Money-making tips: ಹೆಚ್ಚೇನೂ ಬೇಡ ಕೇವಲ 35 ಸಾವಿರ ಹೂಡಿಕೆ ಮಾಡಿ, ಈ ಬೆಳೆ ಬೆಳೆದರೆ 8 ಲಕ್ಷ ರೂಪಾಯಿ ಲಾಭ ಪಡೆಯಬಹುದು.
ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿ.ಬೆಳೆಯಲ್ಲಿ ಕಳೆಗಳು ಕಾಣಿಸಿಕೊಂಡಾಗ ತೆಗೆಯಬೇಕಾಗುತ್ತದೆ. ಜೀರಿಗೆ ಬೆಳೆಗೆ ಕೆಲವು ಕೀಟ ಮತ್ತು ರೋಗಗಳ ಬಾಧೆ ಬರಬಹುದು.
Money-making tips: ಭಾರತದಲ್ಲಿ ಸಾಂಬಾರು ಪದಾರ್ಥಗಳ ಮಾರಾಟವೂ ಬಹಳ ಹೆಚ್ಚು. ಭಾರತದ ಸಾಂಪ್ರದಾಯಿಕ ಅಡಿಗೆಗಳಲಿ ಆಗಲಿ ಹಳೆಯ ಔಷಧಿ ಪದ್ಧತಿಗಳಿಗೆ ಸಾಂಬಾರು ಪದಾರ್ಥಗಳನ್ನು ಬಳಸುವುದು ಸಾಮಾನ್ಯ ಅಂತಹ ಒಂದು ಸಾಂಬಾರು ಪದಾರ್ಥದ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಕಡಿಮೆ ಬಂಡವಾಳ ಹಾಕಿ ಹೆಚ್ಚಿನ ಆದಾಯ ಗಳಿಸಲು ಇದು ಬಹಳ ಉತ್ತಮ ಬೆಳೆ ಆಗಿದೆ.
ಇಂದು ನಾವು ಹೇಳಲು ಹೊರಟಿರುವ ಸಾಂಬಾರು ಪದಾರ್ಥ ಯಾವುದೆಂದರೆ ಅದು ಜೀರಿಗೆ . ಇದು ಹಲವಾರು ರೋಗಗಳಿಗೆ ದಿವ್ಯ ಔಷಧ. ಇದು ಅಡುಗೆಗೆ ಸಹ ಬಹಳ ಉಪಯುಕ್ತ ಆಗಿದೆ.
ಜೀರಿಗೆ ಬೇಳೆ ಬೆಳೆಯುವ ಕ್ರಮ ಹೇಗೆ?
ಮಣ್ಣು ಮತ್ತು ಹವಾಮಾನ:
ಜೀರಿಗೆ ಲೋಮಮಿಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. 20 ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಜೀರಿಗೆ ಬೆಳೆಗೆ ಸೂಕ್ತವಾಗಿದೆ. ಜೀರಿಗೆ ಬೀಜಗಳನ್ನು ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಬಿತ್ತಬೇಕು.
ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ. 20 ಸೆಂ. ಮೀ ಅಂತರದಲ್ಲಿ ಬೀಜಗಳನ್ನು ಬಿತ್ತಬೇಕು. ಜೀರಿಗೆ ಹೆಚ್ಚು ನೀರು ಬೇಕಾಗುವುದಿಲ್ಲ.
ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿ.ಬೆಳೆಯಲ್ಲಿ ಕಳೆಗಳು ಕಾಣಿಸಿಕೊಂಡಾಗ ತೆಗೆಯಬೇಕಾಗುತ್ತದೆ. ಜೀರಿಗೆ ಬೆಳೆಗೆ ಕೆಲವು ಕೀಟ ಮತ್ತು ರೋಗಗಳ ಬಾಧೆ ಬರಬಹುದು. ಕೀಟ ಮತ್ತು ರೋಗಗಳ ಲಕ್ಷಣಗಳು ಕಂಡುಬಂದರೆ ತಕ್ಷಣ ಸೂಕ್ತ ಔಷಧಿಗಳನ್ನು ಸಿಂಪಡಣೆ ಮಾಡಬೇಕು. ಜೀರಿಗೆ ಬೆಳೆ ಬೀಜ ಬಿತ್ತಿದ 100 ರಿಂದ 120 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಕಾಯಿಗಳು ಒಣಗಿದಾಗ ಕೊಯ್ಲು ಮಾಡಬಹುದು. ಕೊಯ್ಲು ಮಾಡಿದ ನಂತರ ಜೀರಿಗೆಯನ್ನು ಚೆನ್ನಾಗಿ ಒಣಗಿಸಿ.ಒಣಗಿದ ಜೀರಿಗೆಯನ್ನು ಗೋಣಿ ಚೀಲಗಳಲ್ಲಿ ತುಂಬಿ ಭಧ್ರವಾಗಿಡಬೇಕು.
