PM Mitra Scheme: ಪಿಎಂ ಮಿತ್ರ ಯೋಜನೆಯ ಪೂರ್ಣ ವಿವರ ಹಾಗೂ ಯಾವ ರಾಜ್ಯಗಳಲ್ಲಿ ಯೋಜನೆ ಜಾರಿಯಲ್ಲಿದೆ ಎಂಬುದನ್ನು ತಿಳಿಯಿರಿ.
ಜವಳಿ ಉದ್ಯಮದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶ.
PM Mitra Scheme: ಪಿಎಂ ಮಿತ್ರ ಯೋಜನೆ, ಅಥವಾ “ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪ್ಯಾರೆಲ್” ಯೋಜನೆ ಇದು ಕೇಂದ್ರ ಸರ್ಕಾರದ ಯೋಜನೆ ಆಗಿದೆ. ಭಾರತದ ಜವಳಿ ಉದ್ಯಮವನ್ನು ಬಲಪಡಿಸಲು ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈಗಾಗಲೇ ದೇಶದ ಏಳು ರಾಜ್ಯಗಳಲ್ಲಿ ಏಳು ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗಾದರೆ ಈ ಯೋಜನೆಯ ಬಗ್ಗೆ ಪೂರ್ಣ ವಿವರ ಇಲ್ಲಿದೆ.
ಪಿಎಂ ಮಿತ್ರ ಯೋಜನೆಯನ್ನು ಆರಂಭಿಸಿದ ಉದ್ದೇಶಗಳು ಏನು? PM Mitra Scheme
1) ಜವಳಿ ಉದ್ಯಮದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶ.
2) ಉದ್ಯೋಗ ಸೃಷ್ಟಿ ಮಾಡುವಲ್ಲಿ ಇದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.
3) ಜವಳಿ ಉತ್ಪನ್ನಗಳ ರಫ್ತನ್ನು ಹೆಚ್ಚು ಮಾಡಿ ದೇಶದ ಉದ್ಯಮವನ್ನು ಬೇರೆ ಬೇರೆ ದೇಶಗಳಲ್ಲಿ ಮಾರಾಟ ಮಾಡುವಂತೆ ಮಾಡುವುದು.
4) ಜವಳಿ ಉದ್ಯಮದಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ಉತ್ತೇಜನ ನೀಡಿ ಇನ್ನಷ್ಟು ಹೊಸ ಬಗೆಯ ಉತ್ಪನ್ನಗಳನ್ನು ಬಿಡುಗಡೆ ಮಾಡುವಲ್ಲಿ ಸಹಕರಿಸುವುದು.
5) ಈ ಯೋಜನೆಯನ್ನು ಹೂಡಿಕೆ ಮಾಡುವ ಉದ್ಯಮಗಳಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡುವುದು.
ಯಾವ ಯಾವ ರಾಜ್ಯಗಳಲ್ಲಿ ಜವಳಿ ಪಾರ್ಕ್ ಗಳ ನಿರ್ಮಾಣ ಆಗಿದೆ. ?
ಭಾರತದಲ್ಲಿ ಏಳು ರಾಜ್ಯಗಳಲ್ಲಿ ಏಳು ಮೆಗಾ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳ ಸ್ಥಳಗಳು ಈ ಕೆಳಗಿನಂತಿವೆ:
1)ತಮಿಳುನಾಡು :- ತಿರುಪುರ
2) ತೆಲಂಗಾಣ: ಭುವನಗಿರಿ
3)ಗುಜರಾತ್: ಚಿತ್ರೋಡ
4)ಕರ್ನಾಟಕ: ಕಲಬುರ್ಗಿ
5)ಮಧ್ಯಪ್ರದೇಶ: ಖಾಂಡ್ವಾ
6)ಉತ್ತರಪ್ರದೇಶ: ಗೋರಖಪುರ
7)ಮಹಾರಾಷ್ಟ್ರ: ಅಮರಾವತಿ
ಈ ಪಾರ್ಕ್‌ಗಳ ನಿರ್ಮಾಣ ಕಾರ್ಯವು ಭಾರದಿಂದ ಸಾಗಿದೆ ಮತ್ತು 2024 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕದಲ್ಲಿ ನಿರ್ಮಾಣ ಆಗುತ್ತಿರುವ ಪಿಎಂ ಮಿತ್ರ ಪಾರ್ಕ್ ಬಗ್ಗೆ ಮಾಹಿತಿ:-
ಕರ್ನಾಟಕದಲ್ಲಿ, ಪಿಎಂ ಮಿತ್ರ ಪಾರ್ಕ್‌ನ್ನು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರಗಾಂವ ಗ್ರಾಮದಲ್ಲಿ ಸ್ಥಾಪಿಸಲಾಗಿದೆ. ಈ ಪಾರ್ಕ್ 2, 000 ಪಾರ್ಕ್ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದೆ ಮತ್ತು 10,000 ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆಯಿದೆ.
ಈ ಪಾರ್ಕ್‌ಗಳು ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಹೊಂದಿವೆ, ಉದಾಹರಣೆಗೆ: ರಸ್ತೆಗಳು, ವಿದ್ಯುತ್,ನೀರು,ತ್ಯಾಜ್ಯ ನಿರ್ವಹಣೆ,ಟೆಲಿಕಾಂ,ಕಾರ್ಖಾನೆಗಳಿಗೆ ಜಾಗ,ಸಾಮಾಜಿಕ ಮೂಲಸೌಕರ್ಯ (ಉದಾಹರಣೆಗೆ, ಶಾಲೆಗಳು, ಆಸ್ಪತ್ರೆಗಳು)
ಯೋಜನೆಯ ಪ್ರಯೋಜನಗಳು:
ಉದ್ಯೋಗ ಸೃಷ್ಟಿ: ಈ ಯೋಜನೆಯಿಂದ ಹಲವಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಆರ್ಥಿಕ ಅಭಿವೃದ್ಧಿ: ಈ ಯೋಜನೆಯು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
ಜವಳಿ ಉದ್ಯಮದ ಬೆಳವಣಿಗೆ: ಈ ಯೋಜನೆಯು ಭಾರತದ ಜವಳಿ ಉದ್ಯಮವನ್ನು ಉತ್ತೇಜಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಸಹಾಯ ಮಾಡುತ್ತದೆ.