲ್ಕನೆಯದಾಗಿ ಹಸಿಮಾವು ಹೀಗೆ ಅಂತು ಹೇಗಿದ್ದರೂ ಸಹ ಮಾವಿನ ಕಾಯಿಯ ಸೀಸನ್ ಹಾಗಿದೆ. ಚಿತ್ರಾನ್ನ ಮತ್ತು ಕೆಲವೊಂದು ಪದಾರ್ಥಗಳಿಗೆ ಟೊಮೆಟೊ ಬದಲಾಗಿ ಹಸಿ ಮಾವನ್ನು ಬಳಸಿದರೆ ಉತ್ತಮವಾಗಿರುತ್ತದೆ.

ಐದನೆಯದಾಗಿ ಬೆಟ್ಟದ ನೆಲ್ಲಿಕಾಯಿ ಹೇಗಿದ್ದರೂ ಈಗ ಬೆಟ್ಟದ ನೆಲ್ಲಿಕಾಯಿ ಸೀಸನ್ ಆಗಿದ್ದರಿಂದ ಕೆಲವು ಚಿತ್ರನ್ನಗಳಿಗೆ ಆಗಿರಬಹುದು ಮತ್ತಷ್ಟು ಪದಾರ್ಥಗಳಿಗೆ ಆಗಿರಬಹುದು ಟೊಮೆಟೊ ಹಣ್ಣಿನ ಬದಲಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಬಳಸುವುದರಿಂದ ಹುಳಿಯನ್ನು ನಾವು ಹಾಗೆ ಸವಿಯಬಹುದು.

Leave a comment