Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bele Parihara Karnataka: ರೈತರಿಗೆ ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಬರ ಪರಿಹಾರ ಹಣ ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿ

ಮೊದಲು ನೀವು ರಾಜ್ಯ ಸರ್ಕಾರದ DBT Karnataka ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಇಂದ ಇನ್ಸ್ಟಾಲ್ ಮಾಡಿ

Bele Parihara Karnataka: ರಾಜ್ಯ ಸರ್ಕಾರವು ರೈತರಿಗೆ ಆಗಿರುವ ನಷ್ಟ ತುಂಬಿಕೊಡಲು ಬರ ಪರಿಹಾರ ನೀಡುವ ಬಗ್ಗೆ ಈಗಾಗಲೇ ಘೋಷಣೆ ಮಾಡಿದೆ. ನಮಗೆಲ್ಲಾ ಗೊತ್ತಿರುವ ಹಾಗೆ ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಸರಿಯಾಗಿ ಮಳೆ ಬೆಳೆ ಆಗದೆ ಇರುವುದರಿಂದ ರೈತರಿಗೆ ನಷ್ಟವಾಗಿದ್ದು, ಅದಕ್ಕಾಗಿ ಸರ್ಕಾರವು ಬರ ಪರಿಹಾರ ಘೋಷಣೆ ಮಾಡಿದೆ. ಇದು ಎಲ್ಲಾ ರೈತರಿಗೆ ಉಪಯೋಗ ಆಗುವಂಥ ವಿಚಾರ ಆಗಿದೆ..

ಕೇಂದ್ರ ಸರ್ಕಾರ ಪರಿಹಾರ ಕೋಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದರು ಸಹ ಕೇಂದ್ರದಿಂದ ಪ್ರತಿಕ್ರಿಯೆ ಬರದ ಕಾರಣ ರಾಜ್ಯ ಸರ್ಕಾರವು ಬರ ಪರಿಹಾರವಾಗಿ, ಮೊದಲ ಕಂತಿನಲ್ಲಿ 2000 ರೂಪಾಯಿಗಳನ್ನು ರೈತರ ಅಕೌಂಟ್ ಗೆ ವರ್ಗಾವಣೆ ಮಾಡುವುದಕ್ಕೆ ಶುರು ಮಾಡಿದೆ. ಒಂದು ವೇಳೆ ನಿಮಗೂ ಈ ಹಣ ಬಂದಿದ್ಯಾ ಎಂದು ಚೆಕ್ ಮಾಡಲು ಸ್ಟೇಟಸ್ ಚೆಕ್ ಮಾಡಬೇಕಾಗುತ್ತದೆ. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಬೆಳೆ ಪರಹಾರ ನಿಧಿ ಸ್ಟೇಟಸ್ ಚೆಕ್:

1. ಮೊದಲು ನೀವು ರಾಜ್ಯ ಸರ್ಕಾರದ DBT Karnataka ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಇಂದ ಇನ್ಸ್ಟಾಲ್ ಮಾಡಿ

2. ಈಗ Enter Aadhaar Number ಎನ್ನುವಲ್ಲಿ ಆಧಾರ್ ನಂಬರ್ ಹಾಕಿ, ಫೋನ್ ಗೆ ಬರುವ ಓಟಿಪಿಯನ್ನು ಎಂಟರ್ ಮಾಡಿ, ವೇರಿಫೈ ಆಗಿ ಲಾಗಿನ್ ಮಾಡಿ..

3. ಈಗ ನಿಮ್ಮ ಪರ್ಸನಲ್ ಡೀಟೇಲ್ಸ್ ಬರುತ್ತದೆ, ಇಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಮತ್ತೆ ಹಾಕಿ, ಓಟಿಪಿ ಎಂಟರ್ ಮಾಡಿ, ಮತ್ತೆ ಓಕೆ ಬಟನ್ ಸೆಲೆಕ್ಟ್ ಮಾಡಿ.

4. ಈಗ ನೀವು ನಿಮಗೆ ಸುರಕ್ಷಿತ ಎನ್ನಿಸುವ 4 ಅಂಕಿಗಳ Mpin ನಂಬರ್ ಹಾಕಿ, ಹೊಸದಾಗಿ Mpin ನಂಬರ್ ಅನ್ನು ಮಾಡಿಕೊಳ್ಳಬೇಕು, ನಂಬರ್ ಹಾಕಿದ ಬಳಿಕ submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

5. ಈಗ ನಿಮ್ಮ ಎದುರು ಸೆಲೆಕ್ಟ್ Beneficiary ಎನ್ನುವ ಆಯ್ಕೆ ಕಾಣಲಿದ್ದು, ಇದರಲ್ಲಿ ನಿವು ಫ್ಯಾಮಿಲಿ ಆಗಿ ಯಾರನ್ನು ಆಯ್ಕೆ ಮಾಡಿದ್ದೀರಿ ಎಂದು ಗೊತ್ತಾಗುತ್ತದೆ.

6. ಬಳಿಕ ನೀವು ಫಲಾನುಭವಿಯನ್ನು ಸೆಲೆಕ್ಟ್ ಮಾಡಿ, ಬಳಿಕ ಮತ್ತೆ MPin ಬಳಸಿ ಲಾಗಿನ್ ಮಾಡಿ.

7. ಈಗ Payment Status ಎನ್ನುವ ಆಯ್ಕೆ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

8. ಈಗ ಒಂದಷ್ಟು ಯೋಜನೆಗಳ ಹೆಸರು ಕಾಣುತ್ತದೆ, ಅದರಲ್ಲಿ Input Subsidy for Crop loss ಎನ್ನುವ ಆಯ್ಕೆ ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿ.

9. ಇಲ್ಲಿ ನಿಮ್ಮ ಅಕೌಂಟ್ ಗೆ ಹಣ ಬಂದಿದ್ಯಾ ಇಲ್ಲವಾ? ಬಂದಿಲ್ಲ ಅಂದರೆ ಯಾವಾಗ ಬರುತ್ತದೆ? ಎಲ್ಲದರ ಮಾಹಿತಿ ಇರುತ್ತದೆ.

Bele Parihara Karnataka Status Check

Leave a comment