Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

FASTag KYC ಮಾಡಿಸುವ ದಿನಾಂಕ ವಿಸ್ತರಣೆ! ಈ ರೀತಿ ಮೊಬೈಲ್ ನಲ್ಲಿಯೇ ಸುಲಭವಾಗಿ ಮಾಡಿಕೊಳ್ಳಿ 

2024ರ ಜನವರಿ 31 ಫಾಸ್ಟ್ಯಾಗ್ ekyc ಮಾಡಿಸಲು ಕೊನೆಯ ದಿನಾಂಕ ಆಗಿತ್ತು. ಆದರೆ ಈಗ ಈ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, 1 ತಿಂಗಳ ಸಮಯ ನೀಡಲಾಗಿದೆ.

FASTag KYC: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಪ್ಲಾಜಾಗಳಲ್ಲಿ ಕ್ಯೂ ಇದ್ದು ಟೋಲ್ ಪಾವತಿ ಮಾಡುವುದನ್ನು ತಡೆಯಲು ಫಾಸ್ಟ್ಯಾಗ್ ಜಾರಿಗೆ ತರಲಾಯಿತು. ಟೋಲ್ ಪಾವತಿ ಪ್ರಕ್ರಿಯೆಯನ್ನು ಇದು ಸುಲಭ ಮಾಡಿದ್ದರೂ, ಫಾಸ್ಟ್ಯಾಗ್ ವಿಚಾರದಲ್ಲಿ ಮೋಸ ನಡೆಯುತ್ತಿದೆ. ಒಂದು ವಾಹನಕ್ಕೆ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್ ಬಳಕೆ ಆಗುತ್ತಿದೆ. ಹಾಗಾಗಿ ಈ ಮೋಸ ತಡೆಯಲು ಸರ್ಕಾರವು ಕ್ರಮ ತೆಗೆದುಕೊಂಡಿದ್ದು ಫಾಸ್ಟ್ಯಾಗ್ ಬಳಕೆದಾರರು kyc ಮಾಡಿಸುವುದನ್ನು ಕಡ್ಡಾಯ ಮಾಡಿದೆ.

ಫಾಸ್ಟ್ಯಾಗ್ ಇಕೆವೈಸಿ ದಿನಾಂಕ ವಿಸ್ತರಣೆ:

2024ರ ಜನವರಿ 31 ಫಾಸ್ಟ್ಯಾಗ್ ekyc ಮಾಡಿಸಲು ಕೊನೆಯ ದಿನಾಂಕ ಆಗಿತ್ತು. ಆದರೆ ಈಗ ಈ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, 1 ತಿಂಗಳ ಸಮಯ ನೀಡಲಾಗಿದೆ. 2024ರ ಫೆಬ್ರವರಿ 28ರ ಒಳಗೆ FASTag KYC ಮಾಡಿಸಬೇಕು. ಈ ಪ್ರಕ್ರಿಯೆಯನ್ನು ನೀವು ಸುಲಭವಾಗಿ ನಿಮ್ಮ ಫೋನ್ ನಲ್ಲೇ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ..

FASTag ಎಂದರೇನು?

ಇದು ಕ್ಯಾಶ್ ಲೆಸ್ ಟೋಲ್ ಪಾವತಿಗಾಗಿ ಬಳಸುವ Radio Frequency Identification (RFID) ಸಾಧನ ಆಗಿದ್ದು, ಇದು ಒಂದು ಸಣ್ಣ ಸ್ಟಿಕರ್ ರೀತಿಯಲ್ಲಿರುತ್ತದೆ. ಇದನ್ನು ನಿಮ್ಮ ವಾಹನದ ವಿಂಡ್ ಶೀಲ್ಡ್ ಗೆ ಅಂಟಿಸಲಾಗಿರುತ್ತದೆ. ಟೋಲ್ ಪ್ಲಾಜ ಬಳಿ ನಿಲ್ಲಿಸದೆ, ಆನ್ಲೈನ್ ಮೂಲಕ ಈ ಸ್ಟಿಕರ್ ನಲ್ಲಿರುವ ಕೋಡ್ ಇಂದ ನಿಮ್ಮ ಖಾತೆಯಿಂದ ನೇರವಾಗಿ ಟೋಲ್ ಹಣವು ಕ್ಷಣಗಳಲ್ಲಿ ಡೆಬಿಟ್ ಆಗುತ್ತದೆ.

ಫಾಸ್ಟ್ಯಾಗ್ ಪ್ರಕ್ರಿಯೆ ಹೇಗೆ?

