Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Arecanut: ಅಡಿಕೆ ಬೆಳೆ ಕುಸಿತದಿಂದ ಕಂಗೆಟ್ಟ ರೈತರು ಮಳೆ, ಇಲ್ಲದೆ ಅಂತರ್ಜಲ  ಕುಸಿತ ಮತ್ತಷ್ಟು ಆತಂಕ

ಈಗಾಗಲೇ ಅಡಿಕೆ ಕೊಯ್ದು, ಬಣ್ಣವನ್ನು ಸಿಂಪಡಿಸಿ ನಂತರ ಅದನ್ನು ಬಿಸಿಲಲ್ಲಿ ಒಣಗಿಸಿ ಮಾರುಕಟ್ಟೆಗೆ ಕೊಂಡೋಯ್ಯಲು ರೈತರು ಕಾಯುತ್ತಿದ್ದಾರೆ.

Arecanut: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಲೆಯಲ್ಲಿ ಅಡಿಕೆ ಸಹ ಒಂದು. 40,000 ರೂಪಾಯಿ ಗಿಂತ ಹೆಚ್ಚಿನ ರದ ಇದ್ದ ಅಡಿಕೆ ಬೆಲೆ ಒಂದು ತಿಂಗಳಿನಿಂದ ಕುಸಿಯುತ್ತಿದೆ. ಭೀಕರ ಬರ, ಅಂತರ್ಜಲ ಕುಸಿತ, ಕೊಳವೆಬಾವಿಗಳಿಗೆ ವಿದ್ಯುತ್ ಸರಬರಾಜು ಕೊರತೆ, ಮತ್ತು ಇತರ ಅಂಶಗಳಿಂದ ಈ ಬೆಲೆ ಕುಸಿತವಾಗಿದೆ. ಈ ಪರಿಸ್ಥಿತಿ ರೈತರಲ್ಲಿ ಆತಂಕ ಮೂಡಿಸಿದೆ. ಫೆಬ್ರವರಿ 16 ರಂದು ಬೆಲೆ ಮತ್ತಷ್ಟು ಕುಸಿದಿದ್ದು, ಹಿಂದಿನ ದಿನದ ಮಾರುಕಟ್ಟೆಗೆ ರೂ. 150 ಇಳಿಕೆ ಕಂಡುಬಂದಿದೆ. 2024 ರ ಹೊಸ ವರ್ಷದ ಆರಂಭದಿಂದ ಏರಿಕೆಯಾಗುತ್ತಿದ್ದ ಅಡಿಕೆ ಬೆಲೆ, ಫೆಬ್ರವರಿ 15 ರ ನಂತರ ಕುಸಿಯಲು ಪ್ರಾರಂಭಿಸಿತು, ಒಂದು ತಿಂಗಳಿನಲ್ಲಿ 2,300 ರೂ.ಗಳ ಇಳಿಕೆ ಕಂಡುಬಂದಿದೆ.

ಈಗಾಗಲೇ ಅಡಿಕೆ ಕೊಯ್ದು, ಬಣ್ಣವನ್ನು ಸಿಂಪಡಿಸಿ ನಂತರ ಅದನ್ನು ಬಿಸಿಲಲ್ಲಿ ಒಣಗಿಸಿ ಮಾರುಕಟ್ಟೆಗೆ ಕೊಂಡೋಯ್ಯಲು ರೈತರು ಕಾಯುತ್ತಿದ್ದಾರೆ. ಆದರೆ ಬೆಲೆ ಇಳೆಯಿಂದ ರೈತರ ಮೊಗದಲ್ಲಿ ನಗು ಇಲ್ಲವಾಗಿದೆ. ಬೆಲೆ ಕಡಿಮೆಯ ಜೊತೆಗೆ ಈ ವರ್ಷದ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ಈ ಬಾರಿಯ ಬೇಸಿಗೆಯಲ್ಲಿ ತೋಟಕ್ಕೆ ನೀರು ಬಿಡುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ..

ಹಿಂದಿನ ದರ ಹಾಗೂ ಈಗಿನ ದರದ ಬಗ್ಗೆ ಮಾಹಿತಿ :- Arecanut

ಪ್ರಸ್ತುತ ಮಾರುಕಟ್ಟೆ ಉತ್ತಮ ಕುಸಿತದಿಂದಾಗಿ ಈಗ ಮಾರಾಟ ಮಾಡುವ ರೈತರಿಗೆ ಮುಂದೆ ದರ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷ (2023) ಗರಿಷ್ಠ ದರ 57 ಸಾವಿರ ರೂಪಾಯಿ ಆಗಿತ್ತು. ಫೆಬ್ರವರಿ 16 ರಂದು ರಾಶಿ ಅಡ್ಕಿ ಕ್ವಿಂಟಲ್‌ಗೆ ಗರಿಷ್ಠ ಬೆಲೆ 48,299 ರೂಪಾಯಿ. ಮತ್ತು ಕನಿಷ್ಠ ಬೆಲೆ 46,512 ರೂಪಾಯಿ ಆಗಿದೆ. 2023 ರ ಏಪ್ರಿಲ್‌ನಲ್ಲಿ 48 ಸಾವಿರ ರೂಪಾಯಿ ಇತ್ತು. ಮೇ ತಿಂಗಳಿನಲ್ಲಿ 49 ಸಾವಿರ ರೂಪಾಯಿ ಆಗಿತ್ತು. . ಜೂನ್‌ನಲ್ಲಿ 50,000 ರೂ. ಗಡಿ ದಾಟಿದ ಬೆಲೆ ಜುಲೈನಲ್ಲಿ 57,000 ರೂ.ಗಳ ಗರಿಷ್ಠ ಮಟ್ಟ ತಲುಪಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಸತತ ಇಳಿಕೆ ಕಂಡು 48 ಸಾವಿರ ರೂ.ಗಳಿಗೆ ಇಳಿದಿದೆ.

ಸೆಪ್ಟೆಂಬರ್ ಮೊದಲ 15 ದಿನಗಳಲ್ಲಿ 46 ಸಾವಿರ ರೂಪಾಯಿಗೆ ಕುಸಿಯಿತು. ಆದರೆ ಅಕ್ಟೋಬರ್ ಕೊನೆಯ ವಾರದಲ್ಲಿ 47,800 ರೂಪಾಯಿ ಆಗಿ ರೈತರಿಗೆ ಸ್ವಲ್ಪ ಭರವಸೆ ಮೂಡಿತು.ನವೆಂಬರ್‌ನಲ್ಲಿ ಸಹ ಬೆಲೆಯೂ ಸ್ಥಿರವಾಗಿತ್ತು. ಡಿಸೆಂಬರ್‌ನಲ್ಲಿ ಸ್ವಲ್ಪ ಏರಿಕೆ ಆಗಿ 48,00 ರೂಪಾಯಿ ಆಗಿತ್ತು. 2024 ರ ಜನವರಿ 15 ರಂದು ಗರಿಷ್ಠ ಬೆಲೆ 50,500 ರೂಪಾಯಿ ಇದ್ದಿತ್ತು. ಆದರೆ ಸತತ ಕುಸಿತ ಕಂಡು ಈಗ ಪ್ರತಿ ಕ್ವಿಂಟಾಲ್ ಅಡಿಕೆಯ ಬೆಲೆ 48,000 ರೂಪಾಯಿ ಆಗಿದೆ.

Also Read: Arecanut Saplings: ಅಡಿಕೆ ಕೃಷಿಗೆ ಸರಿಯಾದ ಸಸಿ ಯಾವುದು? ಅದರ ಆಯ್ಕೆ ಮಾಡೋದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ

Leave a comment