Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Money Tips: ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ್ರು ಕೈ ತುಂಬಾ ಸಂಬಳ ತಂದರು ತಿಂಗಳ ಕೊನೆಗೆ ಏನು ಉಳಿಯುತ್ತಿಲ್ವ? ಡೋಂಟ್ ವರಿ  ಈ ಟಿಪ್ಸ್ ಫಾಲೋ ಮಾಡಿ ಸಾಕು.

ಮನೆಗೆ ದೊಡ್ಡ ಟಿವಿ ಬೇಕೇ ಬೇಕು, ದೊಡ್ಡ ಫ್ರಿಜ್ ಬೇಕು, ವಾಶಿಂಗ್ ಮಷಿನ್ ಬೇಕು, ಎಸಿ ಬೇಕೇ ಬೇಕು ಎಂದು ಸಾವಿರ, ಲಕ್ಷಗಟ್ಟಲೇ ಹಣ ಖರ್ಚು ಮಾಡಿ ತರುತ್ತಾರೆ.

Money Tips: ಎಲ್ಲರೂ ಕಷ್ಟಪಟ್ಟು ಕೆಲಸ ಮಾಡೋದು ಹಣ ಸಂಪಾದನೆ ಮಾಡುವ ಸಲುವಾಗಿ. ನಮ್ಮ ವಾಸ್ತವ ಮತ್ತು ಮುಂದಿನ ಜೀವನ ಚೆನ್ನಾಗಿರಲಿ ಎಂದು ಈಗಿನಿಂದಲೇ ಕಷ್ಟಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಆದರೆ ಕೆಲವರು ತಾವು ಸಂಪಾದನೆ ಮಾಡಿದ ಹಣವನ್ನೆಲ್ಲಾ ಅನಗತ್ಯವಾಗು ಖರ್ಚು ಮಾಡುತ್ತಾರೆ. ಐಷಾರಾಮಿ ಜೀವನಕ್ಕೆ ಆಸೆ ಪಟ್ಟು, ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲಾ ಮನೆಗೆ ತರುತ್ತಾರೆ. ದುಡ್ಡಿಲ್ಲ ಅಂದ್ರೆ ಸಾಲ ಮಾಡಿ ತರುತ್ತಾರೆ. ಭವಿಷ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಅನಗತ್ಯ ಖರ್ಚು: Money Tips

ಮನೆಗೆ ದೊಡ್ಡ ಟಿವಿ ಬೇಕೇ ಬೇಕು, ದೊಡ್ಡ ಫ್ರಿಜ್ ಬೇಕು, ವಾಶಿಂಗ್ ಮಷಿನ್ ಬೇಕು, ಎಸಿ ಬೇಕೇ ಬೇಕು ಎಂದು ಸಾವಿರ, ಲಕ್ಷಗಟ್ಟಲೇ ಹಣ ಖರ್ಚು ಮಾಡಿ ತರುತ್ತಾರೆ. ಒಂದು ವೇಳೆ ಹಣ ಇಲ್ಲ ಅಂದ್ರೆ ಸಾಲ ಮಾಡಿ ಅಥವಾ ಬ್ಯಾಂಕ್ ಲೋನ್ ಪಡೆದು ತರುತ್ತಾರೆ. ಇದೆಲ್ಲವೂ ತಮ್ಮ ಶ್ರಮಕ್ಕೆ ವ್ಯರ್ಥ, ಸಾಲ ಮಾಡಿ ಖರೀದಿ ಮಾಡುವಷ್ಟು ಮುಖುವಾದ ವಸ್ತುಗಳಲ್ಲ ಎಂದು ಅವರಿಗೆ ಅರ್ಥ ಆಗುವುದಿಲ್ಲ. ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಕೆಲವರು ಮಾತ್ರ.

ಹಣ ಉಳಿಸಿ:

ಅಂತವರು ಮನೆಗೆ ನಿಜಕ್ಕೂ ಅಗತ್ಯವಿರುವ ವಸ್ತುಗಳನ್ನು ಸಾಲ ಮಾಡದೆ ತಾವು ಕೂಡಿಟ್ಟ ಹಣದಲ್ಲಿ ಖರೀದಿ ಮಾಡುತ್ತಾರೆ. ಆದರೆ ನೀವು ಅನಗತ್ಯವಾಗಿ ಖರ್ಚು ಮಾಡಿದಾಗ, ನಿಮಗೆ ನಷ್ಟ ಆಗುವುದರ ಜೊತೆಗೆ ನಿಮ್ಮನ್ನು ಅದಕ್ಕೆ ಅಡಿಕ್ಟ್ ಆಗುವ ಹಾಗೆ ಮಾಡುತ್ತದೆ. ನಿಮ್ಮ ಸಂಬಳವೆಲ್ಲಾ ಖಾಲಿ ಆಗುತ್ತದೆ. ಇದರಿಂದ ತಿಂಗಳ ಕೊನೆಗೆ ದುಡ್ಡಿಲ್ಲದೆ ಕಷ್ಟಪಡುವ ಹಾಗೆ ಆಗುತ್ತದೆ. ಈ ರೀತಿ ಆಗಬಾರದು ಎಂದರೆ ಇಂದು ನಾವು ತಿಳಿಸುವ ಸಲಹೆಗಳನ್ನು ಫಾಲೋ ಮಾಡಿ ಸಾಕು.

