Car Insurance: ಮಳೆಯ ಕಾರಣದಿಂದ ನಿಮ್ಮ ವಾಹನಗಳು ಹಾಳಾದಲ್ಲಿ ಇನ್ಶೂರೆನ್ಸ್ ಮೂಲಕ ಹಣ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯಿರಿ.
How to claim car insurance if the car is flooded with rainwater.
Car Insurance: ಸದ್ಯ ಭಾರತ ದೇಶದಲ್ಲಿ ಮಳೆಯ ಕಾರಣದಿಂದ ಅನೇಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಧಾರಾಕಾರ ಮಳೆಯ ಪ್ರಭಾವದಿಂದ ಜನರ ವಾಹನಗಳು ಮುಳುಗಿ ಹೋಗಿ ಜನರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೌದು ಮಳೆಯ ಕಾರಣದಿಂದ ವಾಹನಗಳ ಎಂಜಿನ್ ನಲ್ಲಿ ತೊಂದರೆಯಾಗುತ್ತಿದ್ದು ಮಾತ್ರವಲ್ಲದೆ ಗಾಡಿಗಳ ಕೆಲವು ಎಲೆಕ್ಟ್ರಿಕ್ ವಸ್ತುಗಳು ಸಹ ನಾಶವಾಗುತ್ತಿದೆ. ಇನ್ನು ಇದನ್ನು ಸರಿಪಡಿಸಲು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ.
ಇನ್ನು ಅನೇಕರು ತಾವು ಇನ್ಸೂರೆನ್ಸ್ ಮಾಡಿಸಿದ್ದು ಈ ರೀತಿ ಮಳೆಯ ಹವಾಮಾನ ಕಾರಣದಿಂದ ಗಾಡಿಗಳಲ್ಲಿ ತೊಂದರೆ ಎದುರಾದರೆ, ತಾವು ಮಾಡಿಸಿರುವ ಇನ್ಶೂರೆನ್ಸ್ ಕ್ಲೇಮ್ ಮಾಡಿಸಿಕೊಳ್ಳಬಹುದ ಎನ್ನುವ ಪ್ರಶ್ನೆ ಎದುರಾಗಿದೆ. ಇನ್ನು ಇದೇ ರೀತಿಯ ಸಾಕಷ್ಟು ಪ್ರಶ್ನೆಗಳು ಇದೀಗ ಅನೇಕರ ಮನಸ್ಸಿನಲ್ಲಿ ಮೂಡಿದ್ದು, ಇನ್ನು ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ…
ಮಳೆಯ ಕಾರಣದಿಂದ ರಸ್ತೆಯಲ್ಲಿ ನಿಂತಿರುವ ವಾಹನಗಳ ಇಂಜಿನ್ ಹಾಗೂ ಇನ್ನಿತರ ಎಲೆಕ್ಟ್ರಿಕ್ ವಸ್ತುಗಳು ನಾಶವಾಗುತ್ತಿದೆ. ಇನ್ನು ಈ ವಸ್ತುಗಳನ್ನು ಸರಿ ಮಾಡಿಸಿಕೊಳ್ಳಲು ಜನರು ಸುಮಾರು ಒಂದು ಲಕ್ಷದವರೆಗೆ ಹಣ ಖರ್ಚು ಮಾಡಬೇಕಿದೆ.
ಇನ್ನು ನೀವು ಎಲ್ಲಾ ರೀತಿಯ ಕಾರ್ ಇನ್ಶ್ಯುರೆನ್ಸ್ ಕವರ್ (Car insurance cover) ಮಾಡಿಸಿದ್ದರೆ, ನೀವು ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಇನ್ಶೂರೆನ್ಸ್ ಕ್ಲೇಮ್ ಮಾಡಿಸಿಕೊಳ್ಳಬಹುದು.
ಇನ್ನು ಯಾವುದೇ ಇನ್ಶೂರೆನ್ಸ್ ಪಡೆಯುವ ಮುನ್ನ ಪ್ರಕೃತಿ ವಿಕೋಪಗಳಲ್ಲಿ ತೊಂದರೆಗಳು ಎದುರಾದರೆ ಇನ್ಶೂರೆನ್ಸ್ ಕ್ಲೇಮ್ ಮಾಡಲು ಸಾಧ್ಯವೇ ಎನ್ನುವುದರ ಬಗ್ಗೆ ಮೊದಲು ತಿಳಿದುಕೊಳ್ಳಿ. ನಂತರ ಇನ್ಶೂರೆನ್ಸ್ ಮಾಡಿಸಲು ಮುಂದಾಗಿ. Comprehensive Car Insurance ವಿಮೆಯ ಮೂಲಕ ನೀವು ಸಾಕಷ್ಟು ಲಾಭವನು ಸಹ ಪಡೆಯಬಹುದು. (Comprehensive insurance total loss policy)
ಇನ್ನು ಈ ವಿಮೆಯನ್ನು ನೀವು ಪಡೆದಿದ್ದರೆ, ನೀವು ನಿಮ್ಮ ವಾಹನ ನೀರಿನಿಂದ ತುಂಬಿದ್ದರೆ ಅಥವಾ ಯಾವುದೇ ಸಮಸ್ಯೆ ಆಗಿದ್ದರೆ, ಮೊದಲು ನಿಮ್ಮ ವಾಹನದ ವಿಡಿಯೋ ಅಥವಾ ಒಂದು ಫೋಟೋವನ್ನು ತೆಗೆದುಕೊಳ್ಳಿ. ಏಕೆಂದರೆ ನೀವು ಇನ್ಶೂರೆನ್ಸ್ ಕ್ಲೇಮ್ ಮಾಡುವ ಸಮಯದಲ್ಲಿ ಆಧಾರದ ಜೊತೆಗೆ ಅದನ್ನ ಧಾಖಲಿಸಬೇಕಾಗುತ್ತದೆ.
ಇನ್ನು ಮಳೆಯ ಕಾರಣದಿಂದ ನಿಮ್ಮ ವಾಹನದಲ್ಲಿ ನೀರು ತುಂಬಿದ್ದರೆ ಯಾವುದೇ ಕಾರಣಕ್ಕೂ ಅಲ್ಲೇ ನಿಮ್ಮ ವಾಹನವನ್ನು ಸ್ಟಾರ್ಟ್ ಮಾಡಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಇಂಜಿನ್ ಒಳಗೆ ಇನ್ನಷ್ಟು ನೀರು ಸೇರಿ, ಇಂಜಿನ್ ಇನ್ನಷ್ಟು ಹಾಳಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೊಂಚ ಗಮನ ಹರಿಸಿ.