Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kisan Credit Card: ರೈತರಿಗೆ ಸಿಹಿ ಸುದ್ದಿ, ಕುರಿ, ಮೇಕೆ, ಹಂದಿ, ಕೋಳಿ ಮತ್ತು ಮೊಲ ಸಾಕಾಣಿಕೆಗೆ ಸಾಲ ಸೌಲಭ್ಯ, ಕಡಿಮೆ ಬಡ್ಡಿಗೆ ಸಿಗುತ್ತಿದೆ ಸಾಲ ಇಂದೇ ಅರ್ಜಿ ಸಲ್ಲಿಸಿ.

ಪಶುಸಂಗೋಪನೆ ಮಾಡುವ ರೈತರಿಗೆ ಸಹಾಯ ಮಾಡಲು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಸಾಲ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

Kisan Credit Card: ಸರ್ಕಾರವು ನಮ್ಮ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆ Kisan Credit Card 2024 ಯೋಜನೆ ಆಗಿದೆ. ಈ ಒಂದು ಕಾರ್ಡ್ ರೈತರ ಬಳಿ ಇದ್ದರೆ ಸಾಕು, ಪಶುಸಂಗೋಪನೆ ಚಟುವಟಿಕೆ ಆದ ಮೊಲ, ಮೇಕೆ, ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಹಂದಿ ಸಾಕಾಣಿಕೆ. ಈ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಿದೆ. ಕೃಷಿ ಮಾಡುತ್ತಿರುವವರು ಈ ಸಹಾಯ ಪಡೆದು, ಪಶು ಸಂಗೋಪನೆ ಶುರು ಮಾಡಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ (Kisan Credit Card Loan):

ಪಶುಸಂಗೋಪನೆ ಮಾಡುವ ರೈತರಿಗೆ ಸಹಾಯ ಮಾಡಲು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಸಾಲ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಇದು ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ಪಶುಸಂಗೋಪನೆ ಚಟುವಟಿಕೆ ಮಾಡುತ್ತಿರುವವರಿಗೆ ಅವರ ಖರ್ಚು ಭರಿಸಲು ಕೇಂದ್ರ ಹಣಕಾಸು ಸೇವಾ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳ ಮೂಲಕ ಅತಿಕಡಿಮೆ ಬಡ್ಡಿಗೆ ಸಾಲ ನೀಡಲಿದೆ.

Kisan Credit Card Loan ಬಗ್ಗೆ ಪೂರ್ಣ ಮಾಹಿತಿ:

ಈ ಯೋಜನೆಯ ಮೂಲಕ ರೈತರಿಗೆ 10 ಲಕ್ಷದ ವರೆಗು ಸಾಲ ಸಿಗುತ್ತದೆ. ಇದಕ್ಕಾಗಿ ಯಾವುದೇ ಸೆಕ್ಯೂರಿಟಿ ಡಾಕ್ಯುಮೆಂಟ್ಸ್ ಕೊಡುವ ಅಗತ್ಯವಿರುವುದಿಲ್ಲ. ಈ ಸಾಲಕ್ಕೆ ಬಡ್ಡಿಯ ರಿಯಾಯಿತಿ 3 ಲಕ್ಷದವರೆಗು ಸಿಗುವ ಸಾಧ್ಯತೆ ಇದೆ. ಈ ಸಾಲ ಪಡೆಯುವವರಿಗೆ 2% ಬಡ್ಡಿಯ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಸರಿಯಾದ ಸಮಯಕ್ಕೆ ಸಾಲ ತೀರಿಸಿದರೆ, 3% ಜಾಸ್ತಿ ಬಡ್ಡಿ ಸಹಾಯಧನ ಸಿಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಾರೆಯಾಗಿ ರೈತರಿಗೆ 5% ವರೆಗು ಬಡ್ಡಿ ಡಿಸ್ಕೌಂಟ್ ಸಿಗಬಹುದು.

Kisan Credit Card ಯೋಜನೆಯಲ್ಲಿ ಪಡೆಯಬಹುದಾದ ಸಾಲ ಎಷ್ಟು?

1. ಹೈನುಗಾರಿಕೆ:

 • 2 ಮಿಶ್ರತಳಿ ಹಸುಗಳನ್ನು ಸಾಕಲು, ಒಂದು ಹಸುವಿಗೆ ಮ್ಯಾಕ್ಸಿಮಮ್ ₹18,000. ಎರಡಕ್ಕೆ ₹36,000 ಸಾಲದ ಹಣ ಸಿಗುತ್ತದೆ.
 • ಎಮ್ಮೆಗಳನ್ನು ಸಾಕಲು, ಒಂದು ಎಮ್ಮೆಗೆ ಮ್ಯಾಕ್ಸಿಮಮ್ ₹21,000. ಎರಡು ಎಮ್ಮೆಗಳಿಗೆ ₹42,000 ಸಾಲದ ಮೊತ್ತ ಸಿಗಬಹುದು.