ಜೀರಿಗೆ ಬೆಳೆಗೆ (Cumin crop) ಉತ್ತಮ ಆದಾಯ ಬರಲು ಇರುವ ಕಾರಣಗಳು ಏನು?
1) ಜೀರಿಗೆ ಭಾರತ ಮತ್ತು ವಿದೇಶಗಳಲ್ಲಿ ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ.
2) ಜೀರಿಗೆಯನ್ನು ಅಡುಗೆ, ಪರಿಮಳ ಮತ್ತು ಪರಿಮಳ ದ್ರವ್ಯಗಳಲ್ಲಿ ಬಳಸಲಾಗುತ್ತದೆ.
3) ಈ ಉದ್ಯಮದಲ್ಲಿ ಲಾಭದ ಅವಕಾಶ ತುಂಬಾ ಹೆಚ್ಚು.
4) ಈ ಉದ್ಯಮವನ್ನು ಪ್ರಾರಂಭಿಸಲು 35 ಸಾವಿರ ರೂಪಾಯಿಗಳಷ್ಟು ಕಡಿಮೆ ಬಂಡವಾಳ ಸಾಕು.
ಜೀರಿಗೆ ಬೆಳೆಯುವಾಗ ಉಂಟಾಗುವ ಸವಾಲುಗಳು:
ಹವಾಮಾನ: ಜೀರಿಗೆ ಬೆಳೆಗೆ ಸೂಕ್ತವಾದ ಹವಾಮಾನ.
ರೋಗಗಳು ಮತ್ತು ಕೀಟಗಳು: ಜೀರಿಗೆ ಬೆಳೆಗೆ ಕೆಲವು ರೋಗಗಳು ಮತ್ತು ಕೀಟಗಳ ಬಾಧೆ ಬರಬಹುದು.
ಮಾರುಕಟ್ಟೆ: ಜೀರಿಗೆ ಉತ್ತಮ ಬೆಲೆ ಪಡೆಯಲು ಸ್ಪರ್ಧಾತ್ಮಕ ವಸ್ತು ಮಾರಾಟ ಪ್ರಾರಂಭ.
ಜೀರಿಗೆ ಬೆಳೆಗೆ ಹಾಕುವ ಬಂಡವಾಳ ಹಾಗೂ ಸಿಗಬಹುದಾದ ಲಾಭಗಳ ಬಗ್ಗೆ ಮಾಹಿತಿ :-
ಒಂದು ಎಕರೆಯ ಜಾಗದಲ್ಲಿ ಜೀರಿಗೆಯನ್ನು ಬೆಳೆಯಲು 30,000 ದಿಂದ 32,000 ಬಂಡವಾಳ ಬೇಕಾಗುತ್ತದೆ. ಇಂದು ಎಕರೆಗೆ 7 ರಿಂದ 8 ಕ್ವಿಂಟಾಲ್ ಬೀಜವನ್ನು ಬಿತ್ತಬಹುದು. ಉತ್ತಮ ಗುಣಮಟ್ಟದ ಜೀರಿಗೆ ಕ್ವಿಂಟಲ್‌ಗೆ ಸುಮಾರು 32,000 ರೂಪಾಯಿ ದರದಲ್ಲಿ ಮಾರಾಟ ಮಾಡಬಹುದು. 27 ಕ್ವಿಂಟಾಲ್ ಬೆಲೆಯನ್ನು ಬೆಳೆದರೆ 8.65 ಲಕ್ಷ ರೂಪಾಯಿ ವರೆಗೆ ಗಳಿಸಬಹುದು.