Money Investment Plans: ಈ ಒಂದು ಯೋಜನೆಯಲ್ಲಿ ₹5000 ಹೂಡಿಕೆ ಮಾಡಿದರೆ, 5 ಲಕ್ಷ ರಿಟರ್ನ್ಸ್! ಇನ್ವೆಸ್ಟ್ ಮಾಡಲು ಮುಗಿಬಿದ್ದ ಜನತೆ.

ಲೌಡ್ ಬಜೆಟ್ ಫಾಲೋ ಮಾಡಿ:

ಲೌಡ್ ಬಜೆಟ್ ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ವಿಶೇಷ ಮಾರ್ಗ ಆಗಿದೆ. ಈ ಬಗ್ಗೆ ಇದರ ಪ್ರಯೋಜನ ಅನುಭವಿಸುರುವ ಲೂಕಾಸ್ ಅವರು ಮಾತನಾಡಿ, ಲೌಡ್ ಬಜೆಟ್ ಇಂದ ತಮಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ . ಅಷ್ಟಕ್ಕೂ ಲೌಡ್ ಬಜೆಟ್ ಅಂದ್ರೆ ಏನು ಎಂದರೆ, ಪ್ರತಿ ತಿಂಗಳು ನಿಮ್ಮ ಖರ್ಚನ್ನು ಬಜೆಟ್ ರೀತಿಯಲ್ಲಿ ವಿಂಗಡಿಸಬೇಕು. ನಿಮ್ಮ ಬಜೆಟ್ ಮೀರಿದ ಹಣವನ್ನು ಖರ್ಚಿನಿಂದ ದೂರ ಇಡಬೇಕು. ಈ ಒಂದು ಸರಳ ಅನುಸರಿಸುವುದರಿಂದ ಎಷ್ಟೋ ಖರ್ಚುಗಳನ್ನು ಕಡಿಮೆ ಮಾಡಬಹುದು. ತಿಂಗಳ ಕೊನೆಯಲ್ಲಿ ಕೈ ಖಾಲಿ ಆಗುವುದಿಲ್ಲ.

ಇದರ ಪ್ರಯೋಜನವೇನು?

ಹಲವು ಜನರು ತಮ್ಮ ಪರಿಸ್ಥಿತಿ ಬಗ್ಗೆ ಯೋಚನೆ ಮಾಡುವುದಕ್ಕಿಂತ ಬೇರೆಯವರು ತಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಎನ್ನುವುದನ್ನೇ ಯೋಚಿಸಿ, ಅನಗತ್ಯವಾಗಿ ಇರುವ ದುಡ್ಡನ್ನೆಲ್ಲಾ ಖರ್ಚು ಮಾಡುತ್ತಾರೆ. ಆದರೆ ನೀವು ಲೌಡ್ ಬಜೆಟ್ ಅಭ್ಯಾಸ ಶುರು ಮಾಡಿಕೊಂಡರೆ, ಇತರರು ನಿಮ್ಮ ಬಗ್ಗೆ ಯೋಚಿಸುವುದನ್ನು ಬಿಟ್ಟು, ನಿಮ್ಮ ಅಗತ್ಯತೆಗಳ ಬಗ್ಗೆ ಗಮನ ಹರಿಸುತ್ತೀರಿ. ಇದು ನಿಮ್ಮ ಬದುಕಿಗೂ ಒಳ್ಳೆಯದು. ಲೌಡ್ ಬಜೆಟ್ ಇಂದ ನಿಮ್ಮ ಹಣ ಉಳಿತಾಯ ಆಗುತ್ತದೆ.

ಹಣಕಾಸಿನ ವಿಚಾರದಲ್ಲಿ ಖರ್ಚುಗಳ ವಿಚಾರದಲ್ಲಿ ನಿಮ್ಮದೇ ಒಂದು ಬೌಂಡರಿ ಹಾಕಿಕೊಂಡು, ಅದರ ಒಳಗೆ ಮಾತ್ರ ಖರ್ಚು ಮಾಡಿ. ಆಗ ನಿಮಗೆ ತಿಂಗಳ ಕೊನೆಯಲ್ಲಿ ಕೈ ಖಾಲಿ ಆಗುವ ಸಮಸ್ಯೆ ಬರುವುದಿಲ್ಲ.

Money-saving tips and ideas

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment