Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sarala Vivaha Scheme: ಸರಳ ವಿವಾಹ ಯೋಜನೆ ಅಡಿಯಲ್ಲಿ ಮದುವೆ ಆಗುವ ಗಂಡು ಹೆಣ್ಣಿಗೆ ಸಿಗಲಿದೆ 50,000 ರೂಪಾಯಿ, ಅವಶ್ಯಕತೆ ಇರುವವರು ಅರ್ಜಿ ಸಲ್ಲಿಸಿ.

ಸರಳ ವಿವಾಹ ಯೋಜನೆಯಲ್ಲಿ (Sarala Vivaha yojane) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜೋಡಿಗಳು ಸಾಮೂಹಿಕ ವಿವಾಹ ಮಾಡಿಕೊಂಡವರಿಗೆ ₹50,000 ಸಹಾಯಧನ ನೀಡಲಾಗಿದೆ ರಾಜ್ಯ ಸರ್ಕಾರ.

Sarala Vivaha Scheme: ಹಿಂದೂ ಸಂಪ್ರದಾಯದಲ್ಲಿ ವಿವಾಹವು ಒಂದು ಪವಿತ್ರ ಮತ್ತು ಶಾಶ್ವತವಾದ ಬಂಧವಾಗಿದೆ. ಗುರು ಹಿರಿಯರ ಆಶೀರ್ವಾದದೊಂದಿಗೆ ನಡೆಯುವ ವಿವಾಹವು ಬಹಳ ಸಂತಸದಿಂದ ಕೂಡಿರುತ್ತದೆ ಮದುವೆಯನ್ನು ಒಂದು ಶಾಶ್ವತವಾಗಿ ನೆನಪಿರುವ ಮತ್ತು ಸಂತಸದ ಸಮರ್ಭವಾಗಿದೆ. ಆರ್ಥಿಕ ಸಮಸ್ಯೆಗಳಿಂದಾಗಿ, ಕೆಲವರು ತಮ್ಮ ಮದುವೆಯ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಧಾರ್ಮಿಕ ಸಂಘ ಸಂಸ್ಥೆಗಳು, ಟ್ರಸ್ಟಿಗಳು, ಧಾರ್ಮಿಕ ಕ್ಷೇತ್ರಗಳು ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತೆ ಸಾಮೂಹಿಕ ಮದುವೆಯನ್ನು ಏರ್ಪಡಿಸುತ್ತಾರೆ.

ಮದುವೆಯ ಬಟ್ಟೆ ತಾಳಿ ಎಲ್ಲವನ್ನೂ ಸಹ ನೀಡುತ್ತಾರೆ. ಇದರ ಜೊತೆಗೆ ಈಗ ಹಿಂದುಳಿದ ಸಮಾಜದ ಬಗ್ಗೆ ಹೆಚ್ಚಿನ ಕನಿಕರ ತೋರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಲಿತ ಸಂಘಟನೆಗಳ ಮುಖಂಡರ ಜೊತೆಗೆ 2024-2025 ನೇ ಸಾಲಿನ ಸರಳ ವಿವಾಹ ಯೋಜನೆಯನ್ನು ಮತ್ತೆ ಜಾರಿಗೆ ತರುವ ಬಗ್ಗೆ ಯೋಚಿಸಿದ್ದಾರೆ .

ಸರಳ ವಿವಾಹ ಯೋಜನೆಯಲ್ಲಿ (Sarala Vivaha yojane) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜೋಡಿಗಳು ಸಾಮೂಹಿಕ ವಿವಾಹ ಮಾಡಿಕೊಂಡವರಿಗೆ ₹50,000 ಸಹಾಯಧನ ನೀಡಲಾಗಿದೆ ರಾಜ್ಯ ಸರ್ಕಾರ. ಈ ಯೋಜನೆಯನ್ನು 2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಹಣವನ್ನು ವಧು ಮತ್ತು ವರರ ಜಂಟಿ ಖಾತೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ಪಟ್ಟಿ (Sarala Vivaha Scheme) :-

1)ದಂಪತಿಗಳು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು.

2)ವಿವಾಹವು ಸಾಮೂಹಿಕ ವಿವಾಹದ ಭಾಗವಾಗಿರಬೇಕು.

3)ಸಾಮೂಹಿಕ ವಿವಾಹದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಬೇಕು.

4)ವಧುವಿಗೆ ಕನಿಷ್ಠ 18 ವರ್ಷ ಮತ್ತು ವರನಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಬಾಲ್ಯ ವಿವಾಹ ನಿಷೇಧಿಸಲಾಗಿದೆ.

5)ದಂಪತಿಗಳ ಒಟ್ಟು ವಾರ್ಷಿಕ ಆದಾಯ ₹2 ಲಕ್ಷಗಳನ್ನು ಮೀರಬಾರದು.

6)ಈ ಸೌಲಭ್ಯ ಜೀವನದಲ್ಲಿ ಒಮ್ಮೆ ಮಾತ್ರ ಲಭ್ಯವಿದೆ. ಎರಡನೇ ಅಥವಾ ಮರುಮದುವೆಗೆ ಈ ಯೋಜನೆ ಅನ್ವಯಿಸುವುದಿಲ್ಲ.

7) ಬೇರೆ ಜಾತಿಯ ವಧು-ವರರು ವಿವಾಹವಾದಲ್ಲಿ, ಅಂತರ್ ಜಾತಿ ವಿವಾಹ ಪ್ರೋತ್ಸಾಹ ಧನಕ್ಕೆ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅದಕ್ಕೆ ನೀವು ಅರ್ಜಿ ಸಲ್ಲಿಸಲು ವಿವಾಹ ನೋಂದಣಿ ಇಲಾಖೆ ಸಂಪರ್ಕಿಸಿ.

ಅರ್ಜಿ ಸಲ್ಲಿಸುವ ಕ್ರಮ ಹೇಗೆ ?

ಜಿಲ್ಲಾ ನೋಂದಣಿ ಕಛೇರಿಯಲ್ಲಿ ಈಗಾಗಲೇ ನೋಂದಾಯಿತವಾಗಿರುವ ಖಾಸಗಿ ಟ್ರಸ್ಟ್‌ಗಳು, ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿದ ದಂಪತಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ವಿವಾಹ ಆಯೋಜಕರು ಇಲಾಖೆಗೆ ವಿವಾಹ ನೋಂದಣಿ ಪತ್ರವನ್ನು (Marriage registration certificate) ಸಲ್ಲಿಸಿರಬೇಕು.. ವಿವಾಹದ ನಂತರ, ದಂಪತಿಗಳು ತಮ್ಮ ನಿಖರವಾದ ವಿಳಾಸದ ಮಾಹಿತಿಯನ್ನು ಒದಗಿಸಬೇಕು.ವಿವಾಹ ಆಯೋಜಕರು ಸಾಮೂಹಿಕ ವಿವಾಹದ ಫೋಟೋವನ್ನು ಪಡೆದು ಅರ್ಜಿಯ ಜೊತೆಗೆ ಲಗತ್ತಿಸಬೇಕು.

Also Read: Rajkumar Marriage Invitation: ದೊಡ್ಮನೆ ಮೊದಲ ಮದುವೆ ಲಗ್ನಪತ್ರಿಕೆ ಹೇಗಿದೆ ನೋಡಿ!! ರಾಜಕುಮಾರ್ ಮತ್ತು ಪಾರ್ವತಮ್ಮನವರ ಮದುವೆಯ ಮಧುರ ಕ್ಷಣಗಳು!!

 

Leave a comment