ಇದನ್ನು ನೀವು ಬ್ಯಾಂಕ್ ಅಥವಾ ಆನ್ಲೈನ್ ಮೂಲಕ ಖರೀದಿ ಪಡೆಯಬಹುದು. ಫಾಸ್ಟ್ಯಾಗ್ ಗೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಲಾಗುತ್ತದೆ. ಫಾಸ್ಟ್ಯಾಗ್ ಸ್ಟಿಕರ್ ಅನ್ನು ನಿಮ್ಮ ವಾಹನದ ವಿಂಡ್ ಶೀಲ್ಡ್ ಒಳಭಾಗಕ್ಕೆ ಅಂಟಿಸಲಾಗುತ್ತದೆ. ಟೋಲ್ ಪ್ಲಾಜಾಗಳಲ್ಲಿ ಸ್ಕ್ಯಾನರ್ ಮೂಲಕ ನಿಮ್ಮ ಫಾಸ್ಟ್ಯಾಗ್ ಸ್ಟಿಕ್ಟರ್ ಸ್ಕ್ಯಾನ್ ಮಾಡಿ, ಮಾಹಿತಿ ಪಡೆದು ನಿಮ್ಮ ಅಕೌಂಟ್ ಇಂದ ಟೋಲ್ ಹಣ ಆಟೊಮ್ಯಾಟಿಕ್ ಆಗಿ ಡೆಬಿಟ್ ಆಗುತ್ತದೆ.SMS ಮೂಲಕ ಹಣ ಡೆಬಿಟ್ ಆಗಿರುವ ಮೆಸೇಜ್ ಬರುತ್ತದೆ. ಈ ಪ್ರಕ್ರಿಯೆ ಇಂದ ಕಾಯುವ ಹಾಗಿಲ್ಲ.

ಫಾಸ್ಟ್ಯಾಗ್ ಇಂದ ಸಾಕಷ್ಟು ಪ್ರಯೋಜನವಿದೆ. ಆದರೆ ಹೆಚ್ಚಿನ ಜನರು ಇದರ ದುರ್ಬಳಕೆ ಮಾಡುತ್ತಿದ್ದಾರೆ ಎಂದರೆ ತಪ್ಪಲ್ಲ. ಒಂದೇ ವಾಹನಕ್ಕೆ ಹೆಚ್ಚು ಫಾಸ್ಟ್ಯಾಗ್ ಮಾಡಿಸುವುದು ಹೀಗೆ ಅಕ್ರಮಗಳು ನಡೆಯುತ್ತಿದ್ದು, ಇಂಥದ್ದನ್ನು ತಡೆಗಟ್ಟಲು ಸರ್ಕಾರ KYC ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಫಾಸ್ಟ್ಯಾಗ್ ಕೆವೈಸಿ ಮಾಡಿಸಲು ಈಗ ಫೆಬ್ರವರಿ 28ರವರೆಗು ಸಮಯ ಇದ್ದು, ಒಂದು ವೇಳೆ ನೀವಿನ್ನು ಫಾಸ್ಟ್ಯಾಗ್ ಕೆವೈಸಿ ಮಾಡಿಸಿಲ್ಲ ಎಂದರೆ, ನಿಮ್ಮ ಫೋನ್ ಇಂದಲೇ ಸುಲಭವಾಗಿ FASTag KYC ಮಾಡಿಕೊಳ್ಳಬಹುದು..

ಫೋನ್ ನಲ್ಲಿ FASTag KYC ಮಾಡುವ ವಿಧಾನ:

1. ಮೊದಲು https://fastag.ihmcl.com/ ಈ ವೆಬ್ಸೈಟ್ ಗೆ ಭೇಟಿ ನೀಡಿ. ರಿಜಿಸ್ಟರ್ ಆಗಿರುವ ಫೋನ್ ನಂಬರ್ ಹಾಕಿ, ಓಟಿಪಿ ನಮೂದಿಸಿ ಲಾಗಿನ್ ಮಾಡಿ.

2. ಲಾಗಿನ್ ಆದ ಬಳಿಕ, Dashboard ನಲ್ಲಿ My Profile ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಈಗ ಹೊಸ ಪೇಜ್ ಓಪನ್ ಆಗುತ್ತದೆ.

3. ಮೈ ಪ್ರೊಫೈಲ್ ನಲ್ಲಿ KYC ಆಯ್ಕೆಯನ್ನು ಹುಡುಕಿ ಸೆಲೆಕ್ಟ್ ಮಾಡಿ.
ಇಲ್ಲಿ ಗ್ರಾಹಕರ ಪ್ರಕಾರ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

4. ಇಲ್ಲಿ ನಿಮ್ಮ ಐಡಿ, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ನೀಡಿ ಪ್ರೊಸೆಸ್ ಮುಗಿಸಿ.

5. ಎಲ್ಲಾ ವಿವರಗಳನ್ನು ಸರಿಯಾಗಿ ಫಿಲ್ ಮಾಡಿದ ನಂತರ Submit ಆಪ್ಶನ್ ಕ್ಲಿಕ್ ಮಾಡುವ ಮೂಲಕ KYC ಪ್ರಕ್ರಿಯೆ ಪೂರ್ತಿಗೊಳಿಸಿ.

FASTag KYC Date Extension! Do this easily on mobile.

Leave a comment