Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

LIC Amritbaal Policy : ಮಕ್ಕಳಿಗೋಸ್ಕರ ವಿಶೇಷ ಪಾಲಿಸಿ ತಂದ LIC! ಈ ಯೋಜನೆಯ ವಿಶೇಷತೆಗಳೇನು?

LIC ಸಂಸ್ಥೆ ಮಕ್ಕಳಿಗಾಗಿ ಜಾರಿಗೆ ತಂದಿರುವ ಹೊಸ ಪಾಲಿಸಿ ಹೆಸರು ಅಮೃತ್ ಬಾಲ್ ಪಾಲಿಸಿ ಯೋಜನೆ ಆಗಿದೆ. ಈ ಯೋಜನೆಯನ್ನು ಫೆಬ್ರವರಿ 16ರಂದು ಲಾಂಚ್ ಮಾಡಲಾಗಿದೆ.

LIC Amritbaal Policy : ನಮ್ಮ ದೇಶದ ಜನರು ವಿಮೆ ಮತ್ತು ಉಳಿತಾಯ ಎರಡನ್ನು ಗಮನದಲ್ಲಿ ಇಟ್ಟುಕೊಂಡರೆ ತಕ್ಷಣಕ್ಕೆ ನೆನಪಿಗೆ ಬರುವುದು LIC ಸಂಸ್ಥೆ. ಈ ಸಂಸ್ಥೆಯು ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಪಾಲಿಸಿಗಳನ್ನು ಜಾರಿಗೆ ತಂದಿದೆ. ಕೋಟ್ಯಾಂತರ ಜನರು LIC ಪಾಲಿಸಿಗಳನ್ನು ಪಡೆದಿದ್ದು, ಅದರ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಎಲ್ಲಾ ವಯೋವರ್ಗದವರಿಗೂ ಪಾಲಿಸಿಗಳನ್ನು ತಂದಿರುವ LIC, ಇದೀಗ ಮಕ್ಕಳಿಗಾಗಿ ವಿಶೇಷ ಪಾಲಿಸಿಯನ್ನು ತಂದಿದೆ.

LIC Amritbaal Policy :

LIC ಸಂಸ್ಥೆ ಮಕ್ಕಳಿಗಾಗಿ ಜಾರಿಗೆ ತಂದಿರುವ ಹೊಸ ಪಾಲಿಸಿ ಹೆಸರು ಅಮೃತ್ ಬಾಲ್ ಪಾಲಿಸಿ ಯೋಜನೆ ಆಗಿದೆ. ಈ ಯೋಜನೆಯನ್ನು ಫೆಬ್ರವರಿ 16ರಂದು ಲಾಂಚ್ ಮಾಡಲಾಗಿದೆ. ಸಣ್ಣ ಮಕ್ಕಳ ಓದಿನ ಖರ್ಚು ಮತ್ತು ವಿಮೆಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಸೇವಿಂಗ್ಸ್ ಮತ್ತು ಲೈಫ್ ಇನ್ಷುರೆನ್ಸ್ ಎರಡು ಸಹ ಆಗಿದ್ದು, ಒಂದೆ ಬಾರಿ ಪ್ರೀಮಿಯಂ ಪಾವತಿ ಮಾಡಬಹುದು ಅಥವಾ ಹಂತ ಹಂತವಾಗಿಯೂ ಪ್ರೀಮಿಯಂ ಪಾವತಿ ಮಾಡುವ ಆಯ್ಕೆ ಹೊಂದಿದೆ. ಈ ಪಾಲಿಸಿಯ Sum Assured ಮೊತ್ತ ₹2 ಲಕ್ಷ ರೂಪಾಯಿ ಆಗಿದೆ. ಇದರ ಜೊತೆಗೆ Guarantee Addition ಕೂಡ ಇದೆ.

ಅಮೃತ್ ಬಾಲ್ ಯೋಜನೆಗೆ ಅರ್ಹತೆ?

ಇದನ್ನು ಸಣ್ಣ ಮಕ್ಕಳಿಗಾಗಿ ಜಾರಿಗೆ ತಂದಿರುವ ವಿಶೇಷವಾದ ಯೋಜನೆ ಆಗಿದ್ದು, ನಿಮ್ಮ ಮಗು ಹುಟ್ಟಿದ 1 ತಿಂಗಳಿಗೆ ಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಇನ್ನು ಪಾಲಿಸಿ ಪಡೆಯುವುದಕ್ಕೆ ಮಗುವಿನ ಮ್ಯಾಕ್ಸಿಮಮ್ ವಯಸ್ಸು 13 ವರ್ಷಗಳಾಗಿದೆ. ನಿಮ್ಮ ಮಗುವಿನ ವಯಸ್ಸು ಇಷ್ಟಾಗುವುದರ ಒಳಗೆ ಅಮೃತ್ ಬಾಲ್ ಯೋಜನೆಯಲ್ಲಿ ಖಾತೆ ತೆರೆದು, ಪ್ರೀಮಿಯಂ ಪಾವತಿ ಮಾಡಬಹುದು.

ಪ್ರೀಮಿಯಂ ಪಾವತಿ ಆಯ್ಕೆ ಹೇಗಿದೆ?

