Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bhagyalakshmi Yojana: ಹೆಣ್ಣುಮಗು ಹುಟ್ಟಿದರೆ ಅವಳು ಭಾರವಲ್ಲ! ಹೆಣ್ಣಮಗುವಿನ ತಂದೆ ತಾಯಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ! ಇಂದೇ ಅರ್ಜಿ ಸಲ್ಲಿಸಿ.

ನಮ್ಮ ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯಬಾರದು, ಹೆಣ್ಣುಮಗುವಿಗೆ ಬದುಕುವ ಹಕ್ಕು ಇದೆ. ಎಂದು ಈ ಕೃತ್ಯವನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದು.

Bhagyalakshmi Yojana: ಒಂದು ಹೆಣ್ಣುಮಗು ಹುಟ್ಟಿದಾಗ ಸಮಾಜ ಆ ಮಗುವನ್ನು ನೋಡುವ ದೃಷ್ಟಿಯೇ ಬೇರೆ ರೀತಿ ಇರುತ್ತದೆ. ಗಂಡು ಮಗುವಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಹೆಣ್ಣುಮಗುವಿಗೆ ಕೊಡುವುದಿಲ್ಲ. ಹೆಣ್ಣುಮಗು ಹುಟ್ಟಿದರೆ ಖರ್ಚು ಜಾಸ್ತಿ, ಮದುವೆ ಮಾಡಿ ಕಳಿಸಬೇಕು, ಇದೆಲ್ಲವೂ ಖರ್ಚು ಎಂದು ಭಾವಿಸುವ ಜನ, ಹೆಣ್ಣುಮಗು ಹುಟ್ಟಿದರೆ ಸಮಸ್ಯೆ ಎಂದುಕೊಳ್ಳುತ್ತಾರೆ. ಆದರೆ ಅದು ಸುಳ್ಳು, ಸರ್ಕಾರವು ಸಮಾಜದಲ್ಲಿ ಹೆಣ್ಣುಮಗುವಿನ ಮೇಲಿರುವ ದೃಷ್ಟಿ ಬದಲಾಗಬೇಕು ಎಂದು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.

ಹೆಣ್ಣುಮಗುವಿಗೆ ಪ್ರಾಮುಖ್ಯತೆ: 

ಮನೆಯಲ್ಲಿ ಸಮಾಜದಲ್ಲಿ ಹೆಣ್ಣುಮಗುವಿಗೆ ಗೌರವ ಸಿಗಬೇಕು, ಯಾವುದೇ ತೊಂದರೆ ಆಗಬಾರದು, ಹೆಣ್ಣುಮಗು ಚೆನ್ನಾಗಿ, ಆಕೆಯಲ್ಲಿ ಹುಡುಗರಷ್ಟೇ ಸಾಮರ್ಥ್ಯ ಇದೆ ಎಂದು ತಿಳಿಸಲು ಸರ್ಕಾರ ಕೆಲವು ಯೋಜನೆಗಳನ್ನು ಸಹ ಜಾರಿಗೆ ತಂದಿದೆ. ಈ ಒಂದು ಯೋಜನೆಯಲ್ಲಿ ಹೆಣ್ಣುಮಗುವಿನ ತಂದೆ ತಾಯಿಗೆ 2 ಲಕ್ಷ ಸಿಗಲಿದೆ. ಮಗುವನ್ನು ಬೆಳೆಸಲು ಈ ಯೋಜನೆ ಸಹಾಯ ಮಾಡುತ್ತದೆ. ಮಗು ಜನಿಸಿದ ಕೂಡಲೇ ತಂದೆ ತಾಯಿ ಹಾಗೂ ಮಗು ಈ ಯೋಜನೆಗೆ ಅರ್ಹರಾಗುತ್ತಾರೆ.

ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Yojana):

ನಮ್ಮ ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯಬಾರದು, ಹೆಣ್ಣುಮಗುವಿಗೆ ಬದುಕುವ ಹಕ್ಕು ಇದೆ. ಎಂದು ಈ ಕೃತ್ಯವನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದು. ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ಒಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದ ಬಳಿಕ ₹50,000 ರೂಪಾಯಿಗಳ ಬಾಂಡ್ ಅನ್ನು ಮಗುವಿನ ಹೆಸರಿನಲ್ಲಿ ನೀಡಲಾಗುತ್ತದೆ. ಈ ₹50,000 ಹಣದಿಂದ ಮಗುವಿನ ಭವಿಷ್ಯವನ್ನು ಉತ್ತಮವಾಗಿಸಲು ಆಕೆಯ ಶಿಕ್ಷಣಕ್ಕೆ ಬಳಸಿಕೊಳ್ಳಬಹುದು.