2. ಕುರಿ ಸಾಕಾಣಿಕೆ:

 • 11 ಕುರಿಗಳನ್ನು ಸಾಕಲು, 8 ತಿಂಗಳ ಸಮಯಕ್ಕೆ ಸಾಲ ನೀಡಲಾಗುತ್ತದೆ. ಒಂದೇ ಕಡೆ ಕಟ್ಟಿ ಮೆಯಿಸುವ 11 ಕುರಿಗಳಿಗೆ ₹57,200 ರೂಪಾಯಿ ಸಾಲ ಸಿಗುತ್ತದೆ. ಹೊರಗಡೆ ಮೇಯಿಸುವ ಕುರಿಗಳಿಗೆ ₹28,200 ರೂಪಾಯಿ ಸಾಲ ನೀಡಲಾಗುತ್ತದೆ.
 • 21 ಕುರಿಗಳನ್ನು ಸಾಕಲು, 8 ತಿಂಗಳ ಸಮಯಕ್ಕೆ ಸಾಲ ನೀಡಲಾಗುತ್ತದೆ. ಒಂದೇ ಕಡೆ ಕಟ್ಟಿ ಮೆಯಿಸುವ 11 ಕುರಿಗಳಿಗೆ ₹29,950 ರೂಪಾಯಿ ಸಾಲ ಸಿಗುತ್ತದೆ. ಹೊರಗಡೆ ಮೇಯಿಸುವ ಕುರಿಗಳಿಗೆ ₹14,700 ರೂಪಾಯಿ ಸಾಲ ನೀಡಲಾಗುತ್ತದೆ.
 • 10 ಮರಿಗಳನ್ನು ದೊಡ್ಡದಾಗಿ ಮಾಡಲು ₹13,250 ರೂಪಾಯಿಗಳ ಹಾಗೆ 20 ಕುರಿಗಳಿಗೆ ₹26,200 ರೂಪಾಯಿಗಳು ಸಾಲ ಸೌಲಭ್ಯ ಸಿಗುತ್ತದೆ.

3. ಮೇಕೆ ಸಾಕಾಣಿಕೆ:

 • 11 ಮೇಕೆಗಳನ್ನು, 8 ತಿಂಗಳ ಅವಧಿಗೆ ಸಾಕಲು, ಒಂದೇ ಕಡೆ ಕಟ್ಟಿ ಬೆಳೆಸುವ ಮೇಕೆಗಳಿಗೆ ₹29,950 ರೂಪಾಯಿ ಸಾಲ ಸಿಗುತ್ತದೆ. ಹೊರಗಡೆ ಮೆಯಿಸುವ ಮೇಕೆಗಳಿಗೆ ₹14,700 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ.
 • 21 ಮೇಕೆಗಳನ್ನು, 8 ತಿಂಗಳ ಅವಧಿಗೆ ಸಾಕಲು, ಒಂದೇ ಕಡೆ ಕಟ್ಟಿ ಬೆಳೆಸುವ ಮೇಕೆಗಳಿಗೆ ₹57,200 ರೂಪಾಯಿ ಸಾಲ ಸಿಗುತ್ತದೆ. ಹೊರಗಡೆ ಮೆಯಿಸುವ ಮೇಕೆಗಳಿಗೆ ₹28,200 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ.

4. ಹಂದಿ ನಿರ್ವಹಣೆ:

 • 10 ಹಂದಿಗಳನ್ನು ಸಾಕಲು, 8 ತಿಂಗಳ ಸಮಯಕ್ಕೆ ₹60,000 ಸಾಲ ಸೌಲಭ್ಯ ಕೊಡಲಾಗುತ್ತದೆ.

5. ಕೋಳಿ ಸಾಕಾಣಿಕೆ:

 • ಮಾಂಸದ ಸಲುವಾಗಿ ಸಾಕುವ ಕೋಳಿಗಳಾದರೆ, ಒಂದು ಕೋಳಿಗೆ 80 ರೂಪಾಯಿಯ ಹಾಗೆ 1000 ಕೋಳಿಗೆ ₹80,000 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ.
 • ಮೊಟ್ಟೆ ಕೋಳಿ ಆದರೆ, ಒಂದು ಕೋಳಿಗೆ ₹180 ರೂಪಾಯಿಯ ಹಾಗೆ, 1000 ಕೋಳಿ ಸಾಕಲು ₹1,80,000 ರೂಪಾಯಿ ಸಾಲ ಸೌಲಭ್ಯ ಸಿಗುತ್ತದೆ.

6. ಮೊಲ ಸಾಕಾಣಿಕೆ:

60 ಮೊಲಗಳನ್ನು ಸಾಕುವುದಕ್ಕೆ ₹50,000 ವರೆಗು ಸಾಲ ಸೌಲಭ್ಯ ಸಿಗುತ್ತದೆ.

ಈ ಸಾಲ ಸೌಲಭ್ಯವು ಕೆಸಿಸಿ ಯೋಜನೆಯ ಅಡಿಯಲ್ಲಿ ಸಿಗಲಿದ್ದು, ಈ ಹಣಕಾಸಿನ ಸಹಾಯ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಲು 31/3/2024 ಕೊನೆಯ ದಿನಾಂಕ ಆಗಿರುತ್ತದೆ.

ಕಿಸಾನ್ ಕ್ರೆಡಿಟ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

 • ಫಿಲ್ ಮಾಡಿರುವ ಅಪ್ಲಿಕೇಶನ್ ಫಾರ್ಮ್
 • Bank Account Details
 • RTC
 • ಆಧಾರ್ ಕಾರ್ಡ್
 • Passport Size Photo

ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು 8277 100 200 ನಂಬರ್ ಗೆ ಕಾಲ್ ಮಾಡಬಹುದು.

Good news for farmers, low interest loan facility for sheep, goat, pig, chicken, rabbit farming.

Leave a comment