ಈ ವಿಶೇಷ ಯೋಜನೆಯ ಪ್ರೀಮಿಯಂ ಪಾವತಿ ಆಯ್ಕೆ ಹೇಗಿದೆ ಎಂದರೆ, ಈ ಯೋಜನೆಯಲ್ಲಿ ನಿಮಗೆ ಎರಡು ರೀತಿಯ ಪ್ರೀಮಿಯಂ ಪಾವತಿ ಆಯ್ಕೆ ಸಿಗುತ್ತದೆ, ಒಂದು Single Premium, ಎರಡನೆಯದು Limited Premium. ಈ ಪಾಲಿಸಿಗೆ ಪ್ರೀಮಿಯಂ ಅವಧಿಯನ್ನು ನಿಗದಿ ಮಾಡಲಾಗಿದ್ದು, 5 ರಿಂದ 25 ವರ್ಷಗಳ ಪ್ರೀಮಿಯಂ ಪಾವತಿ ಮಾಡುವ ಅವಧಿ ಆಯ್ಕೆಗಳಿವೆ. ಇದರಲ್ಲಿ ನೀವು Short Premium ಆಯ್ಕೆ ಮಾಡಿಕೊಂಡರೆ.. 5, 6 ಅಥವಾ 7 ವರ್ಷಗಳ ಪ್ರೀಮಿಯಂ ಪಾವತಿ ಮಾಡಬಹುದು, Long Premium ಪಾವತಿ ಆಯ್ಕೆ ಮಾಡಿಕೊಂಡರೆ, 25 ವರ್ಷಗಳ ಅವಧಿ ಇರುತ್ತದೆ.

ಅಮೃತ್ ಬಾಲ್ ಪಾಲಿಸಿಯಲ್ಲಿ ನಿಮಗೆ Basic Sum Assured ಹಣ ಮಿನಿಮಮ್ 2 ಲಕ್ಷ ರೂಪಾಯಿ ಆಗಿರುತ್ತದೆ. ಇದು ಮಿನಿಮಮ್ ಮೊತ್ತ ಆಗಿದ್ದು, ಮ್ಯಾಕ್ಸಿಮಮ್ ಎಷ್ಟು ಮೊತ್ತ ಪಾವತಿ ಮಾಡಬಹುದು ಎಂದು ನಿಗದಿ ಮಾಡಿಲ್ಲ, ಎಷ್ಟು ಮೊತ್ತವನ್ನಾದರು ಪಾವತಿ ಮಾಡಬಹುದು. ಇನ್ನು ಈ ಪಾಲಿಸಿಯಲ್ಲಿ ನಿಮಗೆ ಪ್ರೀಮಿಯಂ ಪಾವತಿ ಶುರುವಾಗಿ 1 ವರ್ಷದ ಅವಧಿಗೆ ಒಂದು ಸಾವಿರಕ್ಕೆ 80 ರೂಪಾಯಿಗ್ಯಾರೆಂಟಿ ಮೊತ್ತ ಹಣವನ್ನು ನೀಡಲಾಗುತ್ತದೆ. ಪಾಲಿಸಿಯ ಸಮಯ ಮುಗಿಯುವವರೆಗು ಕೂಡ ಪ್ರತಿ ವರ್ಷ ಈ ಹಣ ಸೇರಿಕೊಳ್ಳುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ ಎಂದು ಒಂದು ಉದಾಹರಣೆ ನೀಡುವುದಾದರೆ, ಒಂದು ವೇಳೆ ನೀವು ಈ ಪಾಲಿಸಿಯಲ್ಲಿ 2 ಲಕ್ಷ ರೂಪಾಯಿಯ ಮೊತ್ತವನ್ನು ಬೇಸಿಕ್ ಸಮ್ ಅಷ್ಯೂರ್ಡ್ ಹಣವಾಗಿ ಪಾವತಿ ಮಾಡಿದರೆ, ವರ್ಷಕ್ಕೆ ₹16,000 ರೂಪಾಯಿಗಳ ಗ್ಯಾರೆಂಟಿ ಹಣ ನಿಮಗೆ ಸಿಗುತ್ತದೆ. ನೀವು ಪ್ರೀಮಿಯಂ ಪಾವತಿ ಮಾಡುವ ಅವಧಿ ಮುಗಿದು, ಮೆಚ್ಯುರ್ ಆದಾಗ ನೀವು ಪಾವತಿ ಮಾಡಿರುವ ಮೊತ್ತ ಹಾಗೂ ಗ್ಯಾರೆಂಟಿ ಹಣ ಎಲ್ಲವೂ ಸಹ ಜೊತೆಯಾಗಿ ಸಿಗುತ್ತದೆ. ಈ ಪಾಲಿಸಿಯಲ್ಲಿ ನಿಮಗೆ ಡೆತ್ ಬೆನಿಫಿಟ್ಸ್ ಸಹ ಇದೆ.

Also Read: Anna Suvidha Scheme: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ‘ಅನ್ನ ಸುವಿಧಾ’ ಯೋಜನೆ ಘೋಷಣೆ! ನಾಗರಿಕರ ಮನೆ ಬಾಗಿಲಿಗೆ ಬರಲಿದೆ ಪಡಿತರ ಅಕ್ಕಿ

Leave a comment