ಪೋಷಕರಿಗೆ ಸಿಗುತ್ತದೆ 2 ಲಕ್ಷ:

ಮಗುವಿನ ತಂದೆ ತಾಯಿ ಕೂಡ ಈ ಯೋಜನೆಯಲ್ಲಿ ತಮ್ಮ ಮಗುವಿನ ಭವಿಷ್ಯಕ್ಕಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುತ್ತಾ ಬರಬಹುದು. ಮಗುವಿಗೆ 21 ವರ್ಷವಾದ ನಂತರ ಭಾಗ್ಯಲಕ್ಷ್ಮಿ ಬಾಂಡ್ ಇಂದ ಬರುಗ ಹಣ, ಮಗುವಿನ ತಂದೆ ತಾಯಿ ಹೂಡಿಕೆ ಮಾಡುವ ಹಣ ಎಲ್ಲವನ್ನು ಸೇರಿಸಿ ಒಟ್ಟು 2 ಲಕ್ಷ ರೂಪಾಯಿ ಮಗುವಿನ ತಂದೆತಾಯಿಯ ಕೈಸೇರುತ್ತದೆ. ಈ ಹಣವನ್ನು ಅವರು ತಮ್ಮ ಮಗಳ ವಿದ್ಯಾಭ್ಯಾಸಕ್ಕೆ ಅಥವಾ ಮದುವೆ ಮಾಡಲು ಬಳಸಿಕೊಳ್ಳಬಹುದು. ಇದರಿಂದ ತಂದೆ ತಾಯಿಗೆ ಹಾಗೂ ಮಗಳಿಗೆ ಮೂವರಿಗೂ ಅನುಕೂಲ ಆಗುತ್ತದೆ.

ಶಿಕ್ಷಣಕ್ಕಾಗಿ ಮತ್ತೊಂದು ಯೋಜನೆ:

ಹೆಣ್ಣುಮಗುವಿಗೆ ಶಿಕ್ಷಣ ಕೊಡಿಸುವುದು ತುಂಬಾ ಮುಖ್ಯ. ಒಬ್ಬ ಹೆಣ್ಣು ಕಲಿತರೆ ಆಕೆಯ ಇಡೀ ಕುಟುಂಬ ಕಲಿತ ಹಾಗೆ. ಆದರೆ ಆರ್ಥಿಕ ಸಮಸ್ಯೆಯ ಕಾರಣಕ್ಕೆ ಹಲವು ಹೆಣ್ಣುಮಕ್ಕಳಿಗೆ ಓದಲು ಸಾಧ್ಯ ಆಗುವುದಿಲ್ಲ. ಅಂಥ ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಮಾಡಲು ಸರ್ಕಾರ ಮುಂದಾಗಿದೆ. 6ನೇ ತರಗತಿಗೆ ₹3000, 8ನೇ ತರಗತಿಗೆ ₹5000, 10ನೇ ತರಗತಿಗೆ ₹7000, ಪಿಯುಸಿ ಓದುತ್ತಿರುವವರಿಗೆ ₹8000. ಈ ಯೋಜನೆಯಲ್ಲಿ ಒಟ್ಟು ₹23,000 ಹಣ ಪಡೆಯಬಹುದು..

ಈ ಯೋಜನೆಯ ಅನುಕೂಲ ಪಡೆಯುವುದು ಹೇಗೆ?

ಒಂದು ವೇಳೆ ನಿಮ್ಮ ಮನೆಯಲ್ಲೂ ಹೆಣ್ಣುಮಗುವಿದ್ದು, ನೀವು ಕೂಡ ಈ ಸೌಲಭ್ಯ ಪಡೆಯಬೇಕು ಎಂದರೆ, ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಈ ಬಗ್ಗೆ ಕೇಳಿ, ಮಾಹಿತಿ ಪಡೆದು, ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಈ ಯೋಜನೆಯ ಫಲಾನುಭವಿಗಳಾಗಲು ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು, ನಿಮ್ಮ ಮಗು 2006ರ ಮಾರ್ಚ್ 31ರ ನಂತರ ಹುಟ್ಟಿರಬೇಕು. ಅಂಗನವಾಡಿಯಲ್ಲಿ ನಿಮ್ಮ ಮಗುವಿನ ಬರ್ತ್ ಸರ್ಟಿಫಿಕೇಟ್, ಆಧಾರ್ ಕಾರ್ಡ್, ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್, ಫೋನ್ ನಂಬರ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಈ ದಾಖಲೆಗಳನ್ನು ನೀಡಿ ಯೋಜನೆಯ ಸೌಲಭ್ಯ ಪಡೆಯಬಹುದು.

Avail 2 lakh rupees of money from the Bhagyalakshmi Yojana. Here’s how to apply:

Leave a comment