Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Anna Suvidha Scheme: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ‘ಅನ್ನ ಸುವಿಧಾ’ ಯೋಜನೆ ಘೋಷಣೆ! ನಾಗರಿಕರ ಮನೆ ಬಾಗಿಲಿಗೆ ಬರಲಿದೆ ಪಡಿತರ ಅಕ್ಕಿ

Anna Suvidha Scheme: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಈಗಾಗಲೇ ಜಾರಿಯಲ್ಲಿ ಇದೆ. ಬಿಪಿಎಲ್ ಕುಟುಂಬದ ಸದಸ್ಯರಿಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು 5 ಕೆಜಿ ಹಣದ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಹಾಕುತ್ತಿದೆ. ಇದರ ಜೊತೆಗೆ ಈಗ
2024 ರ ರಾಜ್ಯ ಬಜೆಟ್‌ನಲ್ಲಿ, ರಾಜ್ಯ ಸರ್ಕಾರವು ‘ಅನ್ನ ಸುವಿಧಾ’ ಎಂಬ ಹೊಸ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆಯ ಉದ್ದೇಶ 80 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸುವ ಸಲುವಾಗಿ ಈ ಹೊಸ ಯೋಜನೆಯನ್ನು ಆರಂಭ ಮಾಡಿದೆ.

ಅನ್ನ ಸುವಿಧಾ ಯೋಜನೆಯು ಯಾರಿಗೆ ಸಿಗುತ್ತದೆ?

ಈ ಯೋಜನೆಡಿ, 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಅಂಗಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಲಾಗುತ್ತದೆ. ಈ ಯೋಜನೆಯು ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬರಲಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ₹100 ಕೋಟಿ ಮೀಸಲಿಟ್ಟಿದೆ.

ಅನ್ನ ಸುವಿಧ ಯೋಜನೆಯ ಮುಖ್ಯ ಲಾಭಗಳು ಏನು?

1) ಹಿರಿಯ ನಾಗರಿಕರಿಗೆ ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಪಡಿತರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗೆ ಬಂದು ತೆಗೆದುಕೊಂಡು ಹೋಗಲು ಕಷ್ಟ ಆಗುತ್ತದೆ ಆದ್ರಿಂದ ಅಂತಹ ವ್ಯಕ್ತಿಗಳಿಗೆ ಇದು ಬಹಳ ಅನುಕೂಲ ಆಗಲಿದೆ.
2)ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಜನರಿಗೆ ಪೌಷ್ಟಿಕ ಆಹಾರ ಲಭ್ಯತೆ ಹೆಚ್ಚಿನ ಅವಶ್ಯಕತೆ ಇರುತ್ತದೆ. ಮನೆ ಬಾಗಿಲಿಗೆ ಪಡಿತರ ವಿತರಿಸುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಬಹುದು.
3) ಯಾರು ಸಹಾಯಕರು ಇಲ್ಲದೆಯೇ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಯೋಜನೆಯ ಅನುಷ್ಠಾನ ಹೇಗೆ ?

ಈ ಯೋಜನೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನುಷ್ಠಾನಗೊಳಿಸಲಿದೆ. ಯೋಜನೆ, ಆಯ್ಕೆಯಾದ ಹಿರಿಯ ನಾಗರಿಕರಿಗೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಪಡಿತರ ವಿತರಣೆ ಮಾಡಲು ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗುತ್ತದೆ. ಸ್ವಯಂಸೇವಕರು ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತಾರೆ.

ಈ ಯೋಜನೆಯು ರಾಜ್ಯದ ಹಿರಿಯ ನಾಗರಿಕರಿಗೆ ಮತ್ತು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಒಂದು ದೊಡ್ಡ ಸಹಾಯ ಆಗಲಿದೆ. ಈ ಯೋಜನೆಯು ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಪೌಷ್ಟಿಕ ಆಹಾರ ಲಭ್ಯತೆ ಖಚಿತಪಡಿಸಿಕೊಳ್ಳಲು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿನ್ನೆಯ ಬಜೆಟ್ ನಲ್ಲಿ ಘೋಷಣೆ ಆಗಿರುವುದರಿಂದ ಇದರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಸಿಗಲಿವೆ. ಇದಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು ಹಾಗೂ ನಿಯಮಗಳು ಇನ್ನು ತಿಳಿದಿಲ್ಲ.

Also Read: Government Scheme: ಮಹಿಳೆಯರ ಸಬಲೀಕರಣಕ್ಕೆ ಉಚಿತ ಹೊಲಿಗೆ ಯಂತ್ರ ನೀಡುತ್ತಿದೆ ಕೇಂದ್ರ ಸರ್ಕಾರ.. ನೀವು ಅರ್ಜಿ ಸಲ್ಲಿಸಬಹುದು.

Leave a comment